BelgaumDistrictsKarnatakaLatestLeading NewsMain Post

ಬಿಜೆಪಿಯವರಿಗೆ ಮಕ್ಕಳು ಹುಟ್ಟಿಸೋ ಶಕ್ತಿ ಇಲ್ಲ: ಸಿಎಂ ಇಬ್ರಾಹಿಂ

– ಬಿಜೆಪಿಯವರು ಬೀಜ ಇಲ್ದೆ ಇರುವವರು
– ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ

ಬೆಳಗಾವಿ: ಬಿಜೆಪಿ (BJP) ಅವರಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲ. ಬಿಜೆಪಿಯವರು ಬೀಜ ಇಲ್ಲದೇ ಇರುವವರು. ಇನ್ನೊಬ್ಬರ ಬೀಜ ತೆಗೆದುಕೊಂಡು ನಮ್ಮ ಬೀಜ ಅಂತಿದ್ದಾರೆ, ಅವರಿಗೆ ನಾಚಿಕೆ ಆಗಲ್ವಾ ಎಂದು ಬಿಜೆಪಿ ವಿರುದ್ಧ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ವ್ಯಂಗ್ಯವಾಡಿದ್ದಾರೆ.

ಜೆಡಿಎಸ್‍ನಿಂದ ಬಿಜೆಪಿ ಪಕ್ಷಕ್ಕೆ ಕೆಲವರು ಹೋಗುತ್ತಾರೆ ಎಂಬ ವಿಚಾರವಾಗಿ ಬೆಳಗಾವಿಯಲ್ಲಿ (Belgavi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಮಕ್ಕಳಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ. ನಾವು ಹುಟ್ಟಿಸಿದ ಮಕ್ಕಳನ್ನು ತೆಗೆದುಕೊಂಡು ಹೋಗುತ್ತಾರಲ್ಲ ಅವರೆಂತಹ ಗಂಡಸರು.. ಬಿಜೆಪಿಯವರು ಬೀಜ ಇಲ್ದೆ ಇರುವವರು. ಇನ್ನೊಬ್ಬರ ಬೀಜ ತೆಗೆದುಕೊಂಡು ನಮ್ಮ ಬೀಜ ಅಂತಿದೀರಾ. ನಾಚಿಕೆ ಆಗಲ್ವಾ? ಇದೇನಾ ಮೋದಿ (Modi) ನಿಮಗೆ ಕಲಿಸಿರುವುದು. ಇನ್ನೂ ನೂರು ಜನರನ್ನು ಕರೆದುಕೊಂಡು ಹೋದರೂ ಹುಟ್ಟಿಸುವ ಶಕ್ತಿ ನಮಗಿದೆ. ಅವರು ನೂರು ಜನ ಇದ್ದಾರೆ. ನೀವು ಒಬ್ಬರೇ ಎನು ಮಾಡುತ್ತೀರಾ? ನಾವು ರೈತರು ಐವತ್ತು ಆಕಳು ಕಟ್ಟಿದರೇ ಹೋರಿ ಒಂದೇ ಕಟ್ಟುವುದು. ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ (H.D.Kumaraswamy) ಮುಖ್ಯಮಂತ್ರಿ ಆಗುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸಿಬಿಐ (CBI), ಇಡಿ (ED) ಅವರಿಂದ ಬಿಜೆಪಿಯವರು ಹೆದರಿಸುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಕ್ಷೇತ್ರದಲ್ಲಿಯೂ ಜೆಡಿಎಸ್ ಸ್ಪರ್ಧಿಸುತ್ತಿದೆ. 123 ಸ್ಥಾನವನ್ನು ಜೆಡಿಎಸ್ ಗೆಲ್ಲುವ ಗುರಿ ಹೊಂದಿದ್ದು, ಅಧಿಕಾರಕ್ಕೆ ಬರುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ ಅಲ್ಲ ಸ್ಥಳೀಯ ಪಕ್ಷ, ರಾಜ್ಯದ ಜನರಿಗಾಗಿ ಹುಟ್ಟಿರುವ ಪಕ್ಷ, ಅಧ್ಯಕ್ಷ ಆದ ಬಳಿಕ ಸಭೆಗಳಿಗೆ ಜನರನ್ನು ನಾವು ತರುವುದಿಲ್ಲ ತಂದ ಜನರಿಗೆ ಭಾಷಣ ಮಾಡುವುದಿಲ್ಲ. 2023 ರಲ್ಲಿ ಕುಮಾರಸ್ವಾಮಿಯವರೇ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ದೇವೇಗೌಡರು ಜೀವಂತವಾಗಿ ಇರುವಾಗಲೇ ರೈತರಿಗಾಗಿ ಇರುವ ಕಾರ್ಯಕ್ರಮ ಈಡೇರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತ

HDK

ಬಿಜೆಪಿ ಮತ್ತು ಕಾಂಗ್ರೆಸ್ (Congress) ಒಬ್ಬರನ್ನೊಬ್ಬರು ಬೈಯುತ್ತಿದ್ದಾರೆ. ನಲವತ್ತು ಪರ್ಸೆಂಟ್ ಇವರು, ಇಪ್ಪತ್ತು ಪರ್ಸೆಂಟ್ ಅವರು. ರಾಹುಲ್ ಗಾಂಧಿ ನಡೆದುಕೊಂಡು ಬಂದರು, ನಡೆದುಕೊಂಡು ಹೋದರು, ಆದರೆ ಏನು ಸಂದೇಶ ಕೊಟ್ಟರು? ನಾವು ಕಾಂಗ್ರೆಸ್‍ಗೂ ಬೈಯುತ್ತಿಲ್ಲ, ಬಿಜೆಪಿಗೂ ಬೈಯುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಅಂತಾ ಹೇಳುತ್ತಿದ್ದೇವೆ. ನಿಮಗೆ ಕೊಟ್ಟ ಭರವಸೆ ಐದು ವರ್ಷದಲ್ಲಿ ಈಡೇರಿಸದಿದ್ದರೆ, ರಾಜೀನಾಮೆ ನೀಡಿ ನಿಮ್ಮ ಮುಂದೆ ಬರುವುದಿಲ್ಲ ಅಂತಾ ಹೇಳುತ್ತಿದ್ದೇವೆ. ಅವರಿಗೆ ಅನೇಕ ಸಲ ಅಧಿಕಾರ ಕೊಟ್ಟಿದೀರಿ ನಮಗೆ ಒಂದು ಸಲ ಅಧಿಕಾರ ಕೊಡಿ ಅಂತಾ ಕೇಳುತ್ತಿದ್ದೇವೆ. ಜಿಲ್ಲೆ, ಜಿಲ್ಲೆಯಲ್ಲಿ ಫೈನಲ್ ಆಗಿದ್ದವರೇ ನಮ್ಮ ಅಭ್ಯರ್ಥಿಗಳು. ಹೈಕಮಾಂಡ್‍ಗೆ ಬ್ಯಾಗ್ ಕೊಡಬೇಕಾಗಿಲ್ಲ, ಚೀಲ ಕೊಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಇಂದು ನಾಳೆ ಬೆಳಗಾವಿ, ಚಿಕ್ಕೋಡಿಯಲ್ಲಿ (Chikkodi) ಕಾರ್ಯಕರ್ತರ ಜೊತೆಗೆ ಸಭೆ ನಡೆಸುತ್ತಿದ್ದೇವೆ. ಮರಾಠ ಮತ್ತು ಲಿಂಗಾಯತ ಸಮಾಜದ ಜನರನ್ನು ನಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಟಿಕೆಟ್ ಹಂಚಿಕೆಯಲ್ಲಿ ಮರಾಠ, ಲಿಂಗಾಯತ, ಹಿಂದುಳಿದವರಿಗೆ ಪ್ರಾಮುಖ್ಯತೆ ಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಟಗರು ಗುದ್ದಿ ಕೊಟ್ಟಿಗೆಯಲ್ಲಿ ಲಾಕ್ ಆದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಅಂತ್ಯವಾಗದ ಆತಂಕ

ಪಂಚರತ್ನ ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷ ಆರಂಭಿಸಲಿದೆ. ಎಲ್‍ಕೆಜಿಯಿಂದ ಪಿಜಿವರೆಗೂ ಉಚಿತ ಶಿಕ್ಷಣ, ಪ್ರತಿ ಪಂಚಾಯಿತಿಯಲ್ಲಿ ಹೈಟೆಕ್ ಆಸ್ಪತ್ರೆಗಳು, ಪ್ರತಿಯೊಬ್ಬರಿಗೂ ವಾಸಿಸಲು ಮನೆ, ರಾಜ್ಯದ ಎಲ್ಲಾ ನೀರಾವರಿ ಯೋಜನೆ ಪೂರ್ಣ, ಮಹಿಳಾ ಸಬಲೀಕರಣ ಈ ಎಲ್ಲ ಯೋಜನೆಗಳನ್ನು ಜೆಡಿಎಸ್ ಅಧಿಕಾರಕ್ಕೆ ಬಂದ ಐದು ವರ್ಷದಲ್ಲಿಯೇ ಈಡೇರಿಸುತ್ತೇವೆ ಭರವಸೆ ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button