ತುಮಕೂರು: ಮಾಧುಸ್ವಾಮಿ ಮಾತು ಕೇಳಿ ಎಸ್.ಆರ್. ಶ್ರೀನಿವಾಸ್ ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಹಾಕಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆರೋಪಿಸಿದ್ದಾರೆ.
ಗುಬ್ಬಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸಭೆ ಚುನಾವಣೆಯಲ್ಲಿ ಎಸ್.ಆರ್ ಶ್ರೀನಿವಾಸ್ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ. ಒಬ್ಬ ಹೆಂಡತಿಗೆ ಒಬ್ಬನೇ ತಾಳಿ ಕಟ್ಟಬಹುದು. ಆದರೆ ಇಲ್ಲಿ ಒಬ್ಬ ಹೆಂಡತಿಗೆ ಇಬ್ಬಿಬ್ಬರು ತಾಳಿ ಕಟ್ಟಿದ್ದಾರೆ. ಇದರಲ್ಲಿ ಮಾಧುಸ್ವಾಮಿ ಕೈವಾಡ ಇದೆ. ಜೆಡಿಎಸ್, ಬಿಜೆಪಿ ಬಿ ಟೀಮ್ ಎನ್ನುವ ಕಾಂಗ್ರೆಸ್‍ನವರೇ ಬಿಜೆಪಿಗೆ ಸಹಕಾರ ನೀಡಿದ್ದಾರೆ. ಎರಡನೇ ಮತ ಕಾಂಗ್ರೆಸ್‍ಗೆ ಹಾಕಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: MVA ಸರ್ಕಾರವನ್ನು ಅಲುಗಾಡಿಸುತ್ತಿರುವ ಏಕನಾಥ್ ಶಿಂಧೆ ಯಾರು?
ಕಾಂಗ್ರೆಸ್‍ನ ಈ ನೀತಿಯನ್ನು ನಾನು ಖಂಡಿಸಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದೇನೆ. ನಿಮ್ಮ ನಾಯಕರು ಮೊದಲ ವೋಟು ಮೋದಿಗೆ ಹಾಕಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದೇನೆ. ಆದರೆ ಸೋನಿಯಾಗಾಂಧಿಯಿಂದ ರಿಪ್ಲೈ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ