ರಾಯಚೂರು: ಸಿಎಂ ಇಬ್ರಾಹಿಂ (CM Ibrahim) ದೊಡ್ಡ ನಾಯಕರು. ಆದರೆ ಸಹಾನುಭೂತಿ (Sympathy) ಗಿಟ್ಟಿಸಿಕೊಳ್ಳುವ ಮನೋಭಾವದಲ್ಲಿದ್ದಾರೆ. ಅದು ರಾಜಕೀಯದಲ್ಲಿ (Politics) ನಡೆಯುವುದಿಲ್ಲ ಎಂದು ರಾಯಚೂರು (Raichur) ನಗರ ಶಾಸಕ ಡಾ.ಶಿವರಾಜ್ ಪಾಟೀಲ್ (Dr. Shivaraj Patil) ಹೇಳಿದ್ದಾರೆ.
ಪಕ್ಷದಿಂದ ಉಚ್ಚಾಟಿಸಿ ಎನ್ನುವ ಸಿಎಂ ಇಬ್ರಾಹಿಂ ಹೇಳಿಕೆ ಕುರಿತು ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಜೆಡಿಎಸ್ ಪಕ್ಷದಲ್ಲಿ ಬಹುಮತ ಇದ್ದರೆ ಅವರೇ ರಾಜ್ಯಾಧ್ಯಕ್ಷರಾಗಲಿ. ಅವರಿಗೆ ಬಹುಮತ ಇಲ್ಲದಿದ್ದರೆ ರಾಜ್ಯಾಧ್ಯಕ್ಷ ಆಗುವುದಿಲ್ಲ. ಪಕ್ಷದಿಂದ ಉಚ್ಚಾಟಿಸಿ ಎಂದು ಹೇಳುವ ಮೂಲಕ ಸಿಂಪತಿ ಗಿಟ್ಟಿಸಿಕೊಳ್ಳುವ ಮನೋಭಾವದಲ್ಲಿದ್ದಾರೆ. ಅದು ತಪ್ಪು ಎಂದರು. ಇದನ್ನೂ ಓದಿ: ಅಕ್ರಮ ಹಣ ಪತ್ತೆ ಪ್ರಕರಣ ಸಿಬಿಐಗೆ ವಹಿಸಲಿ: ಅಶ್ವಥ್ ನಾರಾಯಣ್
Advertisement
Advertisement
ಇವತ್ತು ಅವರು ಯಾವ ಪಕ್ಷಕ್ಕೆ ಪರೋಕ್ಷವಾಗಿ ಬೆಂಬಲಿಸಬೇಕು ಅಂದುಕೊಂಡಿದ್ದಾರೆ, ಆ ಪಕ್ಷಕ್ಕೆ ಹೋಗುವುದಿದ್ದರೆ ಹೋಗಲಿ. ಆದರೆ ಈಗಿನ ಅವರ ಮನೋಭಾವ ರಾಜಕೀಯದಲ್ಲಿ ನಡೆಯಲ್ಲ. ಜನರಿಗೆ ಪ್ರತಿಯೊಂದು ಅರ್ಥವಾಗುತ್ತದೆ. ಯಾವ ನಾಯಕ, ಯಾವ ಪಕ್ಷ ಏನು ಮಾಡುತ್ತಿದೆ ಎನ್ನುವುದು ಅರ್ಥವಾಗಿದೆ. ಉಚ್ಚಾಟನೆ ಮಾಡಿ ಎಂದು ಹೇಳುವ ಮೂಲಕ ಸಿಎಂ ಇಬ್ರಾಹಿಂ, ನೀವು ವೀಕ್ ಇದ್ದೀರಾ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು: ಜಿಟಿ ದೇವೇಗೌಡ
Advertisement
Web Stories