ಕೊಪ್ಪಳ: ಬಿ.ಎಸ್ ಯಡಿಯೂರಪ್ಪ ಸೇದಿ ಬಿಸಾಕಿದ ಬೀಡಿ. ಬೀಡಿಯನ್ನು ಸೇದಿ ಎಸೆದಿದ್ದರು, ಇದೀಗ ಅದೇ ಬೀಡಿಯನ್ನು ಸೇದಲು ಹೊರಟಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಕ್ಕೆ ವ್ಯಂಗ್ಯವಾಡಿದರು. ಬಿಜೆಪಿಯವರು ಏನು ಮರ್ಯಾದೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಯನ್ನು ತೆಗೆದು ಹೊರಗೆ ಎಸೆದಿದ್ರು. ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದರು. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ
Advertisement
Advertisement
ಮುಂಬರುವ ದಿನಗಳಲ್ಲಿ ಜೆಡಿಎಸ್ ಪ್ರಬಲವಾಗಲಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಮುಸ್ಲಿಮರು, ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಂ ಒಕ್ಕಲಿಗರು ಒಂದಾಗಿದ್ದಾರೆ. ನವೆಂಬರ್ ತಿಂಗಳ ನಂತರ ನೋಡಿ ಜೆಡಿಎಸ್ ಏನು ಎಂಬುವುದು ಗೊತ್ತಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಎರಡು ರಾಷ್ಟೀಯ ಪಕ್ಷಗಳ ಮಧ್ಯೆ ಮೂರನೆಯ ಕಣ್ಣಾಗಿ ಜೆಡಿಎಸ್ ಬೆಳೆಯುತ್ತಿದೆ. 1994 ರಲ್ಲಿ ಇದ್ದ ಸ್ಥಿತಿ 2023 ಕ್ಕೆ ಜೆಡಿಎಸ್ ಗೆ ಉತ್ತಮ ಪ್ರತಿಕ್ರಿಯೆ ಇದೆ. 2023 ಕ್ಕೆ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ. ಸಾಬರು ಕ್ಯಾರೆ ಕಾಮ ಎಂದರೆ ಹೂವಾ ಸಾಬ ಎನ್ನುತ್ತಾರೆ. ನಾವು ಹೇಳಿದ ನಂತರ ಇದು ಸಾಧ್ಯ ಎಂದು ಇಬ್ರಾಹಿಂ ತಿಳಿಸಿದರು.