ಬೆಂಗಳೂರು: ಬಿಜೆಪಿ (BJP) ನಾಯಕರ ಜೊತೆ ಕುಮಾರಸ್ವಾಮಿ ಮಾತನಾಡಲು ಹೋದಾಗ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಎಂಬ ಸಿಟ್ಟಿನಿಂದ ಸಿಎಂ ಇಬ್ರಾಹಿಂ (CM Ibrahim) ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಜೆಡಿಎಸ್ (JDS) ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ತಿಳಿಸಿದ್ದಾರೆ.
ಒರಿಜಿನಲ್ ಜೆಡಿಎಸ್ ನಮ್ಮದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್‌ನಲ್ಲಿ ಯಾವುದೇ ಬಂಡಾಯ ಇಲ್ಲ. ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಇಬ್ರಾಹಿಂ ರಾಜೀನಾಮೆ ಕೊಟ್ಟರು. ಪಕ್ಷ ಸೋತಿದೆ ಅಂತ ರಾಜೀನಾಮೆ ಕೊಟ್ಟಿದ್ದರು. ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ಬೇಡ ಅಧ್ಯಕ್ಷನಾಗಿ ಮುಂದುವರಿ ಅಂತ ಹೇಳಿದ್ದರು. ಪ್ರೀತಿಯಿಂದ ಮುಂದುವರಿಯಿರಿ ಅಂತ ಹೇಳಿದ್ರು. ಮೈತ್ರಿ (Alliance) ವಿಚಾರವಾಗಿ ಜೆಪಿ ನಗರ ಮನೆಯಲ್ಲಿ ದೇವೇಗೌಡರು ಸಭೆ ಕರೆದಿದ್ದರು. ಅ ಸಭೆಗೆ ಇಬ್ರಾಹಿಂ ಬಂದು ಸಹಿ ಹಾಕಿದ್ರು. ಬಳಿಕ ಅರಮನೆ ಮೈದಾನದಲ್ಲಿ ನಡೆದ ಸಭೆಗೆ ಹಾಜರಿ ಇದ್ದರು, ಸಹಿ ಹಾಕಿದ್ರು. ದೇವೇಗೌಡರು ಘೋಷಣೆ ಮಾಡಿದ್ರು. ಅವತ್ತು ದೇವೇಗೌಡರ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ರು ಎಂದು ಮಾಹಿತಿ ನೀಡಿದರು.
Advertisement
Advertisement
ಅರಮನೆ ಮೈದಾನದ ಸಭೆಯಲ್ಲಿ ಬಿಜೆಪಿ ಜೊತೆ ಹೋಗೋಕೆ ವಿರೋಧ ಇಲ್ಲ ಅಂದ್ರು. ಆದರೆ ಅಧಿಕಾರ ಹಂಚಿಕೆ ವಿಚಾರ ಹೇಗೆ ಇರಬೇಕು ಅಂತ ನಿರ್ಧಾರ ಮಾಡಿ ಎಂಬ ಸಲಹೆ ಕೊಟ್ಟಿದ್ದರು. ಆದರೆ ಈಗ ಹೀಗೆಲ್ಲ ಮಾತನಾಡುತ್ತಿದ್ದಾರೆ. ದೇವೇಗೌಡರು ಹೇಳಿದ್ದಾರೆ. ನಾನೇ ಇಬ್ರಾಹಿಂ ಜೊತೆ ಮಾತನಾಡುತ್ತೇನೆ ಅಂತ. ಹೀಗಾಗಿ ಇಬ್ರಾಹಿಂ ಜೊತೆ ದೇವೇಗೌಡರು ಮಾತನಾಡುತ್ತಾರೆ ಎಂದರು.
Advertisement
ಇಬ್ರಾಹಿಂ ನನಗೂ ಕರೆ ಮಾಡಿ ನಾನೇ ದೇವೇಗೌಡರನ್ನು ಭೇಟಿ ಆಗುತ್ತೇನೆ ಎಂದು ಹೇಳಿದ್ದರು. ಸಭೆಗೆ ಶಾಸಕರಿಗೂ ಕರೆ ಮಾಡಿ ಕರೆದಿದ್ದರು. ಆದರೆ ಯಾರೂ ಹೋಗಿಲ್ಲ. ಮಹಿಮಾ ಪಟೇಲ್, ನಾಡಗೌಡರು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಂತ ಹೋಗಿದ್ದರು ಅನ್ನಿಸುತ್ತೆ ಎಂದರು.
Advertisement
ವಿಧಾನಸಭೆ ಚುನಾವಣೆ ಒಳಗೆ ನಮ್ಮನ್ನು ಮುಗಿಸಬೇಕು ಅಂತ ಎರಡು ರಾಷ್ಟ್ರೀಯ ಪಕ್ಷಕ್ಕೆ ಇತ್ತು. ಚುನಾವಣೆ ಆದ ಮೇಲೆ ಕಾಂಗ್ರೆಸ್ ಹೇಗಾದ್ರು ಮಾಡಿ ಜೆಡಿಎಸ್ ಮುಗಿಸಬೇಕು ಅಂತ ಕೆಲಸ ಮಾಡ್ತಿದೆ. ಆದರೆ ನಮ್ಮ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ. ನಾನು ಜಿಲ್ಲಾ ಪ್ರವಾಸ ಹೋದಾಗ ಬಿಜೆಪಿ ಜೊತೆ ಮೈತ್ರಿಗೆ ಒಪ್ಪಿಗೆ ಇದೆ ಅಂತ ಕಾರ್ಯಕರ್ತರು ಹೇಳಿದ್ದಾರೆ. ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದೇ ದೇವೇಗೌಡರು. ಅಲ್ಪಸಂಖ್ಯಾತ ನಾಯಕರನ್ನು ಬೆಳೆಸಬೇಕು ಅಂತ ರಾಜ್ಯಾಧ್ಯಕ್ಷ ಮಾಡಿದ್ದಾರೆ. ಇಬ್ರಾಹಿಂಗೆ ಒಂದು ಸಿಟ್ಟು ಇದೆ. ದೆಹಲಿಗೆ ನನ್ನನ್ನು ಕರೆದುಕೊಂಡು ಹೋಗಿಲ್ಲ ಅಂತ. ಅ ಸಿಟ್ಟಿನಿಂದ ಇಬ್ರಾಹಿಂ ಹೀಗೆ ಮಾತಾಡಿದ್ದಾರೆ ಅಷ್ಟೆ ಎಂದರು. ಇದನ್ನೂ ಓದಿ: ಒರಿಜಿನಲ್ ಅಂತ ಸಿಎಂ ಇಬ್ರಾಹಿಂ ಬೋರ್ಡ್ ಹಾಕಿಕೊಳ್ಳಲಿ: ಹೆಚ್‍ಡಿಕೆ
ಈಗ ಕೇವಲ ಮೈತ್ರಿ ಆಗಿದೆ ಅಷ್ಟೇ. ಸೀಟು ಹಂಚಿಕೆ ಇನ್ನು ಆಗಿಲ್ಲ. ನಾನೇ ಇಬ್ರಾಹಿಂ ಜೊತೆ ಮಾತಾಡ್ತೀನಿ. ನಾನೇ ಇಬ್ರಾಹಿಂ ಮನೆಗೆ ಹೋಗಿ ಪಕ್ಷದಲ್ಲಿ ಉಳಿಯಬೇಕು ಅಂತ ಮನವಿ ಮಾಡ್ತೀನಿ. ಪಕ್ಷ ಸಂಕಷ್ಟದಲ್ಲಿ ಇದೆ. ಈ ಸಮಯದಲ್ಲಿ ಈ ನಿರ್ಧಾರ ಬೇಡ. ನೀವೆ ಅಧ್ಯಕ್ಷರಾಗಿ ಇರಿ ಅಂತ ಮನವಿ ಮಾಡ್ತೀವಿ. ಜೆಡಿಎಸ್ ಯಾವುದೇ ಕಾರಣಕ್ಕೂ ಇಬ್ಭಾಗ ಆಗಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ.. ನನ್ನದು ಒರಿಜಿನಲ್ ಜೆಡಿಎಸ್: ಸಿಎಂ ಇಬ್ರಾಹಿಂ
Web Stories