ಕಾಂಗ್ರೆಸ್-ಬಿಜೆಪಿ ಮಧ್ಯೆ ಪೈಪೋಟಿ ನಡೀತಿದ್ದು, ನಾವು ವಿಭಿನ್ನವಾಗಿ ಹೋಗ್ತೇವೆ: ಸಿಎಂ ಇಬ್ರಾಹಿಂ

Advertisements

ರಾಯಚೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದೆ. ಆದರೆ ನಾವು ಅವರಿಗಿಂತ ವಿಭಿನ್ನವಾಗಿ ಹೋಗುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.

Advertisements

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರ ರತ್ನ ಜಾರಿಗೆ ತರುತ್ತೇವೆ. ಆ ಯೋಜನೆ ಈಗ ರಾಜ್ಯದ ಜನರ ಮುಂದೆ ಇಟ್ಟಿದ್ದೇವೆ. ಭಯ, ಹಸಿವು ಮುಕ್ತ ಕರ್ನಾಟಕ ಮಾಡುವ ಸಂಕಲ್ಪ. ನಾವು ಕೆಲಸ ಮಾಡದೇ ಇದ್ದರೆ ಪಕ್ಷ ವಿಸರ್ಜನೆ ಮಾಡ್ತೇವೆ. ಯಾವುದೇ ರಾಜಕೀಯ ಪಕ್ಷ ಇದುವರೆಗೂ ಈ ರೀತಿಯ ವಾಗ್ದಾನ ಮಾಡಿಲ್ಲ. ನಾವು ಎಲ್ಲಾ ನೀರಾವರಿ ಯೋಜನೆ ಮುಕ್ತಾಯಗೊಳಿಸ್ತೇವೆ ಎಂದು ವಾಗ್ದಾನ ಮಾಡಿದರು.

Advertisements

ಭಾರತ್ ಜೋಡೋ ಯಾತ್ರೆ (Bharat Jodo Yatre) ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರು ಬರುತ್ತಿದ್ದಾರೆ. ನಾವು ಬೇಡ ಜಂಗಮರು. ಕಾರ್ಯಕ್ರಮ ಇಟ್ಕೊಂಡು ನಾವು ಹೋಗ್ತಿದ್ದೇವೆ. ಕೆಲವರು ಜೈಲ್ ನಲ್ಲಿದ್ದಾರೆ, ಇನ್ನೂ ಕೆಲವರು ಬೇಲ್ ಮೇಲಿದ್ದಾರೆ. ನಮಗೆ ಯಾವುದೇ ಹೈಕಮಾಂಡ್ ಇಲ್ಲ. ತಮಾಷೆ ತೋರಿಸೋದು ನಮ್ಮಲ್ಲಿ ಇಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಅಭಿವೃದ್ಧಿ ನೋಡ್ಕೊಂಡು ಬನ್ನಿ- ರಾಹುಲ್ ಭೇಟಿಗೆ ಪ್ರತಾಪ್ ಸಿಂಹ ಲೇವಡಿ

ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ (Congress) ಜೋಡೋ ಎಂದ ಇಬ್ರಾಹಿಂ, ಮೊದಲು ಕಾಂಗ್ರೆಸ್ ಗೆ ಅಧ್ಯಕ್ಷರನ್ನ ಮಾಡೋದಕ್ಕೆ ಆಗ್ತಿಲ್ಲ. ನಮ್ದು ಬಿ ಟೀಂ ಅಂತಿದ್ರು, ಇವಾಗ ಅವರೇ ಬಿ ಟೀಂ ಆಗಿದ್ದಾರೆ. ಇವರೇ 12 ಜನ ಶಾಸಕರುಗಳನ್ನು ಕಳಿಸಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ (Rahul Gandhi) ಯವರು ಇಂದು ಅದನ್ನ ಹೇಳಬೇಕಿದೆ ಎಂದು ತಿಳಿಸಿದರು.

Advertisements

ಪಿಎಫ್‍ಐ (PFI) ಗೆ ಐದು ವರ್ಷಕ್ಕೆ ಡಿವೋರ್ಸ್ ಕೊಟ್ಟಿದ್ದಾರೆ. ಐದು ವರ್ಷ ಆದ್ಮೇಲೆ ಏನ್ಮಾಡ್ತಾರೆ, ಸರಿಹೋಗ್ತಾರಾ..? ಇವರೇನು ಸರ್ಕಾರ ನಡೆಸ್ತಿದ್ದಾರಾ..? ಪಿಎಫ್‍ಐ ಮೇಲೆ ಆರೋಪ ಇದ್ರೆ ಕಾನೂನು ಇದೆ. ಆರೋಪ ಸಾಬೀತಾದ್ರೆ ಗಲ್ಲಿಗೇರಿಸಿ. ಬ್ಯಾನ್ ಮಾಡೋದಕ್ಕೆ ಕಾರಣ ಬೇಕಿದೆ ಅದನ್ನ ತಿಳಿಸಿ. ಸಿಂದಗಿ ಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ರು, ಏನಾಯ್ತು..?. ಇವರಿಗೆ ಅಧಿಕಾರದ ಮದ ಏರಿದೆ. ವಿರೋಧ ಪಕ್ಷ ಇಲ್ಲ, ರಾಹುಲ್ ಗಾಂಧಿ ಎಳಸು. ಅದಕ್ಕೆ ಕೆಸಿಆರ್ ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್ ಸೇರಿ 2024ಕ್ಕೆ ಒಂದು ಪ್ಲಾನ್ ಮಾಡ್ತಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ (mallikarjun Kharge) ಎಐಸಿಸಿ (AICC) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ವಿಚಾರದ ಕುರಿತು ಮಾತನಾಡಿ, ಹಾಳೂರಿಗೆ ಉಳಿದೋನೇ ಗೌಡ ಎಂದು ಗೇಲಿ ಮಾಡಿದರು.

Live Tv

Advertisements
Exit mobile version