ಬೆಂಗಳೂರು: ಉಡುಪಿ ರೆಸಾರ್ಟಿನಲ್ಲಿ ಪ್ರಕೃತಿ ಚಿಕಿತ್ಸೆ ಮೊರೆ ಹೋಗಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಳೆದೆರಡು ದಿನಗಳಿಂದ ವಿಶ್ರಾಂತಿಯಲ್ಲಿದ್ದಾರೆ. ಕೇವಲ ಸಿಎಂ ವಿಶ್ರಾಂತಿ ಜೊತೆಗೆ ಮೈತ್ರಿ ಸರ್ಕಾರ ಉಳುಸಿಕೊಳ್ಳಲು ಹೊಸ ಆರಪೇಷನ್ ತಂಡವನ್ನೇ ರಚಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಉಡುಪಿಯ ರೆಸಾರ್ಟಿನಲ್ಲಿಯೇ ಕುಳಿತು 43 ನಾಯಕರ ಚಲನವಲನದ ಮೇಲೆ ಕಣ್ಣಿಡುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣಾ ಫಲಿತಾಂಶದ ನಿರೀಕ್ಷೆಯ ನಡುವೆಯೆ ತಮ್ಮ ಸರ್ಕಾರದ ವಿರುದ್ಧ ತೆರೆಮರೆಯ ಮಸಲತ್ತು ನಡೆಯುತ್ತಿದೆ ಎಂಬ ಅನುಮಾನ ಕುಮಾರಸ್ವಾಮಿಯವರನ್ನು ಕಾಡುತ್ತಿದೆ. ಹಾಗಾಗಿ ದೋಸ್ತಿಯ 30 ಮತ್ತು ವಿರೋಧ ಪಕ್ಷದ 13 ಶಾಸಕರ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡುತ್ತಿದ್ದಾರೆ. ಈ ಗುಪ್ತಚರ ಮಾಹಿತಿ ಸಂಗ್ರಹದ ಸಂದರ್ಭದಲ್ಲೇ ಸುಮಲತಾ ಹಾಗೂ ಕಾಂಗ್ರೆಸ್ ನಾಯಕರ ಗೌಪ್ಯ ಸಭೆಯ ಮಾಹಿತಿ ಸಿಎಂ ಗೆ ತಲುಪಿ ವಿಡಿಯೋ ಲೀಕ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಕೈ ಪಾಳಯ ಎಷ್ಟೇ ದೋಸ್ತಿ ಅಂದರು ಒಳಗೊಳಗೆ ಸರ್ಕಾರದ ವಿರುದ್ಧ ಏನೋ ಷಡ್ಯಂತ್ರ ನಡೆಸುತ್ತಿದೆ. ಇತ್ತ ಮೇ 23ರವರೆಗೆ ಕಾಯಲು ಸಿದ್ಧವಿಲ್ಲದ ಬಿಜೆಪಿ ಒಳಗೊಳಗೆ ಆಪರೇಷನ್ ಕಮಲದ ಪ್ರಯತ್ನ ನಡೆಸುತ್ತಿದೆ ಎಂಬ ಅನುಮಾನ ಸಿಎಂಗೆ ಬಂದಿದೆ. ಸರ್ಕಾರವನ್ನ ಸೇಫ್ ಮಾಡಿಕೊಳ್ಳಲು ಸಿಎಂ ಆಪರೇಷನ್ ಹದ್ದಿನಕಣ್ಣು 43 ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
Advertisement
ತಾವು ಎಲ್ಲೇ ಇದ್ದರು ವಿರೋಧಿಗಳ, ದೋಸ್ತಿ ನಾಯಕರ ಹಾಗೂ ಕೆಲವು ಶಾಸಕರ ಪ್ರತಿ ಚಲನವಲನದ ಇಂಚಿಂಚು ಮಾಹಿತಿ ತರಿಸಿಕೊಂಡು ಸಿಎಂ ರಾಜಕೀಯ ದಾಳ ಉರುಳಿಸುತ್ತಿದ್ದಾರೆ.