-ಬಿಜೆಪಿಗೆ ಶೀಘ್ರದಲ್ಲಿ ಸಿಹಿ ಸುದ್ದಿ ತಿಳಿಸುತ್ತೇನೆ
ಮೈಸೂರು: ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್ ನಲ್ಲಿ ಕರ್ನಾಟಕದ ಪ್ರಸ್ತಾವನೆಗಳು ಈಡೇರಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯಿಂದ ಕೇಂದ್ರದಿಂದ 200 ಕೋಟಿ ಬಂದ್ರೆ, ರಾಜ್ಯ ಸರ್ಕಾರ 800 ಕೋಟಿಯನ್ನು ಈ ಯೋಜನೆಗಾಗಿ ಮೀಸಲಿಟ್ಟಿದೆ. ನಮ್ಮ ಯೋಜನೆಗೆ ಮೋದಿ ಸರ್ಕಾರ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.
ಕೇಂದ್ರ ಸರ್ಕಾರ ತಿಂಗಳಿಗೆ 500 ರೂ. ಲೆಕ್ಕದಲ್ಲಿ ವಾರ್ಷಿಕವಾಗಿ 6 ಸಾವಿರ ರೂ. ನೀಡುತ್ತೇವೆ ಅಂತಾ ಹೇಳಿದೆ. ಈ ಯೋಜನೆಗೆ ಕರ್ನಾಟಕದ ಕೇವಲ 59 ಲಕ್ಷ ರೈತರು ಇದರ ಲಾಭ ಪಡೆಯಲಿದ್ದಾರೆ. ಕೆಲವು ಸಂಸ್ಥೆಗಳಿಗೆ ಇಂತಿಷ್ಟು ಹಣ ನೀಡಿದ್ರೆ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಯಾವ ಯೋಜನೆಯನ್ನು ನೀಡಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಆಯುಷ್ಮಾನ್ ಭಾರತ್, ಕರ್ನಾಟಕ ಆರೋಗ್ಯ ಶ್ರೀ ಯೋಜನೆಗಳಿಂದಾಗಿ ಯಶಸ್ವಿನಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಕೇಂದ್ರದ ಮನವಿ ಮೇರೆಗೆ ಕರ್ನಾಟಕ ಆರೋಗ್ಯ ಶ್ರೀ ಕಾರ್ಯಕ್ರಮವನ್ನು ಆಯುಷ್ಮಾನ್ ಭಾರತ್ ಜೊತೆ ವಿಲೀನಗೊಳಿಸಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಯಶಸ್ವಿನಿ ಯೋಜನೆಯನ್ನು ಪುನಃ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.
Advertisement
ಅಣ್ಣಾ ಕುಮಾರಣ್ಣ, ರವಿ ಪೂಜಾರಿಯನ್ನು ಬಂಧಿಸಿದ್ದು ನಮ್ಮ ಸಮ್ಮಿಶ್ರ ಸರ್ಕಾರವೇ ಎಂದು ತಮಗೆ ತಾವೇ ಕೀರ್ತಿ ಪಡೆಯುವ ಮೊದಲು, ಕಂಪ್ಲಿ ಶಾಸಕ ಗಣೇಶ್‌ರನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ. pic.twitter.com/CwLU4Mdgex
— BJP Karnataka (@BJP4Karnataka) February 2, 2019
Advertisement
ಬಿಜೆಪಿ ನನ್ನನ್ನು ಟ್ವೀಟ್ ನಲ್ಲಿ ಅಣ್ಣ ಎಂದು ಕರೆದಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ರವಿ ಪೂಜಾರಿ ತಲೆಮರೆಸಿಕೊಂಡು 15 ವರ್ಷಗಳೇ ಕಳೆದಿದೆ. ಈ ಹಿಂದೆ ಬಿಜೆಪಿ ಸಹ ಐದು ವರ್ಷ ಆಡಳಿತ ನಡೆಸಿದ್ದರೂ ರವಿ ಪೂಜಾರಿಯನ್ನು ಬಂಧಿಸಿಲ್ಲ. ಸೆನೆಗಲ್ ಅಧಿಕಾರಿಗಳೊಂದಿಗೆ ನಮ್ಮ ರಾಜ್ಯದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದರು. ಆದಷ್ಟು ಬೇಗ ಕಂಪ್ಲಿ ಶಾಸಕ ಗಣೇಶ್‍ರನ್ನು ಬಂಧಿಸಲಾಗುವುದು. ಯಾರನ್ನು ರಕ್ಷಿಸುವ ಪ್ರಯತ್ನ ಮಾಡುವುದಿಲ್ಲ. ಯಾರೇ ತಪ್ಪು ಮಾಡಿದ್ದರು ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ. ಗಣೇಶ್ ಬಂಧನ ವಿಚಾರವಾಗಿ ಬಿಜೆಪಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿಯನ್ನು ನೀಡುತ್ತೇವೆ ಎಂದು ಸಿಎಂ ತಿಳಿಸಿದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv