ಮಂಡ್ಯ: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಐದು ಜನ ಯಾರನ್ನಾದರೂ ಬಿಜೆಪಿಯಿಂದ ರಾಜೀನಾಮೆ ಕೊಡಿಸಬೇಕು, ಕೊಡಿಸ್ತೀವಿ ಎನ್ನುವ ಮೂಲಕ ಬಿಜೆಪಿಯ ಆಪರೇಷನ್ ಕಮಲಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ ಎಫೆಕ್ಟ್ ಇದೆಯಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಕ್ಕೆ ಜಾರಕಿಹೋಳಿ ಸಹೋದರರಿಂದ ಯಾವ ರೀತಿ ಎಫೆಕ್ಟ್ ಇದೆ. ಅವರೇನಾದರು ಹೇಳಿಕೆ ನೀಡಿದ್ದಾರಾ? ಅವರಿಗೆ ಅಸಮಾಧಾನ ಇರುವ ಬಗ್ಗೆ ನನಗೆ ಗೊತ್ತಿಲ್ಲ. ಕೇವಲ ಮಾಧ್ಯಮದಲ್ಲಿ ನೋಡುತ್ತಿದ್ದೇನೆ ಅಷ್ಟೇ. ಮಾಧ್ಯಮದಲ್ಲಿ ಬರುತ್ತಿರುವ ಬಿಸಿ ಬಿಸಿ ತಾಜಾ ಸುದ್ದಿ ಏನಿದೆ ಹೇಳಿ, ಸರ್ಕಾರ ಹೋಗೆ ಬಿಡ್ತು ಅಂತ ಹೇಳುತ್ತಿರುವುದನ್ನು ನೋಡುತ್ತಿದ್ದೇನೆ. ತೋಳ ಬಂತು, ತೋಳ ಬಂತು ಎಂಬ ಗಾದೆ ಮಾತಿದೆಯಲ್ಲ ಆ ರೀತಿ ವರ್ತಿಸುತ್ತಿದ್ದೀರಾ ಎಂದು ಹೇಳಿದರು
Advertisement
Advertisement
ಯಾರು ನಿಮಗೆ ಮಾಹಿತಿ ಕೊಡ್ತಾರೋ ಗೊತ್ತಿಲ್ಲ. ಅಲ್ಲೆಲ್ಲೋ ಹೈದರಾಬಾದ್‍ಗೆ 10 ಜನರ ಟೀಮ್, ಇಲ್ಲೆಲ್ಲೋ 10 ಜನರ ಟೀಮ್ ಅಂತೀರಿ. ಯಾರಾದರೂ ವರದಿ ಕೊಡಲಿ. ಮಾಧ್ಯಮಗಳು ಯಾವ ಉದ್ದೇಶ ಇಟ್ಟುಕೊಂಡು ಹೋಗುತ್ತಿದ್ದಾರೆ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲ್ಲಿ. ಬೇಕು ಅಂದರೆ ಸ್ವಲ್ಪ ದಿನ ನೋಡೋಣ. ಬೇರೆ ರೀತಿ ಯೂಟರ್ನ್ ತಗೋಬೇಕು ಅಂದರೆ ಐದು ಜನರನ್ನಾದರೂ ಬಿಜೆಪಿಯಿಂದ ರಾಜೀನಾಮೆ ಕೊಡಿಸಬೇಕು ಎನ್ನುವ ಮೂಲಕ ಬಿಜೆಪಿಯ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಿದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv