ರಾಮನಗರ: ಜೆಡಿಎಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಸುದ್ದಿಗಳನ್ನು ತಿರುಚಿ ಬಿತ್ತರಿಸುತ್ತಿವೆ ಎಂದು ಹೇಳಿ ಮತ್ತೊಮ್ಮೆ ಮಾಧ್ಯಮಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದಾರೆ.
ಶನಿವಾರ ನಡೆದ ಸಮಾರಂಭದಲ್ಲಿ ನಾನು ಕಣ್ಣೀರು ಹಾಕಿದ್ದು ಕಾಂಗ್ರೆಸ್ ನವರು ತೊಂದರೆ ಕೊಡುತ್ತಿದ್ದಾರೆ ಎಂದು ಅಲ್ಲ, ಅಲ್ಲದೇ ಕಾಂಗ್ರೆಸ್ ನಾಯಕರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. ಕಾಂಗ್ರೆಸ್ ನಿಂದ ತೊಂದರೆಯಾಗಿದೆ ಎಂದು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಅಲ್ಲದೇ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತೀದ್ದೀರಿ ಎಂದು ಹೇಳಿ ಮತ್ತೊಮ್ಮೆ ಮಾಧ್ಯಮದವರ ಮೇಲೆ ಸಿಎಂ ಗರಂ ಆಗಿದ್ದಾರೆ.
Advertisement
ನಾನು ಯಾರನ್ನು ಮೆಚ್ಚಿಸಲು ಕಣ್ಣೀರು ಹಾಕಿಲ್ಲ, ಇದಕ್ಕೇ ಮೂಲ ಕಾರಣ ಮಾಧ್ಯಮದವರು. ನೀವು ಸುದ್ದಿಗಳನ್ನು ತಿರುಚಿದ್ದೀರಿ. ಮೊದಲು ನೀವು ಆತ್ಮಾವಲೋಕ ಮಾಡಿಕೊಳ್ಳಿ. ಪದೇ ಪದೇ ನನ್ನ ಹತ್ತಿರ ಯಾರು ಬರಬೇಡಿ, ನನಗೆ ಯಾಕೆ ತೊಂದರೆ ಕೊಡುತ್ತಿದ್ದೀರಿ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ದೇವೇಗೌಡರಿಗೆ ಆದ ಸ್ಥಿತಿಯೇ ಕುಮಾರಸ್ವಾಮಿಗೂ ಆಗಲಿದೆ : ಸಮ್ಮಿಶ್ರ ಸರ್ಕಾರದ ವಿರುದ್ಧ ಅರುಣ್ ಜೇಟ್ಲಿ ವ್ಯಂಗ್ಯ
Advertisement
ಕೇಂದ್ರ ಸಚಿವ ಅರುಣ್ ಜೇಟ್ಲಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾನು ರಾಷ್ಟ್ರೀಯ ಮಾಧ್ಯಮಗಳಲ್ಲಿನ ಸುದ್ದಿಯನ್ನು ನೋಡಿದ್ದೇನೆ. ಆಡಳಿತ ನಡೆಸಲು ಕಾಂಗ್ರೆಸ್ ನನಗೆ ಮುಕ್ತ ಅವಕಾಶ ನೀಡಿದೆ. ಕಾಂಗ್ರೆಸ್ ನ ಅಧ್ಯಕ್ಷರಾದ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ನನಗೆ ಹೆಮ್ಮೆ ಇದೆ. ನನಗೆ ತೊಂದರೆಯಾಗಿರೋದು, ಮನಸ್ಸಿಗೆ ನೋವಾಗಿರೋದು ಬೇರೆ, ಕಾಂಗ್ರೆಸ್ ನಿಂದ ತೊಂದರೆಗಳಾಗಿಲ್ಲ ಎಂದು ಹೇಳಿದರು.
Advertisement
ನಾನು ಮಾಡಿರುವ ಕಾರ್ಯಕ್ರಮಗಳು ಸಾರ್ವಜನಿಕವಾಗಿ ತಲುಪುತ್ತಿಲ್ಲ ಎಂಬುದು ನನ್ನ ಚಿಂತೆಯಾಗಿದೆ. ಆದರೆ ನೀವು ಅದನ್ನೇ ತಿರುಚಿ ಸುದ್ದಿ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ನಾನು ದುರಂತ ನಾಯಕನೋ ಧೃಡನಾಯಕನೋ ನೀವೇ ನೋಡುತ್ತಿರಿ. ದುರಂತ ನಾಯಕನಾದರು ಸರಿಯೇ ತೊಂದರೆ ಇಲ್ಲ. ಆದರೆ ಧೃಡನಾಯಕರು ದೇಶಕ್ಕೆ ಏನು ಮಾಡಿದ್ದಾರೆ? ಅವರಿಂದ ನಾನು ಕಲಿಯಬೇಕಾ? ರೈತರ ಸಾಲಮನ್ನಾ ಪ್ರಧಾನಿ ಮೋದಿಯಿಂದಲೂ ಆಗಿಲ್ಲ, ಕುರ್ಚಿ ಭದ್ರತೆಗೆಗಾಗಿ ಸಾಲಮನ್ನಾ ಮಾಡಿಲ್ಲ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ನನ್ನ ಮೇಲೆ ಕನಿಕರ ಇಲ್ವಾ? ಯಾಕೆ ನನ್ನ ಮೇಲೆ ನಿಮಗೆ ಕೋಪ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ