– ಸುಮಲತ ಆರೋಪಕ್ಕೆ ನಾನು ಉತ್ತರ ಕೊಡೊಲ್ಲ
ಬೆಂಗಳೂರು: ವೋಟಿಂಗ್ ಮಿಷನ್‍ನಲ್ಲಿ ಮಾನ್ಯತೆ ಇರುವ ಪಕ್ಷದ ಹೆಸರು ಮೊದಲು ಕೊಡುತ್ತಾರೆ. ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮಾತ್ರ ಮಾನ್ಯತೆ ಇರುವ ಪಕ್ಷಗಳು ಹೀಗಾಗಿ ಆಲ್ಫಬೆಟ್ ಪ್ರಕಾರ ಸಂಖ್ಯೆ ಕೊಡುತ್ತಾರೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ವೋಟಿಂಗ್ ಮಿಷನ್‍ನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಹೆಸರು ಮೊದಲು ಇರುವುದಕ್ಕೆ ಸ್ಪಷ್ಟನೆ ನೀಡಿದರು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ ಹಾಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ನಾನು ಅಂತಹ ಆರೋಪಕ್ಕೆ ಗಮನ ಕೂಡ ಕೊಡುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
Advertisement
Advertisement
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನೀತಿ ನಿಯಮದ ಪ್ರಕಾರ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ತಪ್ಪುಕಂಡರೆ ಯಾರು ಬೇಕಾದರೂ ಕೋರ್ಟ್ ಗೆ ಹೋಗಲಿ ಎಂದು ಅವರು, ಬಿಜೆಪಿ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿತ್ತಿರುವುದು ಸಂತೋಷ. ಮಾಡಲಿ ಬಿಡಿ ಎಂದು ವ್ಯಂಗ್ಯವಾಡಿದರು.
Advertisement
ಇಂಗ್ಲೀಷ್ ಆಲ್ಫಬೆಟ್ ಪ್ರಕಾರ ಎ.ಸುಮಲತಾ ಅನ್ನೋ ನನ್ನ ಹೆಸರು ಇವಿಎಂನಲ್ಲಿ ಮೊದಲು ಇರಬೇಕಿತ್ತು. ನನಗೆ 20ನೇ ನಂಬರ್ ಕೊಡಲಾಗಿದ್ದು 2ನೇ ಇವಿಎಂನಲ್ಲೂ, `ಎನ್’ ಆಲ್ಫಬೆಟ್‍ನ ನಿಖಿಲ್ ಹೆಸರನ್ನು 1ನೇ ಇವಿಎಂನಲ್ಲೂ ಇಡಲಾಗಿದೆ ಎಂದು ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇದರ ಜೊತೆಗೆ ಬಿಎಸ್‍ಪಿ ಅಭ್ಯರ್ಥಿಗಳು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಪಕ್ಷ 8ನೇ ಪಕ್ಷವಾಗಿದೆ. ಪಕ್ಷದ ಆಲ್ಫಬೆಟ್ ನೋಡಿದರೆ ಬಿಎಸ್‍ಪಿಗೆ ಮೊದಲ ಸ್ಥಾನ ನೀಡಿ ಅಂತ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.