ಬೆಂಗಳೂರು: ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿರುವುದು ನಿಜ. ಆದ್ರೆ ಅಧಿಕಾರ ನನ್ನ ಕೈಯಲ್ಲಿದೆ ಅಂತ ಸಿಎಂ ಕುಮಾರಸ್ವಾಮಿಯವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ತಮ್ಮ ಮಾತಿನ ಮೇಲೆ ಹಿಡಿತವಿಟ್ಟುಕೊಳ್ಳಬೇಕು. ಅಪ್ಪ-ಮಕ್ಕಳು ಲೂಟಿ ಕೋರರು ಅಂತಾ ಹೇಳಿಕೆ ನೀಡಿದ್ದಾರೆ. ಯಾರು ಲೂಟಿ ಕೋರರು ಎಂಬುದನ್ನು ಮೊದಲು ತೋರಿಸಬೇಕು. ಈ ಹಿಂದೆಯೂ ಸಹ ನಮ್ಮನ್ನ ಜೈಲಿಗೆ ಕಳಿಸುತ್ತೀನಿ ಎಂದು ಅವರೇ ಜೈಲಿಗೆ ಹೋಗಿದ್ದರು. ಇಂದು ಡಿ.ಕೆ ಶಿವಕುಮಾರ್‍ರನ್ನು ಜೈಲಿಗೆ ಕಳುಹಿಸುತ್ತೀವಿ ಅಂತಾ ಹೇಳಿಕೆ ನೀಡುತ್ತಾರೆ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದರು.
Advertisement
Advertisement
ಯಡಿಯೂರಪ್ಪ ರಾಜಕೀಯದಲ್ಲಾಗಲಿ, ವಯಸ್ಸಿನಲ್ಲಾಗಲಿ ನಮಗಿಂತ ಹಿರಿಯರಾಗಿದ್ದಾರೆ. ಅವರು ಪದ ಬಳಕೆ ಮಾಡುವಾಗ ಸ್ವಲ್ಪ ಹಿಡಿತದಲ್ಲಿಟ್ಟುಕೊಳ್ಳಬೇಕು. ಪರ್ಸೆಂಟೇಜ್ ಸರ್ಕಾರವನ್ನು ತಂದವರೇ ನೀವು, ಪರ್ಸೆಂಟೇಜ್ ಪಿತಾಮಹ ಯಡಿಯೂರಪ್ಪನವರು. ಹೀಗೆ ನೀವು ನಿಮ್ಮ ಮಾತನ್ನು ಮುಂದುವರಿಸಿದರೆ ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ. ಗಾಜಿನ ಮನೆಯಲ್ಲಿ ಕೂತು ಕಲ್ಲುಹೊಡೆಯುವುದನ್ನು ಮೊದಲು ನಿಲ್ಲಿಸಿ ಎಂದು ಹೇಳಿದರು.
Advertisement
ಮೊದಲು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ, ನಿಮ್ಮ ಘನತೆಗೆ ತಕ್ಕ ಹಾಗೆ ಮಾತನಾಡಿ. ನಾನು ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಲೇ ಇದ್ದೇನೆ. ಮಾತನಾಡುವಾಗ ಬಹಳ ಎಚ್ಚರವಹಿಸಿ ಮಾತನಾಡಬೇಕು. ಅದು ನಿಮಗೆ ಶೋಭೆ ತರುವುದಿಲ್ಲ. ಲೂಟಿ ಕೋರರು ಯಾರು? ನೀವು ಮೊದಲು ಲೂಟಿಕೋರರು ಎಂದು ವಾಗ್ದಾಳಿ ನಡೆಸಿದರು.
Advertisement
ಆಪರೇಷನ್ ಕಮಲಕ್ಕೆ ಮುಂದಾಗಿರುವ ಅವರ ಬಳಿ ಈಗಾಗಲೇ 18 ಜನ ಇದ್ದಾರಂತೆ. ಅವರನ್ನೆಲ್ಲಾ ದೆಹಲಿಗೆ ಕರೆದುಕೊಂಡು ಹೋಗುತ್ತಾರಂತೆ. ಬುಧವಾರ ರಾತ್ರಿಯೂ ಸಹ ನಾಗಮಂಗಲ ಶಾಸಕ ಸುರೇಶ್ ಗೌಡರಿಗೆ ನೀವು ಬನ್ನಿ ಎಂದು ಕರೆದಿದ್ದಾರೆ. ಶಾಸಕ ಶಿವಳ್ಳಿಗೂ ಸಹ ಫೋನ್ ಮಾಡಿ ಬರಲು ಹೇಳುತ್ತಿದ್ದಾರೆ. ಎಲ್ಲಾ 18 ಶಾಸಕರನ್ನು ಮೊದಲು ಮುಂಬೈಗೆ ಕರೆದುಕೊಂಡು ಹೋಗಿ, ನಂತರ ಅಲ್ಲಿಂದ ಮಿಲಿಟರಿ ಪ್ರೊಟೆಕ್ಷನ್ ಮೂಲಕ ವಿಧಾನಸೌಧಕ್ಕೆ ಕರೆದುಕೊಂಡು ಬರುತ್ತೀವಿ ಎಂದು ಹೇಳಿದ್ದಾರಂತೆ ಎಂದು ಹೇಳಿದರು.
ಈವಾಗಲೂ ಸಹ ಬೋರಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ ಸಭೆ ನಡೆಸುತ್ತಿದ್ದಾರೆ. ನನಗೆ ಪ್ರತಿ ಕ್ಷಣದ ಮಾಹಿತಿಯೂ ಲಭ್ಯವಾಗುತ್ತೆ. ಹೈಕೋರ್ಟ್ ನಲ್ಲಿ ಶಿವರಾಂ ಕಾರಂತ ಬಡಾವಣೆ ಪ್ರಕರಣ ತನಿಖೆ ನಡೆಯುತ್ತಿದೆ. ನಾಳೆಯೇ ನಾನು ಏನು ಬೇಕಾದರೂ ಮಾಡಬಹುದು. ನನ್ನ ಕೈಯಲ್ಲಿ ಸರ್ಕಾರ ಇದೆ. ಶಾಸಕರನ್ನು ಸಂಪರ್ಕಿಸುತ್ತಿರುವುದು ನೀವು, ನಾನಲ್ಲ ಎಂದು ಬಿಎಸ್‍ವೈ ವಿರುದ್ಧ ಹರಿಹಾಯ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv