ಕೊಡಗಿಗೆ ಕೇಂದ್ರದಿಂದ 8 ಕೋಟಿ ಪರಿಹಾರ- 2 ಸಾವಿರ ಕೋಟಿ ರೂ. ಬಿಡುಗಡೆಗೆ ಮೋದಿಗೆ ಸಿಎಂ ಪತ್ರ

MODI CM

ಮಡಿಕೇರಿ: ಮಹಾಮಳೆಗೆ ತತ್ತರಿಸಿರುವ ಕೊಡಗಿಗೆ ಕೇಂದ್ರ ಸರ್ಕಾರ 8 ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿದೆ. ಇನ್ನು 2 ಸಾವಿರ ಕೋಟಿ ತುರ್ತು ನೆರವಿಗಾಗಿ ಸಿಎಂ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇತ್ತ ಸಿಎಂ ಪರಿಹಾರ ನಿಧಿಯಲ್ಲಿ 25 ಕೋಟಿ ಹಣ ಜಮೆಯಾಗಿದೆ.

ಕಂಡು ಕೇಳರಿಯದ ಮಳೆಗೆ ತತ್ತರಿಸಿರುವ ಕೊಡಗಿಗೆ ಕೇಂದ್ರ ಸರ್ಕಾರ ನೆರವಿನ ಭರವಸೆ ನೀಡಿದೆ. ಕೇಂದ್ರ ತಂಡ ಮಳೆಹಾನಿ ಸಮೀಕ್ಷೆ ನಡೆಸಿದ ನಂತರ ಪುನರ್ವಸತಿ ಪ್ಯಾಕೇಜ್ ಘೋಷಿಸಲಾಗತ್ತೆ ಅಂತಾ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ಸದ್ಯಕ್ಕೆ ರಕ್ಷಣಾ ವಿಭಾಗದ ಸಾರ್ವಜನಿಕ ನಿಧಿಯಿಂದ 7 ಕೋಟಿ, ಸಂಸದರ ನಿಧಿಯಿಂದ 1 ಕೋಟಿ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ವಿರುದ್ಧ ಸಾರಾ ಮಹೇಶ್ ಗರಂ

KODAGU

ಕೊಡಗಿನಲ್ಲಿ 3 ಸಾವಿರ ಕೋಟಿ ನಷ್ಟ ಆಗಿದೆ. ಹಾಗಾಗಿ ಪುನರ್ವಸತಿಗಾಗಿ 2 ಸಾವಿರ ಕೋಟಿ ತುರ್ತಾಗಿ ನೆರವು ನೀಡಿ ಎಂದು ಪ್ರಧಾನಿ ಮೋದಿಗೆ ಸಿಎಂ ಎಚ್‍ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಜೋರಾಯ್ತು ಫಂಡ್ ಪಾಲಿಟಿಕ್ಸ್!

ದೇಣಿಗೆ ವಿವರ ಹಾಗೂ ಜಮೆಯಾದ ಹಣ ಈ ಕೆಳಗಿನಂತಿದೆ:
ಡಿಡಿಯಲ್ಲಿ ಸಲ್ಲಿಕೆಯಾಗಿರುವ ಮೊತ್ತ- 13,59,90,418 ರೂ.
ಆನ್‍ಲೈನ್‍ನಲ್ಲಿ ಸಲ್ಲಿಕೆಯಾಗಿರುವ ಮೊತ್ತ- 9,06,99,390 ರೂ.
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ- 2,50,00,000. ರೂ.
ಒಟ್ಟು- 25,16,89,808 ರೂ.

KODAGU 1

ಇನ್ನು ಪ್ರವಾಹ ಸಂತ್ರಸ್ತ ಕೊಡಗು ಮತ್ತು ಇತರೇ ಜಿಲ್ಲೆಗಳ ಸಂತ್ರಸ್ತರಿಗೆ ನೆರವಾಗಲೆಂದು ಧನ ಸಹಾಯ ಮಾಡುವಂತೆ ಕರೆಕೊಡಲಾಗಿತ್ತು. ಆ ನಿಟ್ಟಿನಲ್ಲಿ ನಿನ್ನೆವರೆಗೆ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಡಿಡಿಯಲ್ಲಿ 13 ಕೋಟಿಯ 59 ಲಕ್ಷ ಮತ್ತು ಆನ್‍ಲೈನ್‍ನಲ್ಲಿ 9 ಕೋಟಿಯ 6 ಲಕ್ಷ, ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ 2 ಕೋಟಿಯ 50 ಲಕ್ಷ ಜಮೆಯಾಗಿದೆ. ಒಟ್ಟು 25 ಕೋಟಿಯ 16 ಲಕ್ಷದ 89 ಸಾವಿರ 808 ರೂಪಾಯಿ ಜಮೆಯಾಗಿದೆ. ಇದನ್ನೂ ಓದಿ: ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿ ವೇಳೆ ಸಾ.ರಾ.ಮಹೇಶ್ ಹಾಗೂ ನಿರ್ಮಲಾ ಸೀತಾರಾಮ್ ನಡುವೆ ಜಟಾಪಟಿ ಉಂಟಾಗಿತ್ತು. ಈ ಬಗ್ಗೆ ನಿರ್ಮಲಾ ಸೀತಾರಾಮ್ ಸಿಎಂ ಎಚ್‍ಡಿಕೆಗೆ ದೂರು ನೀಡಿದ್ದಾರೆ. ಸಚಿವರು ಪ್ರೋಟೋಕಾಲ್ ಪಾಲಿಸಿಲ್ಲ. ಸಚಿವರ ವರ್ತನೆ ಸಹಾ ಆಕ್ಷೇಪಾರ್ಹ ಎಂದು ಅಸಮಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಚಿವ ಸಾರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಗರಂ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

vlcsnap 2018 08 25 07h13m36s143

Comments

Leave a Reply

Your email address will not be published. Required fields are marked *