ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕರ ನಡುವೆ ನಡೆದ ಮಾರಾಮಾರಿ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್‍ರನ್ನು ಇಂದು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದರು. ನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿ ತೆರಳಿದರು.
ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ವಿಚಾರದಲ್ಲಿ ತುಮಕೂರಿನಲ್ಲಿ 2 ದಿನಗಳ ಕಾಲ ಇದ್ದ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿಗೆ ಆಗಮಿಸಿದ ಬಳಿಕ ಆನಂದ್ ಸಿಂಗ್‍ರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಆದರೆ ಸತತ 3 ದಿನಗಳ ಕಾಲ ಆನಂದ್ ಸಿಂಗ್ ಭೇಟಿಗೆ ಸಮಯ ನಿಗದಿ ಮಾಡಿದ್ದ ಸಿಎಂ ಅಂತಿಮ ಕ್ಷಣದಲ್ಲಿ ರದ್ದು ಮಾಡುತ್ತಿದ್ದರು. ಸಿಎಂ ಭೇಟಿ ನಿಗದಿ ಮಾಡಿ ಪೊಲೀಸರು ರಕ್ಷಣಾ ವ್ಯವಸ್ಥೆಗಳನ್ನು ಕೈಗೊಂಡ ಬಳಿಕ ಅಂತಿಮ ಕ್ಷಣದಲ್ಲಿ ಭೇಟಿ ರದ್ದು ಮಾಡಿದ ಮಾಹಿತಿ ನೀಡಲಾಗುತ್ತಿತ್ತು. ಸಿಎಂ ಅವರ ಈ ನಡೆಯಿಂದ ಕರ್ತವ್ಯದಲ್ಲಿದ್ದ ಶೇಷಾದ್ರಿಪುರಂ ಪೊಲೀಸರು ಪರದಾಟ ನಡೆಸಬೇಕಾಯಿತು.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ಇದರ ಬೆನಲ್ಲೇ ನಿಗದಿತ ಕಾರ್ಯಕ್ರಮದಂತೆ ಸಿಎಂ ಇಂದು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಸುಮಾರು 30 ನಿಮಿಷಗಳ ಕಾಲ ಆನಂದ್ ಸಿಂಗ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸಿಎಂ ಕುಮಾರಸ್ವಾಮಿ ಅವರಿಗೆ ಶಾಸಕ ಮುನಿರತ್ನ ಅವರು ಸಾಥ್ ನೀಡಿದ್ದರು.
Advertisement
ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸಿಎಂ ಕುಮಾರಸ್ವಾಮಿ ತೆರಳಿದರು. ಇದಕ್ಕೂ ಮುನ್ನ ಇಂದು ಆನಂದ್ ಸಿಂಗ್‍ರನ್ನು ಭೇಟಿ ಮಾಡಿದ್ದ ಸಚಿವ ಪರಮೇಶ್ವರ್ ನಾಯ್ಕ್, ಆನಂದ್ ಸಿಂಗ್ ಅವರ ಆರೋಗ್ಯ ಉತ್ತಮವಾಗಿದೆ. ಅವರು ಕಣ್ಣು ಬಿಟ್ಟು ನನ್ನೊಂದಿಗೆ ಮಾತನಾಡಿದ್ದಾರೆ. ಯಾವುದೋ ಒಂದು ಆಚಾತುರ್ಯದಿಂದ ಘಟನೆ ನಡೆದಿದ್ದು, ಅಂದು ನಾನು ಸ್ಥಳದಲ್ಲಿ ಇದ್ದಿರಲಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv