ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಭಿನ್ನಮತ ಭುಗಿಲೆದಿದ್ದು, ಕಾಂಗ್ರೆಸ್ ನಾಯಕರ ನಡೆಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಿನದಿಂದ ದಿನ ಕೈ ನಾಯಕರು ವರಸೆ ಬದಲಾಯಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನ ರಾಜ್ಯ ಮತ್ತು ದೆಹಲಿ ನಾಯಕರ ವರ್ತನೆ ಬಗ್ಗೆ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಮೈತ್ರಿ ಮಾಡ್ಕೊಂಡ ಕಾಂಗ್ರೆಸ್‍ಗೆ ಮೊದಲ ಬಿಗ್ ಶಾಕ್ ಕೊಟ್ಟ ಶಾಸಕ ರವೀಂದ್ರ ಶೀಕಂಠಯ್ಯ
Advertisement
ಈ ಮೊದಲು ಕಾಂಗ್ರೆಸ್ ಜೆಡಿಎಸ್ ಗೆ ಬೇಷರತ್ ಬೆಂಬಲ ಎಂದು ಘೋಷಿಸಿದ್ದು, ಕುಮಾರಸ್ವಾಮಿ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಟ್ಟಿತ್ತು. ನಂತರ ತಾನೇ ಡಿಸಿಎಂ ಹುದ್ದೆ ಪಡೆದುಕೊಂಡಿದೆ. ಈ ಹಿಂದೆ 34 ಸಚಿವ ಸಂಪುಟ ಸ್ಥಾನಗಳ ಪೈಕಿ ಉಭಯ ಪಕ್ಷಗಳು ತಲಾ 17 ಸ್ಥಾನಗಳನ್ನು ಹಂಚಿಕೊಳ್ಳಲು ನಿರ್ಧಾರ ಮಾಡಿತ್ತು. ನಂತರ 22 ಸ್ಥಾನಗಳಿಗೆ ಒತ್ತಡ ಹೇರಿ, 12 ಸ್ಥಾನಗಳನ್ನು ಮಾತ್ರವೇ ಜೆಡಿಎಸ್ ಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಇದನ್ನೂ ಓದಿ: 5 ದಿನಕ್ಕೆ ಸಾಕಾಯ್ತಾ ಕುಮಾರಸ್ವಾಮಿಗೆ ಕಾಂಗ್ರೆಸ್ ಸಖ್ಯ?
Advertisement
ಈಗ ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳು ಬೇಕು ಅಂತ ಕಾಂಗ್ರೆಸ್ ನಾಯಕರು ಜೆಡಿಎಸ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಎಲ್ಲ ಬೆಳವಣಿಗಳಿಂದ ಕೈ ನಾಯಕರ ವಿರುದ್ಧ ಕುಮಾರಸ್ವಾಮಿ ತೀವ್ರವಾಗಿ ಅಸಮಾಧಾನಗೊಂಡಿದ್ದು, ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement