– ಹೋಮದ ವಿಶೇಷತೆ ಏನು?
ಚಿಕ್ಕಮಗಳೂರು: ದೊಡ್ಡ ಗೌಡರ ಕುಟುಂಬ ಶೃಂಗೇರಿಯಲ್ಲಿ ನಡೆಸಿದ ಯಾಗಕ್ಕೆ ವಿಘ್ನ ಉಂಟಾದ ಹಿನ್ನೆಲೆಯೇ ಕುಮಾರಸ್ವಾಮಿಗೆ ಅಧಿಕಾರದಲ್ಲಿ ತೊಡಕೆಂದು ಭಾವಿಸಿರೋ ದೇವೇಗೌಡರು ಇಂದು ಶೃಂಗೇರಿಯಲ್ಲಿ ದೋಷ ನಿವಾರಣೆಗೆಂದು ಪ್ರತಿಶೂಲಿಕಾ ಯಾಗ ಮಾಡಿಸಲಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೆಂದು ಶೃಂಗೇರಿ ಶಾರದಾಂಭೆ ಸನ್ನಿಧಿಯಲ್ಲಿ ಜನವರಿ 3 ರಿಂದ 14ರವರೆಗೆ 11 ದಿನ ಅತಿರುದ್ರ ಮಹಾಯಾಗ ನಡೆಸಿದ್ದರು. ಆದ್ರೆ, ಯಾಗದ 7 ನೇ ದಿನ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ತಾಯಿ ಮೃತರಾಗಿದ್ರು. ಹೀಗಾಗಿ ಯಾಗದ ಮಧ್ಯದಲ್ಲೇ ಅಂತ್ಯ ಸಂಸ್ಕಾರದಲ್ಲಿ ದೇವೇಗೌಡರ ಕುಟುಂಬ ಭಾಗಿಯಾಗಿತ್ತು. ಬಳಿಕ ದೊಡ್ಡಗೌಡರ ಕುಟುಂಬ ಪುನಃ ಯಾಗದಲ್ಲಿ ಪಾಲ್ಗೊಂಡಿತ್ತು.
Advertisement
Advertisement
ಸಾವಿನ ಸೂತಕದಿಂದ ಯಾಗಕ್ಕೆ ವಿಘ್ನ ಉಂಟಾಗಿದೆ. ಅದಕ್ಕಾಗಿಯೇ ಕುಮಾರಸ್ವಾಮಿಗೆ ಪದೇ ಪದೇ ತೊಂದರೆ ಎದುರಾಗುತ್ತಿದೆ ಎಂದು ಗೌಡರ ಕುಟುಂಬ ಭಾವಿಸಿದೆಯಂತೆ. ಹೀಗಾಗಿಯೇ ಇಂದು ಸಿಎಂ ಸೇರಿದಂತೆ ದೇವೇಗೌಡರ ಕುಟುಂಬ ಶೃಂಗೇರಿಯಲ್ಲಿ ದೋಷ ನಿವಾರಣೆಗೆ ಪೂಜೆ ಮಾಡಿದ್ದಾರೆ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ದೇವೇಗೌಡರು, ಚನ್ನಮ್ಮ ಹಾಗೂ ರೇವಣ್ಣ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ರು. ಕುಮಾರಸ್ವಾಮಿ ನಿಯೋಜಿತ ಸಿಎಂ ಆಗಿದ್ದಾಗ್ಲೂ ಇಲ್ಲೇ ಏಕ ಚಂಡಿಕಾ ಯಾಗ ನಡೆಸಲಾಗಿತ್ತು. ಈಗ ಶೃಂಗೇರಿ ಮಠದ ಪೀಠಾಧಿಪತಿಗಳನ್ನು ಸಿಎಂ ಕುಟುಂಬ ಭೇಟಿ ಮಾಡಿದೆ.
Advertisement
ಪ್ರತ್ಯಂಗಿರಾ ಹೋಮದ ವಿಶೇಷತೆ ಏನು..?
* ಪ್ರತ್ಯಂಗಿರಾ ಹೋಮದಿಂದ ರಾಜ್ಯ ಗೆಲ್ಲುವ ಶಕ್ತಿ
* ಯುದ್ಧಕ್ಕೂ ಮೊದಲು ರಾಜ ಮಹಾರಾಜರು ಮಾಡುತ್ತಿದ್ದ ಯಾಗವಿದು
* ಶತ್ರುಸಂಹಾರಕ್ಕಾಗಿ ಗ್ರಾಮದ ಹೊರಗೆ ಹೋಗಿ ಮಾಡುತ್ತಿದ್ದ ಹೋಮ
* ಪ್ರತ್ಯಂಗಿರಾ ಹೋಮ ಮಾಡಿದ ಚಕ್ರವರ್ತಿಗಳು ಯುದ್ಧದಲ್ಲಿ ಸೋತ ಉದಾಹರಣೆ ಕಡಿಮೆ
* ಹದಿನಾರು ಪುರೋಹಿತರು ಶಕ್ತಿ ದೇವತೆ ಆವಾಹನೆ ಮಾಡಿ ಶತ್ರು ಸಂಹಾರ ಮಾಡುವ ಪೂಜೆ
* ಹದಿನಾರು ಪದಾರ್ಥಗಳನ್ನು ಕುಂಡಕ್ಕೆ ಹಾಕಿ ಪ್ರತ್ಯಂಗಿರಾ ಹೋಮ
* ಹೋಮ ಕುಂಡಕ್ಕೆ ಮುಷ್ಟಿಯ ಮೂಲಕವೇ ದೃವ್ಯಗಳನ್ನು ಹಾಕಲಾಗುತ್ತೆ.
* ಹದಿನಾರು ಬಗೆಯ ಅನ್ನವನ್ನು ಮಾಡಿ ದೇವಿಗೆ ನೈವೇದ್ಯ ಅರ್ಪಿಸಲಾಗುತ್ತೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv