ಬೆಂಗಳೂರು: ನಮ್ಮ ಬಜೆಟ್ ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮದು ಸಮಗ್ರ ದೃಷ್ಟಿಕೋನದ ಬಜೆಟ್. ಪ್ರತಿಭಟನೆ ಮಾಡುತ್ತಿರೋ ಮಂದಿಗೆ ಇದು ಅರ್ಥವಾಗೋದಿಲ್ಲ ಅಂದರೆ ಏನು ಮಾಡೋಕೆ ಆಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಾಬು ಜಗಜೀವನ್ ರಾಂ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸನ್ಮಾನ್ಯ ಸಿದ್ದರಾಮಯ್ಯ ಅವರು 2018-19ರ ಬಜೆಟ್ ಗೆ ಫೆಬ್ರವರಿ ತಿಂಗಳಿನಲ್ಲಿ ಯಾವ ರೀತಿಯಲ್ಲಿ ಹಣವನ್ನು ಆಯವ್ಯಯದಲ್ಲಿ ಕೊಟ್ಟಿದ್ದಾರೆ. ಎಲ್ಲಾ ಭಾಗಕ್ಕೂ ಹಣ ಏನಿದೆ? ಅದು ಯಾವುದನ್ನು ನಾವು ತೆಗೆದಿಲ್ಲ ಎಲ್ಲ ಮುಂದುವರಿದೆ. ಅಲ್ಪ ಸಂಖ್ಯಾತರಿಗೂ ಇಂದು ಸಿದ್ದರಾಮಯ್ಯ ಬಜೆಟ್ ನಲ್ಲಿ ಏನಿದೆ? ಅದೆಲ್ಲವನ್ನೂ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.
Advertisement
Advertisement
ಮೀನುಗಾರರಿಗೆ 282 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದೇವೆ. ಮೀನುಗಾರಿಗೆ ಎಲ್ಲಿ ನಾನು ಅನ್ಯಾಯ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆಗೆ 75 ಕೋಟಿ ರೂ. ಇಟ್ಟಿದ್ದೇವೆ. ಇನ್ನು ಮಂಗಳೂರು ಬಂದರಿಗೆ 50 ಕೋಟಿ ರೂ. ಇಟ್ಟಿದ್ದಾರೆ ಅದೆಲ್ಲವನ್ನು ಮುಂದುವರೆಸಿದ್ದೇನೆ. ಅದೆಲ್ಲವನ್ನೂ ಅವರಿಗೆ ಓದಲಿಕ್ಕೆ ಸಮಯ ಇಲ್ಲವೆಂದರೆ, ಕನ್ನಡ ಅರ್ಥವಾಗಲಿಲ್ಲ ಅಂದರೆ ನಾನೇನು ಮಾಡಲಿ. ನಮ್ಮದು ಮೂರು – ನಾಲ್ಕು ಜಿಲ್ಲೆಯ ಬಜೆಟ್ ಅಲ್ಲ. ಸಮಗ್ರ ಕರ್ನಾಟಕ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಇದು. ಸದನದಲ್ಲಿ ಚರ್ಚೆ ನಡೆಸಲಿ. ನಾನು ಉತ್ತರ ಕೊಡೋಕೆ ರೆಡಿ ಇದ್ದೀನಿ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
Advertisement