ಬೆಂಗಳೂರು: ನಗರದ ಎಂಎಸ್‍ಐಎಲ್ ಜಾಗವನ್ನ ಟೆಂಡರ್ ಕರೆಯದೇ ಬಾಡಿಗೆ ನೀಡಲು ಮುಂದಾದ ಸಚಿವ ಜಾರ್ಜ್ ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ತಡೆ ನೀಡಿದ್ದು, ವಿವರ ಪಡೆದು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಕ್ರಮವಾಗಿ ಎಂಎಎಸ್‍ಐಎಲ್ ಜಾಗವನ್ನು ಬಾಡಿಗೆ ನೀಡಲು ಮುಂದಾಗಿದ್ದ ಸಚಿವ ಜಾರ್ಜ್ ಕ್ರಮದ ಬಗ್ಗೆ ಗುರುವಾರ ಸಂಜೆ ಪಬ್ಲಿಕ್ ಟಿವಿ ವಿಸೃತವಾಗಿ ಸುದ್ದಿ ಪ್ರಸಾರ ಮಾಡಿತ್ತು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳಲ್ಲಿ ಬಂದ ಸುದ್ದಿ ನಾನು ನೋಡಿದ್ದೇನೆ. ಈ ಬಗ್ಗೆ ಮಾಹಿತಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ. ಸರ್ಕಾರದ ಭೂಮಿಗಳನ್ನ ಸ್ವೇಚ್ಛಾಚಾರವಾಗಿ ಕೊಡಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇತ್ತ ಜಾಗದ ಲೀಸ್ ಸಂಬಂಧ ತೀರ್ಮಾನ ಮಾಡಲು ಇಂದು 11.30ಕ್ಕೆ ನಿಗದಿಯಾಗಿದ್ದ ಅಧಿಕಾರಿಗಳ ಸಭೆಯನ್ನು ಮುಂದೂಡಲಾಗಿದೆ.
Advertisement
Advertisement
ಇದೇ ವೇಳೆ ವಿಧಾನಸೌಧದಲ್ಲಿ ಲಕ್ಷ ಲಕ್ಷ ಹಣ ಸಿಕ್ಕ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿ, ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುತ್ತೇನೆ. ಅಲ್ಲದೇ ಈ ಬಗ್ಗೆ ಸ್ವಲ್ಪ ಸಮಯ ಬೇಕಾಗಿದೆ. ನಾನು ಕಾನೂನು ಬದ್ಧವಾಗಿಯೇ ತೀರ್ಮಾನ ಮಾಡುತ್ತೇನೆ. ಯಾರಿಗೂ ರಕ್ಷಣೆ ಕೊಡುವ ಹಾಗೂ ತಪ್ಪು ಮುಚ್ಚಿ ಹಾಕುವ ಕೆಲಸ ನಾನು ಮಾಡುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ತಪ್ಪು ಮುಚ್ಚಿ ಹಾಕುವ ಕೆಲಸ ನಾನು ಮಾಡಿಲ್ಲ. ಕಾನೂನಿನ ಅನ್ವಯ ಕ್ರಮ ಖಚಿತ ಎಂದು ಭರವಸೆ ನೀಡಿದರು.
Advertisement
ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಲು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಅದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ, ಅವರ ಭವಿಷ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದರು. ಇದನ್ನು ಓದಿ: BIG EXCLUSIVE: ಕೋಟಿ ಕೋಟಿ ಬೆಲೆ ಬಾಳೋ ಸರ್ಕಾರಿ ಜಾಗ ಜುಜುಬಿ ಕಾಸಿಗೆ ಬಿಕರಿ – ಸಚಿವ ಕೆಜೆ ಜಾರ್ಜ್ ಬಂಟರ ಗುಂಡಾಗಿರಿ
Advertisement
ಪುತ್ರ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ಕೆಲ ಅಭಿಮಾನಿಗಳು ಸ್ಪರ್ಧೆ ಬಗ್ಗೆ ಕೇಳಿದ್ದಾರೆ. ಮುಂದೆ ಈ ವಿಚಾರ ತೀರ್ಮಾನ ಮಾಡುತ್ತೇವೆ ಎಂದು ಹೇಳಿ ನಿಖಿಲ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
ನಿಗಮ-ಮಂಡಳಿ ನೇಮಕಕ್ಕೆ ತಡೆ ನೀಡಿರುವ ತಮ್ಮ ಕ್ರಮವನ್ನು ಎಚ್‍ಡಿಕೆ ಸಮರ್ಥನೆ ಮಾಡಿಕೊಂಡಿದ್ದು, ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಇದನ್ನ ತಡೆ ಹಿಡಿಯಲಾಗಿದೆ. ಬಹಿರಂಗವಾಗಿ ಈ ಕುರಿತು ಚರ್ಚೆ ಮಾಡುವುದು ನನಗೆ ಶೋಭೆ ತರುವುದಿಲ್ಲ. ಅಲ್ಲದೇ ಸರಿಯಾದ ಜಾಗದಲ್ಲಿ ಮಾತನಾಡುತ್ತೇನ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv