ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಉಳಿವಿನ ವಿರುದ್ಧ ಶಂಕೆ ವ್ಯಕ್ತಪಡಿಸಿ ತಮ್ಮ ಕರ್ತವ್ಯ ಮಾಡಲು ಅಸಡ್ಡೆ ಪ್ರದರ್ಶಿಸುತ್ತಿರುವ ಕೆಲ ಇಲಾಖೆಗಳ ಅಧಿಕಾರಿಗಳಿಗೆ ಚಾಟಿ ಬೀಸಿ ತಮ್ಮಷ್ಟು ಕಠಿಣವಾಗಲಿದ್ದೇನೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ನಾನು ನಿರಂತರವಾಗಿ ಎಲ್ಲಾ ಸಚಿವರೊಂದಿಗೆ ಸಂಪರ್ಕದಲ್ಲಿದ್ದು ಯೋಜನೆಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲು ಇಚ್ಛಿಸಿದ್ದೇನೆ. ಇಂದು ಮಹದಾಯಿ ತೀರ್ಪಿನ ಸಾಧಕ ಭಾದಕಗಳ ಬಗ್ಗೆ ನೀರಾವರಿ ಸಚಿವ ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ ಮಾತಾನಾಡಲಿದ್ದೇನೆ. ಸರ್ಕಾರದ ಜವಾಬ್ದಾರಿಯುತವಾಗಿ ನಡೆಯಲು ಸೋಮವಾರದಿಂದ ಇಲಾಖೆಗಳ ಪ್ರತ್ಯೇಕ ಸಭೆ ನಡೆಸಲಿದ್ದೇನೆ ಎಂದರು.
Advertisement
Advertisement
ಇದೇ ವೇಳೆ ಬಿಎಸ್‍ವೈ ಅವರಿಗೆ ಟಾಂಗ್ ನೀಡಿದ ಎಚ್‍ಡಿಕೆ, ರಾಜ್ಯ ವಿರೋಧಿ ಪಕ್ಷದ ನಾಯಕರಿಗೆ ಇಂತಹ ಕಾರ್ಯಗಳು ಬೇಕಿಲ್ಲ. ಅವರು ತಮ್ಮದೇ ಕಾರ್ಯದಲ್ಲಿದ್ದಾರೆ. ಸಚಿವರಲ್ಲಿ ಯಾವುದೇ ಬಂಡಾಯವಿಲ್ಲ. ಜಾರಕಿಹೊಳಿ ಅವರು ಕೂಡ ನನ್ನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಾನು ಸುಮ್ಮನೆ ಕುಳಿತಿಲ್ಲ. ಗೌರಿ ಗಣೇಶ ಹಬ್ಬದ ವೇಳೆಗೆ ಡೆಡ್ ಲೈನ್ ನೀಡಿದ್ದರು. ಈಗ ಸೋಮವಾರಕ್ಕೆ ನೀಡಲಾಗಿದೆ. ಶಾಸಕರಿಗೆ ಹಣ ಅಮಿಷ ನೀಡಲಾಗುತ್ತಿದೆ. ಎಲ್ಲವೂ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ. ಸದ್ಯ ಶನಿವಾರ ಬೆಳಗಾವಿಗೆ ತೆರಳಿ ರಾಷ್ಟ್ರಪತಿಗಳ ಕಾರ್ಯಕ್ರಮದ ಬಳಿಕ ಅಲ್ಲಿನ ಜನರ ಸಮಸ್ಯೆ ಕೇಳಲು ಜನತಾ ದರ್ಶನ ನಡೆಸಲಾಗುತ್ತಿದೆ ಎಂದರು.
Advertisement
ಬಿಜೆಪಿ ಸರ್ಕಾರದೊಂದಿಗೆ ಸ್ನೇಹಿತರಾಗಿದ್ದ ಕೆಲ ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿದ್ದು, ಆದರೆ ಮೈಸೂರು ಭಾಗದ ಶಾಸಕರನ್ನು ಇಲ್ಲಿ ಹೆಸರಿಸಲ್ಲ. ಏಕೆಂದರೆ ನನ್ನ ಬಳಿ ಇರುವ ಪಟ್ಟಿಯೇ ಬೇರೆ. ಮೈಸೂರು ಭಾಗದ ಬಿಜೆಪಿಯವರು ಎಂಬ ನಿಮ್ಮ ಊಹೆ ತಪ್ಪು. ಬೆಳಗಾವಿಯಲ್ಲಿ ರಾಷ್ಟ್ರಪತಿಗಳ ಕಾರ್ಯಕ್ರಮದ ಬಳಿಕ ಅಲ್ಲಿನ ಜನರ ಸಮಸ್ಯೆ ತಿಳಿಯಲು ಜನತಾ ದರ್ಶನ ಕೂಡ ನಡೆಸಲಾಗುತ್ತದೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv