ಹುಬ್ಬಳ್ಳಿ: ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆ ಮುಚ್ಚಲು ನಾನು ಸಿದ್ಧನಿದ್ದೇನೆ. ಇದನ್ನೇ ನಾನು ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದೇನೆ. ಆದರೆ ನನ್ನ ಬಗ್ಗೆ ಚಂಪಾ ಅವರು ಇಲ್ಲ ಸಲ್ಲದ ಮಾತುಗಳನ್ನು ಆಡಿದ್ದು, ಚಂಪಾ ಅವರ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾರೆ ಎಂದು ಸ್ಪಷ್ಟಪಡಿಸಲಿ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಚಂಪಾ ಅವರ ಸಿಎಂ ಅವರ ವಿರುದ್ಧ ಆಡಿದ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಚಂಪಾ ಹಿರಿಯರಾಗಿ ನನ್ನ ಬಗ್ಗೆ ಇಲ್ಲ ಮಾತುಗಳನ್ನ ಆಡಬಾರದು. ನನಗೂ ಪದ ಬಳಕೆ ಮಾಡಲು ಬರುತ್ತದೆ. ಅವರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ನಾನು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆ ಮುಚ್ಚಲು ಸಿದ್ಧನಿದ್ದೇನೆ. ಸಾಹಿತ್ಯ ಸಮ್ಮೇಳನದಲ್ಲಿ ಕೂಡ ಇದನ್ನೆ ಹೇಳಿದ್ದು. ನನ್ನ ವಿರುದ್ಧ ಪದ ಬಳಕೆ ಮಾಡಿರುವ ಚಂಪಾ ಅವರ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾರೆ ಎಂದು ಅವರು ಸ್ಪಷ್ಟಪಡಿಸಲಿ. ಕನ್ನಡ ನೆಲ, ಭಾಷೆ ಉಳಿಸಿಕೊಳ್ಳಲು ನಾನು ರೆಡಿ ಇದ್ದೇನೆ ಎಂದರು.
Advertisement
Advertisement
ಇದೇ ವೇಳೆ ಸಿನಿಮಾ ನಟರ ಮೇಲೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಐಟಿ ಅಧಿಕಾರಿಗಳು ತಮ್ಮ ದಿನಚರಿಯ ಮೇಲೆ ದಾಳಿ ಮಾಡಿದ್ದಾರೆ. ಅದು ಕೇಂದ್ರ ತೆರಿಗೆ ಇಲಾಖೆಯ ದಿನಚರಿ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ತೆರಿಗೆ ವಂಚನೆ ಮತ್ತು ತೆರಿಗೆ ಮೇಲೆ ಅನುಮಾನ ಬಂದರೆ ದಾಳಿ ಮಾಡುತ್ತಾರೆ ಎಂದರು. ಅಲ್ಲದೇ ವಿಧಾನಸಭೆ ವೆಸ್ಟ್ ಗೇಟ್ ಬಳಿ ಹಣ ಪತ್ತೆ ವಿಚಾರ ಪ್ರಶ್ನೆಗೆ ಉತ್ತರಿಸಿ, ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಈ ರೀತಿಯ ವಿಚಾರಕ್ಕೆ ಪ್ರಭಾವ ಬೀರಲ್ಲ. ಪೊಲೀಸರು ಸ್ವತಂತ್ರ ತನಿಖೆ ಮಾಡಲಿ. ತನಿಖೆ ವರದಿ ಬಂದ ಮೇಲೆ ಕ್ರಮದ ಬಗ್ಗೆ ವಿಚಾರ ಮಾಡುತ್ತೇವೆ ಎಂದರು. ಇದನ್ನು ಓದಿ: ಕನ್ನಡ ಸಮ್ಮೇಳನದಲ್ಲಿ ಚಂಪಾ ಹೇಳಿಕೆಗೆ ಸಿಎಂ ಗರಂ!
Advertisement
ರಾಜ್ಯ ಸರ್ಕಾರ ಇಂಧನ ಮೇಲಿನ ತೆರಿಗೆ ಬಗ್ಗೆ ಮಾಹಿತಿ ನೀಡಿದ ಸಿಎಂ, ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಕಡಿಮೆ ಇದೆ. ನಾವು ತೆರಿಗೆ ಏರಿಸಿದರೂ, ನಮ್ಮ ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿದರೆ ಮತ್ತೆ ನಮ್ಮದೇ ಕಡಿಮೆಯಾಗುತ್ತೆ ಎಂದರು. ಅಲ್ಲದೇ ಸಾರಿಗೆ ದರ ಹೆಚ್ಚಳದ ಬಗ್ಗೆ ಬೇಡಿಕೆ ಇದೆ. ಈ ಬಗ್ಗೆ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv