ಬೆಂಗಳೂರು: ಭಾರೀ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಮಾಡಿಯೇ ತೀರುತ್ತೇವೆ ಅಂತ ಹೇಳಿದ್ದು, ಇದೀಗ ಆಚರಣೆಗೂ ಸರ್ಕಾರ ರೆಡಿಯಾಗಿದೆ. ಆದ್ರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಹೆಸರು ಇಲ್ಲದಿರುವುದು ಇದೀಗ ಅನುಮಾನಕ್ಕೀಡಾಗಿದೆ.
ಕೇವಲ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಟಿಪ್ಪು ಜಯಂತಿ ಸೀಮಿತವೇ ಎಂಬ ಪ್ರಶ್ನೆಯೊಂದು ಎದ್ದಿದ್ದು, ಮುಖ್ಯಮಂತ್ರಿಯವರು ಟಿಪ್ಪು ಜಯಂತಿ ಆಚರಣೆಯಿಂದ ದೂರ ಉಳಿದುಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ. ಯಾಕಂದ್ರೆ ಟಿಪ್ಪು ಜಯಂತಿ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಹೆಸರು ಇಲ್ಲ. ಈ ಮೂಲಕ ಕಾಂಗ್ರೆಸ್ ಸರ್ಕಾರ ಘೋಷಿಸಿದ ವಿವಾದಾತ್ಮಕ ಜಯಂತಿಯಿಂದ ಸಿಎಂ ದೂರ ಉಳಿದ್ರಾ ಎಂಬಂತಾಗಿದೆ.
Advertisement
Advertisement
ಆಹ್ವಾನ ಪತ್ರಿಕೆಯಲ್ಲಿ ಕಾಂಗ್ರೆಸ್ ಸಚಿವರು, ಶಾಸಕರದ್ದೇ ದರ್ಬಾರ್ ಆಗಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಹೆಸರು ಬಿಟ್ಟರೆ ಜೆಡಿಎಸ್ ನವರ ಹೆಸರೂ ಇಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಟಿಪ್ಪು ಜಯಂತಿ ಆಚರಣೆ ಬಗ್ಗೆ ಟೀಕಿಸಿದ್ದ ಕುಮಾರಸ್ವಾಮಿ, ಈಗಲೂ ಅದೇ ನಿಲುವುವನ್ನ ಕಾಯ್ದುಕೊಂಡಿದ್ದಾರಾ. ಗೆಳೆಯ ಜಮೀರ್ ಅಹಮದ್ ಮನವೊಲಿಕೆಗೂ ಸಿಎಂ ಅವರು ಕ್ಯಾರೇ ಅಂತಿಲ್ಲವಾ. ಹಾಗಾದ್ರೆ ಸಮ್ಮಿಶ್ರ ಸರ್ಕಾರ ವಿವಾದಾತ್ಮಕ ನಿರ್ಧಾರಕ್ಕೆ ಹೆಚ್ ಡಿಕೆ ಸೈಲೆಂಟ್ ಆಗಿಬಿಟ್ಟರಾ ಅನ್ನೋ ಪ್ರಶ್ನೆ ಮೇಲೆ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
Advertisement
ಈ ಹಿಂದೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಟಿಪ್ಪು ಜಯಂತಿ ಭದ್ರತೆ ಕುರಿತು ಚರ್ಚೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದೆ. ಬಿಜೆಪಿ ಅವರು ವಿರೋಧ ಮಾಡುವುದು ಅವರಿಗೆ ಮಾಮೂಲಿಯಾಗಿದೆ. ಬಿಜೆಪಿ 2019 ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದೆ. ಜಯಂತಿ ಮಾಡಲು ಎಂದಿನಂತೆ ಗುಪ್ತಚರ ಮಾಹಿತಿ ಆಧರಿಸಿ ಹೆಚ್ಚಿನ ಭದ್ರತೆ ಬೇಕಾದ ಕಡೆ ಪೊಲೀಸ್ ನಿಯೋಜಿಸಿ ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದಿದ್ದರು.
Advertisement
ಇದೇ ವೇಳೆ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಅನಂತ್ ಕುಮಾರ್ ಹೆಗ್ಡೆ ಅವರು ಹೆಸರು ಬೇಡ ಎಂದು ಮನವಿ ಮಾಡಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿ ಪ್ರೋಟೋಕಾಲ್ ಇದ್ದಂತೆ ಮಾಡುತ್ತೇವೆ ಅಂತ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews