ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಖುಷಿಯಾಗಿಯೇ ಇದ್ದಾರೆ. ಅವರು ಸಂತೋಷದಿಂದಿಲ್ಲ ಅಂತ ನೀವು ಹೇಗೆ ಹೇಳುತ್ತೀರಾ ಅಂತ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಸಿಎಂ ಆಗಿ ಖುಷಿಯಾಗಿಲ್ಲ ಅನ್ನೋ ವಿಚಾರದ ಕುರಿತು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಓರ್ವ ಮುಖ್ಯಮಂತ್ರಿಯಾಗಿರೋ ಅವರು ಯಾವತ್ತೂ ಖುಷಿಯಾಗಿರುತ್ತಾರೆ. ಅವರು ಸಂತೋಷದಿಂದಿದ್ದರೆ ನಾವೆಲ್ಲರೂ ಖುಷಿಯಾಗಿ ಇರಲು ಸಾಧ್ಯ ಅಂತ ಹೇಳಿದ್ರು.
Advertisement
ಇದೇ ವೇಳೆ ಅನ್ನಭಾಗ್ಯದ ಅಕ್ಕಿ ಪ್ರಮಾಣ ಇಳಿಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಿಲುವೇನು ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳು ಮುಂದುವರಿಯುತ್ತದೆ. ಅದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಕ್ಕಿ ಪ್ರಮಾಣವನ್ನ ಏಳು ಕೆಜಿಗೆ ಏರಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ ಅಂದ್ರು. ಇದನ್ನೂ ಓದಿ: ಎಲ್ಲ ನೋವುಗಳನ್ನು ವಿಷಕಂಠನಾಗಿ ನುಂಗಿದ್ದೇನೆ: ಕಾರ್ಯಕರ್ತರ ಮುಂದೆ ಸಿಎಂ ಕಣ್ಣೀರು
Advertisement
ಸಿಎಂ ಮೇಲೆ ಒತ್ತಡ ಹೇರುವುದು ಸರಿಯಲ್ಲ ಅನ್ನೋ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಡಿಸಿಎಂ, ಸಿಎಂ ಮೇಲೆ ಯಾವುದೇ ಒತ್ತಡ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಜೊತೆಗೆ ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳು ಮುಂದುವರೆಯಲಿವೆ ಅಂತ ತಿಳಿಸಿದ್ರು.
Advertisement
ಸಂಪುಟ ವಿಸ್ತರಣೆ ಹಾಗೂ ನಡುವೆ ನಿಗಮ ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 18 ಕ್ಕೆ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ಭೇಟಿ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಜೆಡಿಎಸ್, ಕಾಂಗ್ರೆಸ್ ಗೆ ನಿಗಮ ಹಂಚಿಕೆ ಮಾಡಿಕೊಂಡಿದ್ದೇವೆ. ಆದ್ರೆ, ಯಾರಿಗೆ ನೀಡಬೇಕು ಅನ್ನೋದರ ಬಗ್ಗೆ ತೀರ್ಮಾನವಾಗಬೇಕಿದೆ. ಹೈಕಮಾಂಡ್ ಚರ್ಚೆ ಬಳಿಕ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಅಂದ್ರು. ಇದನ್ನೂ ಓದಿ: ಕೇಳಿದ್ದು ಇಂಧನ, ಸಿಕ್ಕಿದ್ದು ವೈದ್ಯಕೀಯ ಶಿಕ್ಷಣ – ಕೊನೆಗೂ ರಹಸ್ಯ ಬಿಚ್ಚಿಟ್ರು ಡಿಕೆಶಿ
Advertisement
ಬೀದರ್ ನಲ್ಲಿ ನಡೆದ ಹೆಣ್ಣುಮಕ್ಕಳ ಹಾಗು ಮಕ್ಕಳ ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಇದು ಬಹಳ ಗಂಭೀರವಾದ ವಿಚಾರವಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಅವರು ಹೇಳಿದ್ರು.