ನವದೆಹಲಿ: ಪಕ್ಷದ ಕಚೇರಿಯಲ್ಲಿ ನಡೆದಂತಹ ಕಾರ್ಯಕ್ರಮ ಅದು ನನ್ನ ಕುಟುಂಬದ ಕಾರ್ಯಕ್ರಮವಾಗಿತ್ತು. ಆ ಕುಟುಂಬದ ಕಾರ್ಯಕ್ರಮದಲ್ಲಿ ನನ್ನಲ್ಲಿರುವಂತಹ ನೋವುಗಳನ್ನು ಹೇಳುತ್ತಿರಬೇಕಾದ್ರೆ ಭಾವಾನಾತ್ಮಕವಾಗಿ ಕಣ್ಣೀರು ಹಾಕಿದ್ದು ಸಹಜ. ಅದು ನನ್ನ ಹುಟ್ಟು ಗುಣ ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತಲೂ ಹೆಚ್ಚಾಗಿ, ನಾನೊಬ್ಬ ಮಾನವೀಯತೆಯ ಮನುಷ್ಯನಾಗಿದ್ದೇನೆ. ಇದನ್ನು ಮೊದಲಿನಿಂದಲೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಅದರ ಹಿನ್ನೆಲೆಯಲ್ಲಿ ನನ್ನ ಕುಟುಂಬದ ಸದಸ್ಯರ ಜೊತೆ ನನ್ನ ಕೆಲವೊಂದು ನೋವಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿರಬೇಕಾದ್ರೆ ಕಣ್ಣಲ್ಲಿ ನೀರು ಹಾಕಿರುವುದು ಸಹಜ ಅಂದ್ರು.
Advertisement
I didn't speak about Congress or any Congress leader. I didn't mention anything about Congress in my speech. That was a party program and I got emotional, Media misinterpreted my speech: Karnataka CM HD Kumaraswamy on his earlier statement ' I know the pain of coalition govt'. pic.twitter.com/kUcHZ4U4F4
— ANI (@ANI) July 17, 2018
Advertisement
ಆ ಕ್ಯಾಸೆಟ್ ನ ರೀವೈಂಡ್ ಮಾಡಿ ಬೇಕಾದ್ರೆ ನೋಡಿ. ಅಲ್ಲಿ ಕಾಂಗ್ರೆಸ್ ಪಕ್ಷ ನನಗೆ ತೊಂದರೆ ಕೊಟ್ಟಿದೆ. ಕಾಂಗ್ರೆಸ್ ನ ನಾಯಕರು ನನಗೆ ತೊಂದರೆ ಕೊಟ್ಟಿದ್ದಾರೆ ಅಂತ ಎಲ್ಲೂ ಹೇಳಿಲ್ಲ. ನಾನು ಇಷ್ಟೆಲ್ಲಾ ಕಷ್ಟದಲ್ಲಿದ್ದು ಸಾಲಮನ್ನಾ ಮಾಡತಕ್ಕಂತಹ ಒಂದು ದಿಟ್ಟ ನಿರ್ಧಾರ ಮಾಡಿ ಕಾರ್ಯಕ್ರಮಗಳನ್ನು ಕೊಡ್ತಾ ಇದ್ದೇನೆ. ಉತ್ತಮವಾದ ಒಂದು ಕೆಲಸವನ್ನು ಮಾಡಲು ಎಲ್ಲೋ ಒಂದು ಕಡೆ ಪ್ರೋತ್ಸಾಹ ದೊರಕುತ್ತಿಲ್ಲ. ಸಾರ್ವಜನಿಕರ ಬಗ್ಗೆ ನನ್ನಲ್ಲಿರುವ ಕಮಿಟ್ಮೆಂಟ್ ಗಳ ಬಗ್ಗೆ ರಾಜ್ಯದ ಜನತೆಯಲ್ಲಿ ಎಲ್ಲೋ ಒಂದು ಕಡೆ ಇನ್ನೂ ವಿಶ್ವಾಸ ಮೂಡುತ್ತಿಲ್ಲ ಎನ್ನುವ ಹಿನ್ನೆಲೆಯಲ್ಲಿ ನಾನು ಭಾವನಾತ್ಮಕವಾಗಿ ಮಾತಾಡಿದ್ದೇನೆ ಅಂತ ಅವರು ಸ್ಪಷ್ಟನೆ ನೀಡಿದ್ರು.
Advertisement
ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ಬಗ್ಗೆ ಆ ಸಭೆಯಲ್ಲಿ ನಾನು ಚರ್ಚೆ ಮಾಡಿಲ್ಲ. ಆದ್ರೆ ಈ ವಿಚಾರ ಇಂದು ದೇಶದ ಉದ್ದಗಲಕ್ಕೂ ಚರ್ಚೆಯಾಗುತ್ತಿದೆ ಅಂತ ವಿಷಾದ ವ್ತಕ್ತಪಡಿಸಿದ್ರು.