ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಅದೃಷ್ಟದ ಕಾರು ಬದಲಾಯಿಸಿ ಹೊಸ ಕಾರಿನಲ್ಲಿ ಓಡಾಡುತ್ತಿದ್ದಾರೆ.
ಹೌದು. ಇತ್ತೀಚೆಗೆ ಸಿಎಂ ಅವರ ರೇಂಜ್ ರೋವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರನ್ನು ದುರಸ್ಥಿಗೆ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕಳೆದ ಮೂರು ದಿನಗಳಿಂದ ಹೊಸ ಕಾರಿನಲ್ಲೇ ಓಡಾಟ ನಡೆಸುತ್ತಿದ್ದಾರೆ.
Advertisement
Advertisement
ಹೊಸ ಕಾರು ಯಾವುದು?
8 ತಿಂಗಳ ಹಿಂದೆ ಖರೀದಿಸಿರುವ ಲೆಕ್ಸಸ್ ಕಾರಿನಲ್ಲಿ ಮುಖ್ಯಮಂತ್ರಿಯವರು ಸಂಚರಿಸುತ್ತಿದ್ದಾರೆ. ಜಪಾನ್ ನಿಂದ ಇಂಡಿಯಾಕ್ಕೆ ಬಂದ ಮೊದಲ ಕಾರು ಇದಾಗಿದೆ. ಈ ಕಾರನ್ನು ಎಂಎಲ್‍ಸಿ ಫಾರೂಕ್ ಅವರು ಖರೀದಿಸಿದ್ದಾರೆ. ಇದೀಗ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಎಂ ಅವರು ತಮ್ಮ ಅದೃಷ್ಟದ ಕಾರು ಬದಲಿಸಿ ಈ ಕಾರಿನಲ್ಲಿ ಸಂಚಾರ ಮಾಡುತ್ತಿದ್ದಾರೆ.
Advertisement
ಕಾರಿನಲ್ಲಿ ಆಕಸ್ಮಿಕ ಬೆಂಕಿ:
ಕಳೆದ ಬುಧವಾರ ಮಧ್ಯರಾತ್ರಿ ಶ್ರೀರಂಗಪಟ್ಟಣದ ಪೀಹಳ್ಳಿ ಸಮೀಪ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಆಪ್ತ ಸಿಬ್ಬಂದಿ ತಕ್ಷಣ ಸಿಎಂ ಅವರನ್ನು ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್ ಅಪಾಯದಿಂದ ಕುಮಾರಸ್ವಾಮಿ ಪಾರಾಗಿದ್ದರು.
Advertisement
ತಾನಿದ್ದ ರೇಂಜ್ ರೋವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಬೇರೊಂದು ಕಾರಿನಲ್ಲಿ ಕೆಆರ್ ಎಸ್‍ಗೆ ತೆರಳಿದ್ದರು. ಸಿಎಂ ಕುಮಾರಸ್ವಾಮಿ ಆಗಮಿಸಿದ್ದಕ್ಕೆ ಜನತೆ ಪಟಾಕಿ ಸಿಡಿಸಿದ್ದರು. ಆ ಪಟಾಕಿ ಕಿಡಿಯಿಂದ ರೇಂಜ್‍ರೋವರ್ ನಲ್ಲಿ ಬೆಂಕಿ ಕಾಣಿಸಿಕೊಳ್ತಾ? ಅಥವಾ ರೇಂಜ್‍ರೋವರ್ ನಲ್ಲಿ ತಾಂತ್ರಿಕ ದೋಷ ಇತ್ತ ಎಂಬ ಅನುಮಾನ ಮೂಡಿತ್ತು.