ಅಮರಾವತಿ: ಸಿಎಂ ಕುಮಾರಸ್ವಾಮಿಯವರು ತಮ್ಮ ಸುಪುತ್ರ ಎಚ್.ಕೆ.ನಿಖಿಲ್ ಗೌಡರಿಗೆ ಹೆಣ್ಣು ನೋಡಲು ದೆಹಲಿಯಿಂದ ನೇರವಾಗಿ ಅಮರಾವತಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಹೌದು, ಮಗನಿಗೆ ಹುಡುಗಿ ಹುಡುಕಲು ಆಂಧ್ರಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದು, ಆಂಧ್ರದಲ್ಲಿರುವ ಕರ್ನಾಟಕ ಮೂಲದವರ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದಾರೆ. ಇದೆ ಕಾರಣಕ್ಕೆ ಅವರು ದೆಹಲಿಯಿಂದ ನೇರವಾಗಿ ಆಂಧ್ರದ ಅಮರಾವತಿಗೆ ತೆರಳಿದ್ದಾರೆ. ಇಂದು ಅನೌಪಚಾರಿಕ ಮಾತುಕತೆ ನಡೆಯಲಿದ್ದು, ಮುಹೂರ್ತ ನೋಡಿ ಎರಡೂ ಕುಟುಂಬಗಳು ಮತ್ತೊಮ್ಮೆ ಮಾತುಕತೆ ನಡೆಸಲಿವೆ. ಮುಂದಿನ ತಿಂಗಳು ದೇವೇಗೌಡರ ಕುಟುಂಬ ಸದಸ್ಯರೆಲ್ಲರೂ ತೆರಳಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಕುಮಾರಸ್ವಾಮಿಯವರು ಅಮರಾವತಿಯ ದುರ್ಗಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆದರೆ ಇದು ಅವರ ಟೆಂಪಲ್ ರನ್ ಮುಂದುವರಿದ ಭಾಗವಲ್ಲ ಅಥವಾ ಯಾವುದೇ ಹರಕೆಯನ್ನೂ ತೀರಿಸಲೂ ಅಲ್ಲ ರಾಜಕೀಯ ಕಾರಣಕ್ಕೂ ಅಲ್ಲ. ಪುತ್ರನ ಮದುವೆ ವಿಚಾರ ಮಾತನಾಡಲು ಹಾಗೂ ತಮ್ಮ ಬಹುದಿನಗಳ ಕನಸನ್ನು ನನಸುಮಾಡಿಕೊಳ್ಳಲು ಸಿಎಂ ದಂಪತಿ ಅತೀವ ಸಂತಸದಿಂದ ಅಮರಾವತಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv