ಯಾದಗಿರಿ: ಕಲಬುರಗಿಯ ಹೇರೂರಿನಲ್ಲಿ ಗ್ರಾಮ ವಾಸ್ತವ್ಯ ಮಳೆಯಿಂದ ರದ್ದಾಗಿದೆ. ಆದರೆ ನಿನ್ನೆ ಅಂದರೆ ಮೊದಲ ದಿನದ ಸಿಎಂ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಲವು ದೂರು-ದುಮ್ಮಾನಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳಿಗೆ ಸಿಹಿ-ಕಹಿಯ ಮಿಶ್ರ ಸ್ಪಂದನೆ ವ್ಯಕ್ತವಾಯ್ತು.
ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಜನಪ್ರಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿರುವ ಮುಖ್ಯಮಂತ್ರಿಗಳು, ಮೊದಲ ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಯಾದಗಿರಿಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಿಎಂ ರಾತ್ರಿ ವಾಸ್ತವ್ಯ ಮಾಡಿದರು. ಸಾಮಾನ್ಯರಂತೆ ಶಾಲೆಯ ಕೊಠಡಿಯಲ್ಲಿ ನೆಲದ ಮೇಲೆ ಚಾಪೆ ಹಾಸಿಕೊಂಡು, ತಲೆಗೊಂದು ದಿಂಬು, ಹಾಕಿಕೊಂಡು ರಾತ್ರಿಯಿಡೀ ಕಳೆದರು.
Advertisement
Advertisement
ಮುಖ್ಯಮಂತ್ರಿಗಳಿಗೆ ಎಂಎಲ್‍ಸಿ ಭೋಜೇಗೌಡ ಕೂಡ ಸಾಥ್ ನೀಡಿದರು. ಸತತ 8 ಗಂಟೆಗಳ ಕಾಲ ಜನತಾದರ್ಶನ ಮಾಡಿದ ಸಿಎಂಗೆ ಹಲವು ದೂರು ದುಮ್ಮಾನಗಳು ಕೇಳಿಬಂತು. ಬಿಸಿಲ ತಾಪ, ಮಳೆ ನಡುವೆಯೂ ಜನರಿಂದ ಅಹವಾಲು ಸ್ವೀಕರಿಸಿದರು. ಮುನಗಲ್ ಗ್ರಾಮದ ಪೋಷಕರು ಅಪಘಾತದಿಂದ ದೇಹದ ಸ್ವಾಧೀನ ಕಳೆದುಕೊಂಡಿದ್ದ ಮಗನನ್ನು ಕರೆತಂದಿದ್ದರು. ಸುಮಾರು 30 ಲಕ್ಷ ವೆಚ್ಚ ಮಾಡಿದ್ರೂ ಮಗ ಸರಿಹೋಗಲಿಲ್ಲ ಎಂದು ತಂದೆ-ತಾಯಿ ಅಳಲು ತೋಡಿಕೊಂಡರು. ಈ ವೇಳೆ ಜನತಾ ದರ್ಶನದ ವೇದಿಕೆ ಮಮ್ಮಲ ಮರುಗಿತು. ತಕ್ಷಣ ಜನತಾ ದರ್ಶನದಲ್ಲಿ ಸ್ಥಳದಲ್ಲೇ ಸಿಎಂ 5 ಲಕ್ಷ ಘೋಷಿಸಿದರು.
Advertisement
Advertisement
ಸಿಎಂಗೆ ಶಾಲಾ ಮಕ್ಕಳು ಗಣಪತಿ ಮೂರ್ತಿ ಗಿಫ್ಟ್ ಕೊಟ್ಟರು. ಇದೇ ವೇಳೆ ಮಕ್ಕಳು ಜನತಾದರ್ಶನದ ವೇದಿಕೆ ಮೇಲೆ ಹತ್ತಿ ಸಿಎಂ ಜೊತೆ ಸೆಲ್ಫಿ ತೆಗೆದುಕೊಂಡರು. ಜನತಾದರ್ಶನ ಬಳಿಕ ಮಾತನಾಡಿದ ಸಿಎಂ, ನನ್ನ ದೇಹಕ್ಕೆ ಏನೇ ದಂಡನೆ ಆಗಲಿ. ನನ್ನ ಆರೋಗ್ಯ ಪರಿಸ್ಥಿತಿ ಹೇಗೇ ಇರಲಿ. ನಾನು ಸ್ವೀಕರಿಸಿರುವ ಮತ್ತೊಂದು ಸವಾಲನ್ನು ಎದುರಿಸುತ್ತೇನೆ. ಉತ್ತರ, ದಕ್ಷಿಣ, ಹೈದರಾಬಾದ್, ಮುಂಬೈ ಅಂತ ನನಗೆ ಭೇದ ಇಲ್ಲ. ನನಗೆ ಅಖಂಡ ಕರ್ನಾಟಕದ ಅಭಿವೃದ್ಧಿ ಮುಖ್ಯ ಎಂದರು.
ಯಾದಗಿರಿ ಜಿಲ್ಲೆ ಸೇರಿದಂತೆ ಚಂಡರಕಿ ಗ್ರಾಮಕ್ಕೂ ಪ್ರತ್ಯೇಕವಾಗಿ ಹಲವು ಯೋಜನೆಗಳನ್ನು ಘೋಷಿಸಿದರು. ಆದರೆ ಇದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತೆ ಅನ್ನೋದನ್ನ ಕಾದು ನೋಡ್ಬೇಕು. ಒಟ್ಟಾರೆ ಐಶಾರಾಮಿ ವಾಸ್ತವ್ಯ ಎಂದಿದ್ದ ಟೀಕಿಸಿದ್ದ ಪ್ರತಿಪಕ್ಷಗಳಿಗೆ ಸಿಎಂ ಸರಳ ವಾಸ್ತವ್ಯದ ಮೂಲಕ ತಿರುಗೇಟು ನೀಡಿದ್ರು.
ಜಿಲ್ಲೆಗೆ ಸಿಎಂ ಘೋಷನೆ:
* ಯಾದಗಿರಿ ಜಿಲ್ಲಾ ಆಸ್ಪತ್ರೆಯನ್ನು 100 ಬೆಡ್‍ನಿಂದ 300 ಬೆಡ್‍ಗೆ ಪರಿವರ್ತಿಸಲು ನಿರ್ದೇಶನ
* ಯಾದಗಿರಿ ಜಿಲ್ಲಾ ಆಸ್ಪತೆಗೆ ಸಂಪರ್ಕ ರಸ್ತೆ ಕಲ್ಪಿಸಲು 1.5 ಕೋಟಿ ರೂ. ಬಿಡುಗಡೆ
* ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ತಕ್ಷಣ ಮೂಲಭೂತ ಸೌಲಭ್ಯ ಕಲ್ಪಿಸಲು ಸೂಚನೆ
* ಯಾದಗಿರಿ ನಗರದಲ್ಲಿ ಅಪೂರ್ಣವಾಗಿರುವ ಒಳಚರಂಡಿ ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಲು ಸೂಚನೆ
* 1 ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರತಿ ಹಳ್ಳಿಗೆ ಜಲಧಾರೆ ಯೋಜನೆ ನದಿಯ ಮೂಲದಿಂದ ಕುಡಿಯುವ ನೀರು ಪೂರೈಕೆ
* ಗ್ರಾಮ ವಾಸ್ತವ್ಯದ ಹಿನ್ನೆಯಲ್ಲಿ ಕಳೆದ 10 ದಿನಗಳಿಂದ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯ ಅದಾಲತ್
* 104 ಪಿಂಚಣಿ, 126 ಪಡಿತರ ಚೀಟಿ, 500ಕ್ಕೂ ಹೆಚ್ಚು ಪಹಣಿ ತಿದ್ದುಪಡಿ ಮಾಡಲಾಗಿದೆ
* ಜನತಾದರ್ಶನದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 8.30 ಗಂಟೆಯವರೆಗೆ ಸುಮಾರು 4,000 ಅರ್ಜಿ ಸ್ವೀಕಾರ
* ಅರ್ಜಿಗಳನ್ನು ಇಲಾಖಾವಾರು ವಿಂಗಡಿಸಿ, ಆದ್ಯತೆಯ ಮೇರೆಗೆ ಪರಿಹಾರ ನೀಡಲು ಸೂಚನೆ
* ಅಂಗವಿಕಲರ ರಿಯಾಯತಿ ದರದ ಕೆಎಸ್‍ಆರ್‍ಟಿಸಿ ಬಸ್ ಪಾಸ್ ಮುಂದುವರಿಸಲು ಸೂಚನೆ
* ಪಹಣಿ ತಿದ್ದುಪಡಿ, ವೈದ್ಯಕೀಯ ಚಿಕಿತ್ಸಾ ವೆಚ್ಚ, ವಿದ್ಯುತ್ ಪರಿವರ್ತಕಗಳ ಬದಲಾವಣೆ, ಸಾಲಮನ್ನಾ
* ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧ ಸುಮಾರು 2 ಸಾವಿರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲು ಸೂಚನೆ
* ಅಪಘಾತದಲ್ಲಿ ಗಾಯಗೊಂಡಿರುವ ಮುನಗಲ್ ಗ್ರಾಮದ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರಿಗೆ ತಕ್ಷಣ 5 ಲಕ್ಷ ರೂ.ಗಳ ಪರಿಹಾರಕ್ಕೆ ಸೂಚನೆ
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]