ಮೈಸೂರು: ಮುಡಾ (MUDA Scam) ಹೋರಾಡದಲ್ಲಿ ನಮಗೆ ಜಯ ಸಿಕ್ಕಿದೆ. ಪ್ರತಿಯೊಂದು ದಾಖಲೆಗಳನ್ನು ಇಟ್ಟುಕೊಂಡೇ ನಾವು ಹೋರಾಟ ಮಾಡಿದ್ದೇವೆ. ಸಿದ್ದರಾಮಯ್ಯನವರ (Siddaramaiah) ಮನೆಯವರೇ ಇದರ ಫಲಾನುಭವಿಗಳಾಗಿದ್ದಾರೆ ಎಂದು ತೋರುತ್ತಿತ್ತು. ಸತ್ಯಮೇವ ಜಯತೆ ಅನ್ನುವುದು ಸತ್ಯ. ಇಂದು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮೈಸೂರು (Mysuru) ಕೆಆರ್ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ( Srivatsa) ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂರನ್ನು ಅವರ ಆಪ್ತ ಸಚಿವ ಭೈರತಿ ಸುರೇಶ್, ಕಾನೂನು ಸಲಹೆಗಾರ ಪೊಣ್ಣನ್ನ ಸೇರಿ ದಾರಿ ತಪ್ಪಿಸಿದರು. ಸಿಎಂ ಸ್ವತಃ ವಕೀಲರು ಅರಿತುಕೊಳ್ಳುವುದರಲ್ಲಿ ಎಡವಿದ್ದಾರೆ. ಹೀಗಾಗಿ ಈ ಸ್ಥಿತಿಗೆ ತಲುಪಿದ್ದಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಗಣೇಶನ ಶಾಪ ತಟ್ಟಿದೆ: ಆರ್.ಅಶೋಕ್
Advertisement
Advertisement
ಸಿಎಂ ರಾಜೀನಾಮೆ ವಿಚಾರವಾಗಿ ಮಾತನಾಡಿ, ಅವರು ಕಾನೂನನ್ನು ಅರಿತವರು. ಊರಿಗೆಲ್ಲಾ ಬುದ್ಧಿ ಹೇಳುವ ಸಿಎಂ ತಾವೇ ಬದನೆಕಾಯಿ ತಿನ್ನೋದಿಕ್ಕೆ ಆಗಲ್ಲ. ಅವರು ರಾಜೀನಾಮೆ ಕೊಡಲೇಬೇಕು ಎಂದು ಈ ಆಗ್ರಹಿಸಿದರು. ಇದನ್ನೂ ಓದಿ: MUDA Scam| ರಾಜಭವನದ ದುರ್ಬಳಕೆಯಾಗಿದೆ, ನಾನು ಯಾವುದೇ ತನಿಖೆಗೆ ಹಿಂಜರಿಯಲ್ಲ – ಸಿಎಂ ಮೊದಲ ಪ್ರತಿಕ್ರಿಯೆ
Advertisement
ಸಿಎಂ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಮಾಡಿದ ಅಪಪ್ರಚಾರಗಳೆಲ್ಲವೂ ಈಗ ಇವರು ಸುಳ್ಳು ಎಂದು ತೀರ್ಪಿನ ಮೂಲಕ ಸಾಬೀತಾಯಿತು. ಇವರಿಗೆ ಸುಪ್ರೀಂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಇರಬಹುದು. ಆದರೆ ಈಗಂತು ನಿರಾಶೆ ಆಗಿದೆ. ಆದ್ದರಿಂದ ಯಾವತ್ತು ಸತ್ಯಕ್ಕೆ ಜಯ ಸಿಕ್ಕಿರೋದಂತು ನಿಜ ಎಂದು ಹೇಳಿದರು.
Advertisement
ನಾವೆ ಮೊದಲು ತಪ್ಪಾಗಿದೆ ಎಂದು ಹೇಳುತ್ತಿದ್ದೆವು. ಸಿಎಂಗೆ 14 ಸೈಟ್‌ಗಳನ್ನು ಪುನಃ ಒಪ್ಪಿಸಿ ಎಂದು ಹೇಳಿದ್ದೇವೆ. ಆ ಸಮಯದಲ್ಲಿ 62 ಕೋಟಿ ರೂ. ಕೇಳಿದ ಕಾರಣಕ್ಕೆ ದಿನೇಶವರನ್ನು ಅಮಾನತು ಮಾಡಿ ದಾಖಲೆಗಳನ್ನು ಹೈಕೋರ್ಟ್‌ಗೆ ಕೊಟ್ಟರು. ಇವತ್ತು ಆ ಅಮಾನತ್ತನ್ನು ವಾಪಾಸು ತೆಗೆದುಕೊಂಡಿದೇವೆ ಎಂದು ದಾಖಲೆಗಳು ಇಲ್ಲದೆ ಮಾತನಾಡುತ್ತಿದ್ದಾರೆ. ಹೀಗೆ ದ್ವಂದ್ವ ನಿಲುವನ್ನು ತಾಳಿದಕ್ಕಾಗಿ ಇಂದು ಸಿಎಂಗೆ ಈ ಪರಿಸ್ಥಿತಿ ಬಂದಿದೆ. ಅವತ್ತು ನಮ್ಮ ಮಾತನ್ನು ಕೇಳುತ್ತಿದ್ದರೆ ಇವತ್ತು ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದರು. ಇದನ್ನೂ ಓದಿ: ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿದ ಹೈಕೋರ್ಟ್; ಸುಪ್ರೀಂ ಕೋರ್ಟ್‌ಗೆ ಹೋಗಲು ತಯಾರಿದ್ದೇವೆ – ಪ್ರಿಯಾಂಕ್ ಖರ್ಗೆ