Connect with us

Bengaluru City

13 ವರ್ಷಗಳ ಬಳಿಕ ಮತ್ತೆ ಸಿಎಂ ಗ್ರಾಮವಾಸ್ತವ್ಯ – ಬೆಳಗ್ಗಿಂದ ಸಂಜೆವರೆಗೂ ಜನತಾ ದರ್ಶನ

Published

on

ಯಾದಗಿರಿ: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಚುಕ್ಕಾಣಿ ಹಿಡಿದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಇಂದು ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಗುರುವಾರ ರಾತ್ರಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೆಂಗಳೂರು-ದೆಹಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾದಗಿರಿಗೆ ಪ್ರಯಾಣಿಸಿದರು. ಬೆಳಗ್ಗೆ 5.30ಕ್ಕೆ ಯಾದಗಿರಿ ರೈಲ್ವೆ ನಿಲ್ದಾಣದಿಂದ ತಲುಪಿದ ಸಿಎಂಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಬಳಿಕ ಅಲ್ಲಿಂದ ಸರ್ಕಿಟ್ ಹೌಸ್‍ಗೆ ತೆರಳಿದರು. ಬಳಿಕ ಬಸ್‍ನ ಮೂಲಕ ಚಂಡರಕಿ ಗ್ರಾಮಕ್ಕೆ ತೆರಳಲಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಮಾತಾಡಿದ ಸಿಎಂ, 2006ರಲ್ಲಿ ಬಿಜೆಪಿ ಜೊತೆಗಿನ ದೋಸ್ತಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ನಡೆಸಿದ್ದ ಗ್ರಾಮ ವಾಸ್ತವ್ಯಕ್ಕೂ ಈಗಕ್ಕೂ ವ್ಯತ್ಯಾಸ ಇದೆ. ಒಂದು ವರ್ಷದ ಹಿಂದೆಯೇ ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಇತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ ಎಂದರು. ಸಿಎಂ ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಚಂಡರಕಿ ಗ್ರಾಮವನ್ನ ತಳಿರು-ತೋರಣ, ರಂಗೋಲಿಗಳಿಂದ ಸಿಂಗರಿಸಲಾಗಿದೆ.

13 ವರ್ಷಗಳ ಬಳಿಕ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಮರಳಿರುವ ಮುಖ್ಯಮಂತ್ರಿಗಳ ಇಂದಿನ ಕಾರ್ಯಕ್ರಮಗಳ ಪಟ್ಟಿ ಈ ರೀತಿ ಇದೆ. ಗ್ರಾಮವಾಸ್ತವ್ಯದ ಭಾಗವಾಗಿ ಸಿಎಂ ಬೆಳಗ್ಗೆಯಿಂದ ಸಂಜೆಯವರೆಗೂ ಜನತಾ ದರ್ಶನ ಮಾಡಲಿದ್ದು, ಇಂದು ರಾತ್ರಿ ಚಂಡರಕಿಯ ಶಾಲೆಯಲ್ಲೇ ಉಳಿದುಕೊಳ್ಳಲಿದ್ದಾರೆ.

* ಬೆಳಗ್ಗೆ 9:30 – ಈಶಾನ್ಯ ಸಾರಿಗೆ ಬಸ್ ಮೂಲಕ ಚಂಡರಕಿ ಗ್ರಾಮದತ್ತ ಪಯಣ
* ಬೆಳಗ್ಗೆ. 10 – ಚಂಡರಕಿ ಗ್ರಾಮ ಪ್ರವೇಶ
* ಬೆಳಗ್ಗೆ. 10:30 – ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರವೇಶ, ಮಕ್ಕಳಿಂದ ಸ್ವಾಗತ ಸ್ವೀಕಾರ
* ಬೆಳಗ್ಗೆ. 10:45 – ಶಾಲಾ ಮೈದಾನದಲ್ಲಿ ಜನತಾ ದರ್ಶನ ಆರಂಭ
* ಮಧ್ಯಾಹ್ನ 2 – ವೇದಿಕೆಯ ಹಿಂಬದಿಯ ಗ್ರೀನ್ ರೂಮ್‍ನಲ್ಲಿ ಊಟ
* ಮಧ್ಯಾಹ್ನ. 2:30 – ಮತ್ತೆ ಜನತಾದರ್ಶನ ಆರಂಭ
* ಸಂಜೆ. 6:30 – ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿ
* ರಾತ್ರಿ 9:30 – ಶಾಲಾ ಶಿಕ್ಷಕರು, ಮಕ್ಕಳ ಜೊತೆ ಊಟ
* ರಾತ್ರಿ 10:30 – ಶಾಲೆಯ ಕಾರ್ಯಾಲಯ ಕೊಠಡಿಯಲ್ಲಿ ವಿಶ್ರಾಂತಿ

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Click to comment

Leave a Reply

Your email address will not be published. Required fields are marked *