ಮುಂಬೈ: ಮಹಾರಾಷ್ಟ್ರದ (Maharashtra) ರಾಯಗಢ (Raigad) ಜಿಲ್ಲೆಯ ಇರ್ಶಲವಾಡಿ ಗ್ರಾಮದಲ್ಲಿ ಇತ್ತೀಚಿಗೆ ಸಂಭವಿಸಿದ ಭೂಕುಸಿತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ದತ್ತು ತೆಗೆದುಕೊಳ್ಳಲಿದ್ದಾರೆ ಎಂದು ಶಿವಸೇನೆ (Shiva Sena) ಹೇಳಿದೆ.
ಬುಧವಾರ ರಾತ್ರಿ ಇರ್ಶಲವಾಡಿ (Irshalwadi) ಗ್ರಾಮದಲ್ಲಿ ಉಂಟಾದ ಭೂಕುಸಿತದಿಂದಾಗಿ ಹಲವು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 2ರಿಂದ 14 ವರ್ಷದೊಳಗಿನ ಈ ಮಕ್ಕಳನ್ನು ದತ್ತು ತೆಗೆದುಕೊಂಡು ತಾನು ಅವರ ಪೋಷಕರಾಗುವುದಾಗಿ ಶಿಂಧೆ ಘೋಷಿಸಿದ್ದಾರೆ. ಅಲ್ಲದೇ ದತ್ತು ಪಡೆದ ಬಳಿಕ ಈ ಮಕ್ಕಳನ್ನು ಶ್ರೀಕಾಂತ್ ಶಿಂಧೆ ಫೌಂಡೇಶನ್ ನೋಡಿಕೊಳ್ಳುತ್ತದೆ ಎಂದು ಶಿವಸೇನೆ ತಿಳಿಸಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ
Advertisement
Advertisement
ಶ್ರೀಕಾಂತ್ ಶಿಂಧೆ ಫೌಂಡೇಶನ್ ಅನ್ನು ಏಕನಾಥ್ ಶಿಂಧೆ ಅವರ ಮಗ ನಡೆಸುತ್ತಿದ್ದು, ಈ ಫೌಂಡೇಶನ್ ಮಕ್ಕಳ ಶಿಕ್ಷಣ ಮತ್ತು ಇತರ ವಿಷಯಗಳ ಎಲ್ಲಾ ವೆಚ್ಚಗಳನ್ನು ಭರಿಸುತ್ತದೆ. ಅಲ್ಲದೇ ಪ್ರತೀ ಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿಯನ್ನು (FD) ಇಡಲಾಗುತ್ತದೆ ಎಂದು ಏಕನಾಥ್ ಶಿಂಧೆ ಅವರ ಒಎಸ್‌ಡಿ (OSD) ಮಂಗೇಶ್ ಚಿವ್ಟೆ ಹೇಳಿದ್ದಾರೆ. ಇದನ್ನೂ ಓದಿ: ಪ.ಬಂಗಾಳದಲ್ಲಿಯೂ ನಡೆದಿತ್ತು ಮಹಿಳೆಯರಿಬ್ಬರ ಅರೆಬೆತ್ತಲೆ ಮೆರವಣಿಗೆ- ವೀಡಿಯೋ ವೈರಲ್
Advertisement
Advertisement
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬುಧವಾರ ತಡರಾತ್ರಿ ರಾಯಗಢದಲ್ಲಿ ನಡೆದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 22ಕ್ಕೆ ಏರಿದೆ. ಎನ್‌ಡಿಆರ್‌ಎಫ್ (NDRF) ತಂಡವು ರಾಯಗಢದ ಭೂಕುಸಿತ ಉಂಟಾದ ಪ್ರದೇಶದಲ್ಲಿ ಶನಿವಾರ ಶೋಧಕಾರ್ಯ ಮುಂದುವರೆಸಿದೆ. ಘಟನೆ ನಡೆದ ಸ್ಥಳಕ್ಕೆ ಗುರುವಾರ ಏಕನಾಥ್ ಶಿಂಧೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಇದನ್ನೂ ಓದಿ: ತಂಗಿಯ ಶಿರಚ್ಛೇದ ಮಾಡಿ ರುಂಡ ಹಿಡಿದು ಹೋಗ್ತಿದ್ದ ಅಣ್ಣನ ಬಂಧನ
Web Stories