Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕನ್ನಡಾಂಬೆ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯ – ಉಮೇಶ್‌ ನಿಧನಕ್ಕೆ ಸಿಎಂ, ಗಣ್ಯರಿಂದ ಸಂತಾಪ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕನ್ನಡಾಂಬೆ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯ – ಉಮೇಶ್‌ ನಿಧನಕ್ಕೆ ಸಿಎಂ, ಗಣ್ಯರಿಂದ ಸಂತಾಪ

Bengaluru City

ಕನ್ನಡಾಂಬೆ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯ – ಉಮೇಶ್‌ ನಿಧನಕ್ಕೆ ಸಿಎಂ, ಗಣ್ಯರಿಂದ ಸಂತಾಪ

Public TV
Last updated: November 30, 2025 11:27 am
Public TV
Share
3 Min Read
Umesh 1
SHARE

ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಖ್ಯಾತ ಹಾಸ್ಯನಟ ಉಮೇಶ್ (80) (Umesh) ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು, ಚಿತ್ರರಂಗದ ಗಣ್ಯರು ನಟ-ನಟಿಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಗಳಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

MS Umesh 2

ಸಿದ್ದರಾಮಯ್ಯ
ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. ತಮ್ಮ ಸಹಜ ಅಭಿನಯದ ಮೂಲಕ ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ನಗಿಸುತ್ತಾ, ಕನ್ನಡಾಂಬೆಯ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯಗಳು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. ತಮ್ಮ ಸಹಜ ಅಭಿನಯದ ಮೂಲಕ ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ನಗಿಸುತ್ತಾ, ಕನ್ನಡಾಂಬೆಯ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯಗಳು.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/QTrWOLpxJJ

— Siddaramaiah (@siddaramaiah) November 30, 2025

ಹೆಚ್‌.ಡಿ ಕುಮಾರಸ್ವಾಮಿ
ಪ್ರಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಎಂ.ಎಸ್. ಉಮೇಶ್ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ತಮ್ಮ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ಉಮೇಶ್ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಟರು. ‘ಗುರು ಶಿಷ್ಯರು’, ‘ಹಾಲು ಜೇನು’, ‘ಅಪೂರ್ವ ಸಂಗಮ’ ಸೇರಿ ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ ಉಮೇಶ್ ಅವರ ಅಗಲಿಕೆ ಕನ್ನಡ ಕಲಾಜಗತ್ತಿಗೆ ಬಹುದೊಡ್ಡ ನಷ್ಟ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.

ಪ್ರಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಎಂ.ಎಸ್. ಉಮೇಶ್ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ತಮ್ಮ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ಉಮೇಶ್ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಟರು.

‘ಗುರು ಶಿಷ್ಯರು’, ‘ಹಾಲು ಜೇನು’, ‘ಅಪೂರ್ವ ಸಂಗಮ’ ಸೇರಿ ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ… pic.twitter.com/107LHCGy0I

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 30, 2025

ಬಿ.ವೈ ವಿಜಯೇಂದ್ರ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ತಮ್ಮ ಹಾಸ್ಯಮಯ ಪಾತ್ರಗಳಿಂದ ಜನಪ್ರಿಯರಾಗಿದ್ದ ಶ್ರೀ ಎಂ.ಎಸ್.ಉಮೇಶ್ ರವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಸುಮಾರು ಐದಾರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಶಿಷ್ಟ ಅಭಿನಯ ಮತ್ತು ಸಂಭಾಷಣಾ ಶೈಲಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಅಗಲಿಕೆಯಿಂದ ಚಿತ್ರರಂಗ ತನ್ನ ಒಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರು, ಮತ್ತು ಅಭಿಮಾನಿಗಳಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ.

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ತಮ್ಮ ಹಾಸ್ಯಮಯ ಪಾತ್ರಗಳಿಂದ ಜನಪ್ರಿಯರಾಗಿದ್ದ ಶ್ರೀ ಎಂ.ಎಸ್.ಉಮೇಶ್ ರವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಸುಮಾರು ಐದಾರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಶಿಷ್ಟ ಅಭಿನಯ ಮತ್ತು ಸಂಭಾಷಣಾ ಶೈಲಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಅಗಲಿಕೆಯಿಂದ… pic.twitter.com/Fy6o8JWP1K

— Vijayendra Yediyurappa (@BYVijayendra) November 30, 2025

ಶಿವರಾಜ ತಂಗಡಗಿ
ಉಮೇಶ್ ಅವರು ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟ, ಬಾಲ ಕಲಾವಿದರಾಗಿ ಮಕ್ಕಳ ರಾಜ್ಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಮ್ಮನ್ನು ರಂಜಿಸಿದ್ದಾರೆ. ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಕನ್ನಡದ ಎಲ್ಲಾ ನಾಯಕ ನಟರ ಜೊತೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಉಮೇಶ್ ಅವರದ್ದು, ಗುರು ಶಿಷ್ಯರು, ಗೋಲ್ಮಾಲ್ ರಾಧಾಕೃಷ್ಣ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದಂತಹುದು. ಅಂತಹ ಮನೋಜ್ಞ ಅಭಿನಯದ ಅದ್ಭುತ ಕಲಾವಿದ ಕ್ಯಾನ್ಸರ್ ರೋಗದಿಂದ ನರಳಿ ಪ್ರಾಣ ಬಿಡುವಂತಾಗಿದ್ದು ದುರ್ದೈವ, ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅತ್ಯುತ್ತಮ ಕಲಾವಿದನನ್ನು ಕಳೆದುಕೊಂಡಿದೆ, ಅವರ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬವರ್ಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

TAGGED:Actor Umeshbengalurukannada cinemaMS Umeshprivate hospitalsandalwoodಉಮೇಶ್ಎಂ.ಎಸ್‌ ಉಮೇಶ್‌ಸಿದ್ದರಾಮಯ್ಯಹೆಚ್ ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Wild Life Safari
ದುಬೈನಲ್ಲಿ ಬಿಡುಗಡೆ ಆಯ್ತು ವೈಲ್ಡ್ ಟೈಗರ್ ಸಫಾರಿ ಟೀಸರ್
Cinema Latest Sandalwood Top Stories
kicchana chappale ashwini gowda dhruvanth
Bigg Boss ಸೀಸನ್‌ 12ರ ಕೊನೆಯ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅಶ್ವಿನಿ, ಧ್ರುವಂತ್‌
Cinema Latest Top Stories TV Shows
Monalisa Bhosle
ರೊಮ್ಯಾಂಟಿಕ್‌ ಸಾಂಗ್‌ನಲ್ಲಿ ಕುಂಭಮೇಳದ ನೀಲಿ ಕಂಗಳ ಚೆಲುವೆ – ದಿಲ್‌ ಕದ್ದ ಮೊನಾಲಿಸಾ!
Bollywood Cinema Latest National Top Stories
Niveditha Gowda
ಕಡಲ ಅಲೆಯಲ್ಲಿ ಗುಲಾಬಿ ದಳದಂತೆ ತೇಲಿದ ನಿವೇದಿತಾ!
Cinema Latest Sandalwood Top Stories

You Might Also Like

cricket news India vs New Zealand 1st ODI india need 301 runs to win
Cricket

IND vs NZ | ಭಾರತಕ್ಕೆ 301 ರನ್‌ಗಳ ಗುರಿ ನೀಡಿದ ಕಿವೀಸ್‌

Public TV
By Public TV
20 minutes ago
Raichuru Accident NS Bosaraju
Crime

ಟ್ರ‍್ಯಾಕ್ಟರ್‌ಗೆ ಲಾರಿ ಡಿಕ್ಕಿ, ರೈತ ಸಾವು – ಮಾರ್ಗಮಧ್ಯೆ ಘಟನೆ ಕಂಡು ಸ್ಥಳಕ್ಕೆ ಭೇಟಿ, ಸಾಂತ್ವಾನ ಹೇಳಿದ ಸಚಿವ ಬೋಸರಾಜು

Public TV
By Public TV
36 minutes ago
ayatollah ali khamenei donald trump
Latest

ಇಸ್ರೇಲ್‌, ಅಮೆರಿಕ ವಾಯುನೆಲೆಗಳ ಮೇಲೆ ದಾಳಿ ಮಾಡ್ತೀವಿ: ಟ್ರಂಪ್‌ಗೆ ಇರಾನ್‌ ವಾರ್ನಿಂಗ್‌

Public TV
By Public TV
43 minutes ago
hockey
Crime

ಸ್ಟೇಡಿಯಂನ ಬಾತ್ರೂಮ್‌ನಲ್ಲಿ ಅಪ್ರಾಪ್ತ ಹಾಕಿ ಆಟಗಾರ್ತಿಯ ಮೇಲೆ ರೇಪ್, ಬಳಿಕ ಗರ್ಭಪಾತ – ಕೋಚ್ ಅರೆಸ್ಟ್

Public TV
By Public TV
58 minutes ago
bengaluru girl murder case accused raped her before murder
Bengaluru City

ಬೆಂಗಳೂರು | ತಾಯಿ ಮೇಲಿನ ಸಿಟ್ಟಿಗೆ ಬಾಲಕಿ ಹತ್ಯೆ ಕೇಸ್‌ – ಕೊಲೆಗೂ ಮುನ್ನ ಅತ್ಯಾಚಾರ ಎಸಗಿದ್ದ ಆರೋಪಿ

Public TV
By Public TV
58 minutes ago
bengaluru girl murder case accused raped her before murder
Bengaluru City

ಬೆಂಗಳೂರು | ಸ್ನೇಹಿತನ ಹೆಂಡ್ತಿ ಮೇಲಿನ ಸೇಡಿಗೆ 6 ವರ್ಷದ ಮಗಳ ಹತ್ಯೆ – ಆರೋಪಿ ಅಂದರ್‌

Public TV
By Public TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?