ರಾಮನಗರ: ಸಿಎಂ (Siddaramaiah) ಹೆಸರು ಹಾಳು ಮಾಡಲು ಕೇಂದ್ರ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ. ತನಿಖಾ ಅಧಿಕಾರಿಗಳಿಗೆ ಕೇಂದ್ರ ಬಿಜೆಪಿ (BJP) ಒತ್ತಡ ಹಾಕುತ್ತಿದೆ. ಇದರಲ್ಲಿ ಸಿಎಂ ಹೆಸರು ಹೇಳಿ ಎಂದು ಮುಡಾ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
Advertisement
ಮುಡಾ ಕೇಸ್‌ನಲ್ಲಿ (MUDA Case) ಸಿಎಂ ಕುಟುಂಬಕ್ಕೆ ಲೋಕಾಯುಕ್ತ (Lokayukta) ಕ್ಲೀನ್ ಚಿಟ್ ಕೊಟ್ಟಿರೊ ವಿಚಾರ ಕುರಿತು ರಾಮನಗರ ತಾಲೂಕಿನ ಮಂಚೇಗೌಡನ ಪಾಳ್ಯ ಗ್ರಾಮದಲ್ಲಿ ಮಾತನಾಡಿದ ಅವರು, ತಪ್ಪು ಮಾಡಿದ್ರೆ ತಾನೇ ತಪ್ಪು ಅಂತ ಹೇಳೋದು. ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಮುಡಾ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಈಗಾಗಲೇ ಇ.ಡಿ ತನಿಖೆ ಮಾಡುತ್ತಿದೆ. ಮೊನ್ನೆ 300 ಕೋಟಿ ಎಂದು ಹೇಳಿದ್ದರು. ಸಿಎಂಗೂ ಅದಕ್ಕೂ ಸಂಬಂಧ ಇದ್ಯಾ? ಸುಖಾಸುಮ್ಮನೆ ಎಲ್ಲದಕ್ಕೂ ಸಿಎಂ ಹೆಸರು ತಳುಕು ಹಾಕೋದು ಸರಿಯಲ್ಲ. ಐಟಿ, ಇ.ಡಿ ಅಧಿಕಾರಿಗಳು ಬಿಜೆಪಿ ಪಕ್ಷದ ಕೈಗೊಂಬೆಗಳಾಗಿವೆ. ಹಿಂದೆ ಡಿಕೆಶಿ ವಿರುದ್ಧವೂ ಷಡ್ಯಂತ್ರ ಮಾಡಿದ್ದರು. ಬಿಜೆಪಿಯವರು ಪ್ರಜಾಪ್ರಭುತ್ವ ವಿರೋಧಿಗಳು. ವಿರೋಧಿಗಳನ್ನು ಮುಗಿಸುವ ಹುನ್ನಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ತಕ್ಕ ಉತ್ತರ ಕೊಟ್ಟು ಗಟ್ಟಿಯಾಗಿ ನಿಲ್ಲುತ್ತೇವೆ ಎಂದರು. ಇದನ್ನೂ ಓದಿ: ಐಫೋನ್, ಆ್ಯಂಡ್ರಾಯ್ಡ್ ಬಳಕೆದಾರರಿಗೆ ಪ್ರತ್ಯೇಕ ದರ ನಿಗದಿ
Advertisement
Advertisement
ಇನ್ನೂ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಚರ್ಚೆ ವಿಚಾರ ಕುರಿತು ಮಾತನಾಡಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ತಿಳಿಸಿದ್ದಾರೆ. ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಂಡು ಒಟ್ಟಾಗಿ ಹೋಗುತ್ತೇವೆ. ಬಿಜೆಪಿಯ ಗೊಂದಲಕ್ಕೂ, ನಮಗೂ ಹೋಲಿಕೆ ಮಾಡಬೇಡಿ. ಚುನಾವಣೆ ಪೂರ್ವದಲ್ಲೂ ನಮ್ಮಲ್ಲಿ ಬಣ ರಾಜಕೀಯ ಎಂದು ಚರ್ಚೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಬಹುಮತ ತೆಗೆದುಕೊಂಡಿಲ್ವಾ? ನಾವು ಈಗಲೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನಾವು ಪವರ್‌ನಲ್ಲಿದ್ದೀವೆ, ನಮ್ಮಲ್ಲಿ ಪವರ್ ಶೇರಿಂಗ್ ಮುಖ್ಯ ಅಲ್ಲ. ಈಗ ಬಿಜೆಪಿಯವರ ಪರಿಸ್ಥಿತಿ ನೋಡಿ ಯಾವ ಮಟ್ಟಕ್ಕೆ ಹೋಗಿದೆ? ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಎಲ್ಲರೂ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಬರೋಬ್ಬರಿ 10 ಕೋಟಿ ಭಕ್ತರಿಂದ ಪುಣ್ಯಸ್ನಾನ
Advertisement