Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಫೆ.21, 22 ರಂದು ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ – `ಸಿಎಂ ಕಪ್‌ 2026’ರ ಜೆರ್ಸಿ ಅನಾವರಣ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಫೆ.21, 22 ರಂದು ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ – `ಸಿಎಂ ಕಪ್‌ 2026’ರ ಜೆರ್ಸಿ ಅನಾವರಣ

Bengaluru City

ಫೆ.21, 22 ರಂದು ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ – `ಸಿಎಂ ಕಪ್‌ 2026’ರ ಜೆರ್ಸಿ ಅನಾವರಣ

Public TV
Last updated: January 26, 2026 1:00 pm
Public TV
Share
3 Min Read
CM CUP
SHARE

– ಸಚಿವರು, ಶಾಸಕರು, ಐಎಎಸ್‌, ಐಪಿಎಸ್‌, ಸರ್ಕಾರಿ ನೌಕರರು, ಸೆಲೆಬ್ರೆಟಿಗಳು ಸ್ಪರ್ಧಿಗಳಾಗಿ ಕಣಕ್ಕೆ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ರೀತಿಯ ಸೇವೆ ಸಲ್ಲಿಸುತ್ತಿರುವ ಮಹನೀಯರ ಕ್ರೀಡಾಸಕ್ತಿಯನ್ನು ಪ್ರದರ್ಶಿಸಲು ವೇದಿಕೆ ರೂಪಿಸುವ ಉದ್ದೇಶದೊಂದಿಗೆ ‘ಸಿಎಂ ಕಪ್‌ 2026’ (CM Cup 2026) ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ (Shuttle Badminton Tournament) ಆಯೋಜಿಸಲಾಗಿದೆ. ಕ್ರೀಡಾಕೂಟದ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು.

ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಜಿ ಮತ್ತು ಐಜಿಪಿ ಡಾ.ಎಂ.ಎ ಸಲೀಂ, ಡಿಜಿಪಿ ಅಲೋಕ್ ಕುಮಾರ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ (Bengaluru Police Commissioner) ಸೀಮಂತ್ ಕುಮಾರ್ ಸಿಂಗ್ ಅವರು ತಂಡದ ಜರ್ಸಿ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಡಾ.ಎಂ.ಎ ಸಲೀಂ, ಇದು ಐಪಿಎಲ್ (IPL) ಮಾದರಿಯಲ್ಲಿ ಆಯೋಜನೆ ಮಾಡಿರುವುದು ಬಹಳ ಖುಷಿ ನೀಡಿದೆ. ನಾನೂ ಬ್ಯಾಡ್ಮಿಂಟನ್‌ ಆಡುತ್ತೇನೆ. ಇದು ಕ್ರೀಡಾ ಸ್ಪೂರ್ತಿಯನ್ನು ತೋರಿಸುತ್ತದೆ. ನಮ್ಮ ಇಲಾಖೆಯವರು ಇದರಲ್ಲಿ ಆಡುತ್ತಿರುವುದು ಬಹಳ ಸಂತೋಷ ತಂದಿದೆ. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.

CM CUP 2

ಅಲೋಕ್ ಕುಮಾರ್ ಮಾತನಾಡಿ, ನಾನು ಬ್ಯಾಡ್ಮಿಂಟನ್‌ ಆಡುತ್ತೇನೆ. ಈ ಪಂದ್ಯಾವಳಿಯಲ್ಲಿ ರಾಜಕೀಯ ಮುಖಂಡರು, ಮಾಧ್ಯಮದ ಮಿತ್ರರು, ವೈದ್ಯರು, ಆಡಳಿತಾಧಿಕಾರಿಗಳು ಎಲ್ಲರ ಸಮ್ಮಿಲನ ನೋಡಿ ಬಹಳ ಖುಷಿಯಾಯಿತು. ಬಹುಶಃ ಈ ರೀತಿ ಎಲ್ಲಿಯೂ ನಡೆದಿಲ್ಲ. ಪಂದ್ಯಾವಳಿ ತುಂಬಾ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಅಗ್ರಗಣ್ಯ ಮಾಧ್ಯಮಗಳಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಜಿ.ವೈ ಮಂಜುನಾಥ್‌ ಅವರ ಪರಿಕಲ್ಪನೆಯಲ್ಲಿ ಸಿಎಂ ಕಪ್‌ 2026 ಆಯೋಜಿಸಲಾಗುತ್ತಿದೆ. ಅವರಿಗೆ ಹಲವು ಗೆಳೆಯರು ಸಿಎಂ ಕಪ್‌ 2026ರ ಆಯೋಜನೆಗೆ ಸಹಕಾರ ನೀಡಿದ್ದಾರೆ. ರಾಜ್ಯದಲ್ಲಿಯೇ ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಸಿಎಂ ಕಪ್‌ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿರುವ ಜನಪ್ರತಿನಿಧಿಗಳು, ಐಎಎಸ್‌, ಐಪಿಎಸ್‌, ಕೆಎಎಸ್‌, ಪೊಲೀಸ್‌, ಸಚಿವಾಲಯದ ಅಧಿಕಾರಿಗಳು ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಸ್ಪರ್ಧಿಗಳಾಗಿ ಶಟಲ್‌ ಕೋರ್ಟ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಆ ಮೂಲಕ ಸಿಎಂ ಕಪ್‌ ಒಂದು ಕ್ಷೇತ್ರ ಆಟಗಾರರಿಗೆ ಮಾತ್ರ ಸೀಮಿತವಾಗಿರದೆ, ಎಲ್ಲ ಕ್ಷೇತ್ರದವರನ್ನ ಕ್ರೀಡೆಯಲ್ಲಿ ತೊಡಗಿಸುವ ದೊಡ್ಡ ಸಾಹಸವಾಗಿದೆ.

siddaramaiah dk shivakumar

8 ತಂಡಗಳ ನಡುವೆ ಹಣಾಹಣಿ:
ಸಿಎಂ ಕಪ್‌ ಶಟಲ್‌ ಬ್ಯಾಡ್ಮಿಂಟನ್‌ ಕ್ರೀಡಾಕೂಟದ ಮತ್ತೊಂದು ವಿಶೇಷವೆಂದರೆ ಪ್ರತಿ ಕ್ಷೇತ್ರದವರು ಒಂದೇ ತಂಡದಲ್ಲಿ ಆಡುತ್ತಿಲ್ಲ. ಬದಲಿಗೆ, ಎಲ್ಲರೂ ಒಂದೊಂದು ತಂಡದಿಂದ ಒಟ್ಟಾಗಿ ಕಣಕ್ಕಿಳಿಯುತ್ತಿದ್ದಾರೆ. ಒಟ್ಟು 8 ಫ್ರಾಂಚೈಸಿ ತಂಡಗಳಿರಲಿದ್ದು, ಪ್ರತಿ ತಂಡಕ್ಕೂ ಪ್ರತ್ಯೇಕ ಮಾಲೀಕರಿರಲಿದ್ದಾರೆ. ಜೊತೆಗೆ ಪ್ರತಿ ತಂಡದಲ್ಲೂ ಪುರುಷ ಮತ್ತು ಮಹಿಳಾ ಆಟಗಾರ್ತಿಯರಂತೆ ಒಟ್ಟು 15 ಆಟಗಾರರಿರಲಿದ್ದಾರೆ. ಹಾಗೆಯೇ, ಪ್ರತಿ ತಂಡದಲ್ಲೂ ಜನಪ್ರತಿನಿಧಿಗಳು, ಐಎಎಸ್‌, ಐಪಿಎಸ್‌, ಕೆಎಎಸ್‌, ಪೊಲೀಸ್‌, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಪತ್ರಕರ್ತ ಆಟಗಾರರಿರಲಿದ್ದಾರೆ.

para badminton

ಪ್ರತಿ ತಂಡಕ್ಕೂ ಒಬ್ಬರು ಕ್ಯಾಪ್ಟನ್‌, ಒಬ್ಬರು ವೈಸ್‌-ಕ್ಯಾಪ್ಟನ್‌ ಇರಲಿದ್ದಾರೆ. ಅವರ ಜತೆಗೆ ಚಲನಚಿತ್ರ ರಂಗದ ಒಬ್ಬರು ಐಕಾನ್‌ ಪ್ಲೇಯರ್‌ ಆಗಿರಲಿದ್ದಾರೆ. ಪ್ರತಿ ತಂಡಕ್ಕೂ ತಲಾ ಒಬ್ಬರು ಶಾಸಕರು (ಜನಪ್ರತಿನಿಧಿ), ಐಎಎಸ್‌, ಐಪಿಎಸ್‌, ಪೊಲೀಸ್‌ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿ ಹಾಗೂ ಚಲನಚಿತ್ರ ರಂಗದವರು ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಪಂದ್ಯಾವಳಿಯು ಮೆನ್ಸ್‌ ಸಿಂಗಲ್ಸ್‌, ಮೆನ್ಸ್ ಡಬಲ್ಸ್‌, ವುಮೆನ್‌ ಸಿಂಗಲ್ಸ್‌, ವುಮೆನ್ಸ್ ಡಬಲ್ಸ್‌, ಮಿಕ್ಸೆಡ್‌ ಡಬಲ್ಸ್ ಮತ್ತು ಪವರ್‌ ಡಬಲ್ಸ್‌ ಕೆಟಗರಿಯಲ್ಲಿ ನಡೆಯಲಿದೆ. ಇದರ ಜೊತೆಗೆ ಗೇಮ್‌ ಚೇಂಜರ್‌ ಎನ್ನುವ ಹೊಸ ಪರಿಕಲ್ಪನೆಯನ್ನೂ ಕ್ರೀಡಾಕೂಟದಲ್ಲಿ ಪರಿಚಯಿಸಲಾಗುತ್ತಿದೆ. ಕ್ರೀಡಾಕೂಟದ ವಿಜೇತ ತಂಡಕ್ಕೆ 7 ಲಕ್ಷ ರೂಪಾಯಿ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.

ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಫೆ. 21-22ರಂದು ಕ್ರೀಡಾಕೂಟ:
ಸಿಎಂ ಕಪ್‌ 2026 ಕ್ರೀಡಾಕೂಟವು ಫೆ. 21 (ಶನಿವಾರ) ಮತ್ತು ಫೆ. 22 (ಭಾನುವಾರ)ರಂದು ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ನಲ್ಲಿ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಭಾನುವಾರ (ಜ. 25)ದಂದು ಅರಮನೆ ಮೈದಾನದ ವೈಟ್‌ಪೆಟಲ್ಸ್ ನಲ್ಲಿ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಮಾಡಲಾಯಿತು.

TAGGED:bengaluruBengaluru city policeCelebritiesCM Cup 2026Shuttle Badmintonsiddaramaiahಬೆಂಗಳೂರುಶಟಲ್‌ ಬ್ಯಾಡ್ಮಿಂಟನ್‌ ಕ್ರೀಡಾಕೂಟಸಿಎಂ ಕಪ್‌ 2026ಸಿಎಂ ಕಪ್‌ ಜೆರ್ಸಿಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Dharmendra Mammootty Alka Yagnik
ಧರ್ಮೇಂದ್ರಗೆ ಪದ್ಮವಿಭೂಷಣ; ಮಮ್ಮುಟ್ಟಿ, ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ ಪ್ರಶಸ್ತಿ
Cinema Latest Main Post National
Shivaraj Kumar
ಶಿವಣ್ಣನ ಮನ ಗೆದ್ದ ʻಲವ್ ಯೂ ಮುದ್ದುʼ ಜೋಡಿ – ಹ್ಯಾಟ್ರಿಕ್‌ ಹೀರೋ ಹೇಳಿದ್ದೇನು?
Cinema Latest Sandalwood Top Stories
Ghaarga Film
`ಘಾರ್ಗಾ’ ಚಿತ್ರದ ಟ್ರೈಲರ್ ರಿಲೀಸ್‌ – ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಂಡು ಸಿನಿಪ್ರಿಯರು ಫುಲ್‌ ಖುಷ್‌
Cinema Latest Sandalwood
Darshan 7
ದರ್ಶನ್ ಹೆಚ್ಚುವರಿ ಬ್ಲಾಂಕೆಟ್‌ ಸೌಲಭ್ಯಕ್ಕೆ ಕುತ್ತು – ಕಾರಾಗೃಹ ಡಿಜಿಪಿ ಹೊಸ ಆದೇಶ
Bengaluru City Cinema Latest Sandalwood

You Might Also Like

Republic Day Celebration 2
Bengaluru City

ರಾಜ್ಯದಲ್ಲೆಡೆ 77ನೇ ಗಣರಾಜ್ಯೋತ್ಸವದ ಸಂಭ್ರಮ – ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ

Public TV
By Public TV
3 minutes ago
Stray Dogs 3
Bagalkot

ಪ್ರವಚನ ಮುಗಿಸಿ ಹೊರಟವರ ಮೇಲೆ ಬೀದಿ ನಾಯಿಗಳ ದಾಳಿ – 10ಕ್ಕೂ ಹೆಚ್ಚು ಮಂದಿಗೆ ಗಾಯ

Public TV
By Public TV
12 minutes ago
NAVAMI
Chikkamagaluru

ಚಿಕ್ಕಮಗಳೂರು | ಹಿಟ್ & ರನ್‍ಗೆ ಸಹಕಾರ ಸಂಘದ ಸಿಬ್ಬಂದಿ ಬಲಿ

Public TV
By Public TV
1 hour ago
Lakshmi Hebbalkar
Districts

ಮೊದಲ ಬಾರಿಗೆ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ – ಅದು ನನ್ನ ಭಾಗ್ಯ ಎಂದ ಹೆಬ್ಬಾಳ್ಕರ್‌

Public TV
By Public TV
2 hours ago
Shubhanshu Shukla
Latest

ಗಗನಯಾತ್ರಿ ಶುಭಾಂಶು ಶುಕ್ಲಾಗೆ ʻಅಶೋಕ ಚಕ್ರʼ ಪ್ರದಾನ

Public TV
By Public TV
2 hours ago
Ankola DOG 1
Districts

ಸರ್ಕಾರಿ ಅಧಿಕಾರಿಯ ನಿಸ್ವಾರ್ಥ ಸೇವೆ – ದೇಶದ ಗಡಿ ಕಾಯುತ್ತಿವೆ ಅಂಕೋಲದ 40 ಶ್ವಾನಗಳು!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?