ಮೈಸೂರು: ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯನವರೇ (CM Siddaramaiah) ಅಪರಾಧಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಅವರೇ ಅಪರಾಧಿ. ಮುಡಾ (MUDA Scam) ವಿಚಾರದಲ್ಲಿ ಸೈಟ್ ವಾಪಸ್ ಕೊಟ್ಟು ಸಿಕ್ಕಿಕೊಂಡಿದ್ದಾರೆ. ಇನ್ನೂ ವಾಲ್ಮೀಕಿ ಹಗರಣ (Valmiki Scam) ಸಂಬಂಧ ಇಡಿ ಕೂಡ ಜನರ ದುಡ್ಡು ಚುನಾವಣೆಗೆ ಬಳಕೆಯಾಗಿರುವ ಬಗ್ಗೆ ಪ್ರೆಸ್ ರಿಲೀಸ್ ಮಾಡಿದೆ. ಅಧಿಕಾರಿ ಸೂಸೈಡ್ ಆಗಿದೆ, ಮಂತ್ರಿ ರಾಜೀನಾಮೆ ಆಗಿದೆ. ಇದರ ನೇರ ಹೊಣೆ ಸಿದ್ದರಾಮಯ್ಯ ಅವರೇ ಕಿಡಿಕಾರಿದ್ದಾರೆ.
Advertisement
Advertisement
ಇಲ್ಲಿ ಸಿದ್ದರಾಮಯ್ಯರೇ ಹಣಕಾಸು ಸಚಿವ, ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ದುಡ್ಡು ಆಂಧ್ರ, ಬಳ್ಳಾರಿ ಚುನಾವಣೆಗೆ ಹೋಗಿದೆ. ಇದನ್ನು ಇಡಿ ಹಾಗೂ ಬೇರೆ ಸಂಸ್ಥೆಗಳು ಕೂಡ ಹೇಳಿವೆ. ಮುಖ್ಯಮಂತ್ರಿ ಸ್ಥಾನದಲ್ಲಿರಲು ಸಿಎಂಗೆ ನೈತಿಕತೆ ಇಲ್ಲ. ಹಾಗಾಗಿ ತಕ್ಷಣ ರಾಜೀನಾಮೆ ನೀಡಬೇಕು. ಲೋಕಾಯುಕ್ತವನ್ನೆ ತೆಗೆದುಹಾಕಿದ್ದರು. ಈ ಬಾರಿ ಕೂಡ ಪ್ರಕರಣದಲ್ಲಿ ಪ್ರಭಾವ ಬೀರುತ್ತಿದೆ ಅನ್ನಿಸುತ್ತಿದೆ. ಸೈಟ್ ವಾಪಸ್ ಮಾಡಿದ್ದು ಕಣ್ಮುಂದೆ ಇದೆ. ಅವರ ಕುಟುಂಬದವರೇ ಪತ್ರ ಬರೆದು ವಾಪಸ್ ಕೊಟ್ಟಿದ್ದಾರೆ, ಇದು ಯಾರ ತಪ್ಪು. 1992 ರಿಂದ ಸಿದ್ದರಾಮಯ್ಯ ಒಂದಲ್ಲ ಒಂದು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹೀಗಿರುವಾಗ ಇವರಿಗೆ ಗೊತ್ತಿಲ್ಲದೆ ಈ ರೀತಿ ಆಗಿದೆ ಅನ್ನೋದನ್ನು ಊಹೆ ಮಾಡಲು ಆಗುವುದಿಲ್ಲ. ಹಾಗಾಗಿದ್ದರೆ ರಾಜಕೀಯದಲ್ಲಿ ಇರಲು ಅವರಿಗೆ ಲಾಯಕ್ಕಿಲ್ಲ ಎಂದು ಹೇಳಿದರು.
Advertisement
ಈ ಬಾರಿಯ ಮೈಸೂರು ದಸರಾ ನವರಾತ್ರಿ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಮೆಟ್ಟಿಲು ಹತ್ತಿ ಚಾಮುಂಡೇಶ್ವರಿ ತಾಯಿ ದರ್ಶನ ಮಾಡಿದ್ದು, ಸಾವಿರದ ಒಂದು ಮೆಟ್ಟಿಲು ಹತ್ತಿ ದರ್ಶನ ಪಡೆದುಕೊಂಡಿದ್ದಾರೆ.
Advertisement
ಮೈಸೂರು ದಸರಾ (Mysuru Dasara) ವಿಚಾರವಾಗಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ಚಾಮುಂಡೇಶ್ವರಿ ದರ್ಶನ ಮಾಡಿದ್ದೇನೆ. ರಾಜ್ಯ, ದೇಶಕ್ಕೆ ಒಳ್ಳೆಯದಾಗಬೇಕು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಅಭಿವೃದ್ಧಿ ರಕ್ಷಣೆ ಆಗುತ್ತಿದೆ. ಈ ತಂಡದಲ್ಲಿ ನನಗೂ ಕೆಲಸ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ. ಮೋದಿಯವರು ಉಪವಾಸ ಇದ್ದಾರೆ. ತುಂಬಾ ಜನ ಉಪವಾಸ ಮಾಡಿ ಇಲ್ಲಿಗೆ ಬಂದು ತಾಯಿ ದರ್ಶನ ಮಾಡ್ತಾರೆ. ನಾನು ಎಲ್ಲ ಭಕ್ತರಂತೆ ಬಂದಿದ್ದೇನೆ. ನಾಳೆ ಪ್ರತಿ ವರ್ಷದಂತೆ ಕಾವಾಡಿಗರು, ಮಾವುತರಿಗೆ ಉಪಹಾರ ವ್ಯವಸ್ಥೆ ಮಾಡಲಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ನಾನು ಉಸ್ತುವರಿ ಇದ್ದಾಗ ವೈಭವದ ದಸರಾ ಆಗಿತ್ತು. ಮೊದಲ ಬಾರಿಗೆ ರೈತ, ಮಾಹಿಳಾ ದಸರಾ ಮಾಡಿದ್ದೆ. ಹಳ್ಳಿಯವರಿಗೆ ಮೈಸೂರು ತೋರಿಸುವ ಕೆಲಸ ಮಾಡಿದ್ದೆವು. ಇದನ್ನ ಎಲ್ಲಾ ಸರ್ಕಾರ ಮುಂದುವರೆಸಬೇಕು. ದಸರಾ ಜನರ ದಸರಾ ಆಗಬೇಕು. ಸರ್ಕಾರದ ದಸರಾ ಆಗಬಾರದು. ಹಿಂದೆ ಮಹರಾಜರ ದಸರಾ. ಈಗ ಜನರ ದರ್ಶನ ಆಗಬೇಕು ಎನ್ನುವುದು ಅಪೇಕ್ಷೆ ಇತ್ತು. ಈಗ ಕೆಲವನ್ನು ಸರ್ಕಾರದವರು ಇಟ್ಟುಕೊಂಡಿದ್ದಾರೆ, ಕೆಲವನ್ನ ಬಿಟ್ಟಿದ್ದಾರೆ. ಸರ್ಕಾರದ ಬಳಿ ನಾವು ಮನವಿ ಮಾಡುವುದು ಸಾಂಸ್ಕೃತಿಕವಾಗಿ ಉಳಿಸಕೊಳ್ಳಬೇಕು ಎಂಬ ಕಾರಣಕ್ಕೆ. ಬೆಟ್ಟದಲ್ಲಿ ಭಕ್ತರಿಗೆ ಇನ್ನಷ್ಟು ಯೋಜನೆ ಆಗಬೇಕಿದೆ. ಹೊಸ ಕಟ್ಟಡಗಳಿಂದ ಬೆಟ್ಟಕ್ಕೆ ಹಾನಿಯಾಗುವ ಭಯ ಇದೆ. ಬೆಟ್ಟವನ್ನ ಹಾಗೇ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.