ಬೆಂಗಳೂರು: ಸಿಎಂ ಅವರ ಆಪ್ತ ವಲಯದಲ್ಲಿಯೇ ಅಪಸ್ವರ ಎದ್ದಿದ್ದು, ಒಂದು ಕಡೆ ಬಂಡಾಯದ ಬಿಸಿಯಾದರೆ ಇನ್ನೊಂದು ಕಡೆ ಆಪ್ತರೊಬ್ಬರು ಕಿಡಿಕಾರಿದ್ದಾರೆ.
ಸಿಎಂ ಅವರ ಮಾಧ್ಯಮ ಸಮನ್ವಯಕಾರ ಸದಾನಂದ ನಂದ ಅವರು ಬಹಿರಂಗ ಪತ್ರವನ್ನು ಬರೆದಿದ್ದು, ಪತ್ರದಲ್ಲಿ ನಿಷ್ಠುರಗಳ ಮಳೆ ಸುರಿಸಿದ್ದಾರೆ. ನೀವು 20-20 ಸಿಎಂ ಅಲ್ಲ. ಮಾಜಿ ಸಿಎಂ ಆಗಿದ್ದರೂ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ರಿ. ತಾಯಿ ಕರುಳಿನ ಸಿಎಂ ಆಗಲಿ ಎಂದು ಬಡವರು ಹರಸಿದರು. ದೈವಾನುಗ್ರಹದಿಂದ ಸಿಎಂ ಆಗಿದ್ದೀರಿ. ನಂತರ ಇವೆಲ್ಲವೂ ಹಳಿ ತಪ್ಪಿದೆ. ಸುತ್ತ ಮುತ್ತ ಐಎಎಸ್ ಅಧಿಕಾರಿಗಳನ್ನು ನೀವೇ ಆಯ್ಕೆ ಮಾಡಿದ್ರಿ. ಆದರೆ ಅವರು ಜನರ ಕಷ್ಟಕ್ಕೆ ಸ್ಪಂದಿಸದವರು ಎಂದು ಫೇಸ್‍ಬುಕ್ ನಲ್ಲಿ ಬಹಿರಂಗವಾಗಿ ಬರೆದುಕೊಳ್ಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಸಿಎಂ ಆಪ್ತ ಸಹಾಯಕ ಪ್ರಭು ಬಗ್ಗೆ ಕೂಡ ಅಸಮಾಧಾನ ಹೊರಹಾಕಿರುವ ಸದಾನಂದ, ನಿಮ್ಮ ಎಡ ಬಲದಲ್ಲಿರುವ ಹಕ್ಕ-ಬುಕ್ಕರು ದೊಡ್ಡ ಸ್ಥಿತಿಯಲ್ಲಿದ್ದಾರೆ. ನಿಮಗ್ಯಾಕೆ ಮಂಕು ಕವಿಯಿತು. ಸಿಎಂ ಅವರಿಂದ ಕೆಲಸ ಆಗುತ್ತಿಲ್ಲ ಎಂದು ಶಾಸಕರುಗಳು ಆರೋಪ ಮಾಡಿದ ಬೆನ್ನಲ್ಲೇ ಸ್ವ-ಕ್ಷೇತ್ರ ಚನ್ನಪಟ್ಟಣದ ಜನ ಕೆಲಸವೇ ಆಗಿಲ್ಲ ಎಂಬ ಸತ್ಯ ಬಹಿರಂಗ ಪಡಿಸಿದ್ದಾರೆ. ಸಿಎಂ ಆಂಧ್ರ ಶೈಲಿಯಲ್ಲಿ ಸೆಕ್ಯೂರಿಟಿ ಬಳಸಿ ಅಧಿಕಾರ ಮಾಡುತ್ತಿದ್ದಾರೆ. ಇದರಿಂದ ಸಾಮಾನ್ಯ ಜನತೆಗೆ ನಿಮ್ಮನ್ನ ತಲುಪಲು ಆಗುತ್ತಿಲ್ಲ. ಸಿಎಂ ಹೀಗ್ಯಾಕೆ ಆಗಿದ್ದಾರೆ ಎಂದು ಜನ ಪರಿತಪಿಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
ಸಿಎಂ ನಾಟ್ ರೀಚೆಬಲ್ ಆಗಿದ್ದು, ಕಳೆದ 13 ತಿಂಗಳಿಂದ ಹಲವಾರು ಮಂದಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಿಂತ ಒಳ್ಳೆಯ ಹೆಸರು ಕೊಡಲು ಸಾಧ್ಯವಿಲ್ಲ. ದಯಮಾಡಿ ಕ್ಷಮಿಸಿ ಎಂದು ಫೇಸ್ ಬುಕ್ ನಲ್ಲಿ ಕಡೆಯದಾಗಿ ಉಲ್ಲೇಖ ಮಾಡಿದ್ದಾರೆ.
Advertisement
ಫೇಸ್‍ಬುಕ್ ಪೋಸ್ಟ್ ನಲ್ಲೇನಿದೆ..?
ಸಿಎಂ ಅವರಿಗೊಂದು ಪತ್ರ. ಇದರಲ್ಲಿ ಸತ್ಯಗಳಿವೆ. ನಿಷ್ಠುರಗಳಿವೆ. ಬೇಸರಗಳು ಇವೆ. ಮೊದಲ ಬಾರಿ ನೀವು ಮುಖ್ಯಮಂತ್ರಿಯಾಗಿದ್ದಾಗ ತೋರಿದ ಜನಪರ ಕಾಳಜಿ. ಜನಪ್ರೀತಿ ಬಣ್ಣಿಸಲಸದಳ. ನೀವು ಮಾಜಿ ಮುಖ್ಯಮಂತ್ರಿ ಆಗಿದ್ದಾಗ್ಯೂ ಕೂಡ ನಿಮ್ಮ ಮನೆಗೆ ಮತ್ತು ಸದಾಶಿವನಗರದ ಗೆಸ್ಟ್ ಹೌಸ್ ಗೆ ಅಷ್ಟೊಂದು ಅಸಹಾಯಕರು ಆಗಿದ್ರಿ. ಬಡವರು, ರಾಜಕೀಯ ನಾಯಕರು ಪುಡಾರಿಗಳು, ಅನುಯಾಯಿಗಳು ಬರುತ್ತಿದ್ದರು. ಅದೊಂದು ಸಿಎಂ ಸಾಮ್ರಾಜ್ಯ ಎಂಬಂತೆ ತುಂಬಿ ತುಳುಕುತ್ತಿತ್ತು. ನೀವು ಕೂಡ ಅಷ್ಟೇ ಶುದ್ಧ ಅಂತಃಕರಣದಿಂದ ಬಂದ ಎಲ್ಲರೊಂದಿಗೂ ತಾಳ್ಮೆ ಮತ್ತು ಪ್ರೀತಿಯಿಂದ ಸ್ಪಂದಿಸುತ್ತಿದ್ದೀರಿ. ನಾನೇ ಎದುರಿಗೆ ನಿಂತು ಎಲ್ಲವನ್ನೂ ನೋಡಿದ್ದೇನೆ. ನೀವು ಮಾಜಿ ಮುಖ್ಯಮಂತ್ರಿ ಆಗಿದ್ದಾಗ ಮುಖ್ಯಮಂತ್ರಿಯಾದವರ ಬಳಿಯೂ ಅಷ್ಟೊಂದು ಜನ ಸುಳಿಯುತ್ತಿರಲಿಲ್ಲ. ಅದು ನಿಮ್ಮ ಹೆಗ್ಗಳಿಕೆ ಮತ್ತು ಹೆಮ್ಮೆ. ನಿಮ್ಮ ತಾಯಿ ಕರುಳ ಕಣ್ಣು. ಒಮ್ಮೆ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ಇಡೀ ನಾಡಿನ ಜನರ ಆಶಯ.
ಅವರು ವೋಟು ಹಾಕಲಿಲ್ಲ. 37 ಸೀಟು ಗೆದ್ದಾಗಲೂ ಕೂಡ ನಾಳಿನ ಜನರ ಆಶಯ ಇತ್ತಲ್ಲ. ಆ ಕಾರಣ ಮತ್ತು ದೈವಾನುಗ್ರಹದಿಂದ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದೀರಿ. ನನಗೂ ಬಹಳ ಖುಷಿಯಾಗಿತ್ತು. ಜನ ವಂಚಿಸಿದರೂ ದೇವರು ಕರುಣಿಸಿದರು. ಬಯಸದೇ ಬಂದ ಭಾಗ್ಯ ಎಂಬಂತೆ ನೀವು ಮುಖ್ಯಮಂತ್ರಿ ಪದವಿಗೆ ಬಂದ್ರಿ. ಎಲ್ಲವೂ ಸರಿಯಾಯಿತು ಎಂದು ನಾನೂ ಅಂದುಕೊಂಡೆ. ಆನಂತರ ಎಲ್ಲಾ ಲೆಕ್ಕಾಚಾರಗಳು ಹಳಿತಪ್ಪಿದವು. ನಿಮ್ಮೊಂದಿಗೆ ಒಳ್ಳೆಯ ಐಎಎಸ್ ಅಧಿಕಾರಿಗಳು ಇದ್ದಾರೆ. ಅವರನ್ನು ನೀವೇ ಆಯ್ಕೆ ಮಾಡಿಕೊಂಡಿದ್ದೀರಿ Good. ಅವರ್ಯಾರು ಜನ ಪ್ರೀತಿಸುವ ಅಧಿಕಾರಿಗಳು ಅಲ್ಲ. ಅದು ಬಿಡಿ. ಓಕೆ. ನೀವು ಅಂದರೆ ಮುಖ್ಯಮಂತ್ರಿಗಳು, ಪ್ರಭು ಎಂಬ ಅಧಿಕಾರಿಯನ್ನು ಆಪ್ತ ಸಹಾಯಕರನ್ನಾಗಿ ಮಾಡಿಕೊಂಡ್ರಿ. ಅವರು ತನ್ನ ಬಳಗದ ನರಸಿಂಹಮೂರ್ತಿ ಮಹೇಂದ್ರ ಇಂಥವರನ್ನು ಸಿಎಂ ಕಚೇರಿಗೆ ತಂದು ಕೂರಿಸಿದರು. ಅವರೆಲ್ಲರೂ ಕಳೆದ 13 ತಿಂಗಳಿಂದ ತುಂಬಾ ಚೆನ್ನಾಗಿ ಹಣ ಮಾಡಿದರು. ಇದು ಅರ್ಥವಾಗಲೇ ಇಲ್ಲ. ನಿಮ್ಮ ಎಡ ಬಲದಲ್ಲಿರುವ ಹಕ್ಕ-ಬುಕ್ಕರು ದೊಡ್ಡ ಸ್ಥಿತಿಯಲ್ಲಿ ಇದ್ದಾರೆ. ನಿಮಗ್ಯಾಕೆ ಈ ರೀತಿ ಮಂಕು ಕವಿಯಿತು. ಎಂಬುದು ನನಗೆ ನಿಗೂಢ ಪ್ರಶ್ನೆ.
ನೀವು ಸರಳ ಸಜ್ಜನ. ಚನ್ನಪಟ್ಟಣದ ಒಬ್ಬ ಕಾರ್ಪೊರೇಟರ್ ಫೋನ್ ಮಾಡಿ ಸಿಎಂ ಬಂದಿದ್ದರು. ತೆಲಂಗಾಣ ಸಿಎಂಗೆ ಒಂದು ಶಿಫಾರಸು ಲೆಟರ್ ಕೊಡಬೇಕಾಗಿತ್ತು. ಕುಮಾರಣ್ಣನಿಗೆ ಕೊಟ್ಟಿದ್ದೆ. ಅವರು ಬಂದು ಐದಾರು ದಿನಗಳು ಆಗಿತ್ತು. ಸಿಎಂ ಚನ್ನಪಟ್ಟಣಕ್ಕೆ ಬಂದಿದ್ದಾಗ ಅಲ್ಲೂ ಲೆಟರ್ ಕೊಟ್ಟಿದ್ದೆ. ಆನಂತರ ಸಿಎಂಪಿಎಸ್ ಪ್ರಭು ಮತ್ತು ಆತನ ಪಿಎ ಮಹೇಂದ್ರ ಫೋನ್ ತೆಗೆಯುತ್ತಿಲ್ಲ. ದಯಮಾಡಿ ನನಗೆ ಹೆಲ್ಪ್ ಮಾಡಿ ಎಂದು ಅವರು ಫೋನ್ ಮಾಡಿದ್ದರು. ನಾನು ಅವರಿಗೆ ಫೋನ್ ಮಾಡಿದಾಗ ನೂರಾರು ಲೆಟರ್ ಗಳು ಬರುತ್ತವೆ. ಅದು ಎಲ್ಲಿದೆಯೋ ಗೊತ್ತಿಲ್ಲ ಎಂದರು.
ಇನ್ನೊಂದು ವಿಷಯ ಹೇಳಬೇಕು. ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಎಸ್ಕಾರ್ಟ್ ಪೊಲೀಸ್ ಸಿಬ್ಬಂದಿ ಇರುತ್ತಿದ್ದರು. ಅವರ ಹಿಂದೆ ಸಿಎಂ ಇರುತ್ತಿದ್ದರು. ಎಡ ಬಲದಲ್ಲಿ ಇರುತ್ತಿರಲಿಲ್ಲ. ಕುಮಾರಸ್ವಾಮಿಯವರು ಹೀಗೇಕೆ ಆಂಧ್ರ ಸ್ಟೈಲ್ ನಲ್ಲಿ ಸೆಕ್ಯೂರಿಟಿ ಇಟ್ಟುಕೊಂಡು ಅಧಿಕಾರ ನಡೆಸಿದರು ಎಂಬುದು ನನಗೆ ನಿಜಕ್ಕೂ ಗೊತ್ತಿಲ್ಲ. ಅವರು ಯಾವಾಗಲೂ ಜನಪರ. ಜನ ಕಾಳಜಿಯ ವ್ಯಕ್ತಿತ್ವ. ಹೀಗೇಕೆ ಬದಲಾದರೂ ಎಂಬುದು ಈಗಲೂ ನನ್ನನ್ನು ಕಾಡುತ್ತಿದೆ. ವಂದನೆಗಳು. ಹೇಳಬೇಕು ಎನಿಸಿತು ಹೇಳಿದ್ದೇನೆ.
ಮನಸ್ಸಿನ ಭಾವನೆಗಳನ್ನು ಮುಚ್ಚಿಡಲು ಸಾಧ್ಯವೇ ಇಲ್ಲ. ಈಗಲೂ ಹಲವು ಎಂಎಲ್‍ಎಗಳು, ಸೋತ ಅಭ್ಯರ್ಥಿಗಳು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಅಣ್ಣ ಯಾಕೆ ಹೀಗಾದರೂ ಎಂದು ಕೇಳುತ್ತಾರೆ. ನನ್ನಲ್ಲಿ ಉತ್ತರವಿಲ್ಲ. ನೀವು ದಯಮಾಡಿ ಇದನ್ನು ಅರ್ಥ ಮಾಡಿಕೊಳ್ಳಿ. ನನಗೆ ಯಾವ ಕೆಟ್ಟ ಉದ್ದೇಶವೂ ಇಲ್ಲ. ನಿಮಗೆ ಒಳಿತಾದರೆ ಲಕ್ಷಾಂತರ ಮಂದಿ ಬದುಕುತ್ತಾರೆ. ಅವರೆಲ್ಲರೂ ಕಳೆದ 11 ತಿಂಗಳಿಂದ ಭೇಟಿ ಮಾಡಲು ಶತ ಪ್ರಯತ್ನ ಮಾಡಿದ್ದಾರೆ. ನಿಮಗೆ ರೀಚ್ ಆಗಲು ಸಾಧ್ಯವೇ ಆಗಲಿಲ್ಲ. ಇದಕ್ಕಿಂತ ಒಳ್ಳೆಯ ಹೆಸರೇ ಕೊಡಲು ನನಗೆ ಸಾಧ್ಯವಾಗಲ್ಲ. ದಯಮಾಡಿ ಕ್ಷಮಿಸಿ. ನಾನು ತಪ್ಪು ಹೇಳಿದ್ದರೆ?.