– ನನ್ನ ವಿಚಾರದಲ್ಲಿ ಯಾವ ಶ್ರೀಗಳೂ ಮಾತನಾಡಬಾರದು – ಖಡಕ್ ಎಚ್ಚರಿಕೆ
– ಉದಯಗಿರಿ ಗಲಭೆ ಬಿಜೆಪಿ, ಆರ್‌ಎಸ್‌ಎಸ್ ಕೃಪಾಪೋಷಿತ ಕೃತ್ಯ ಎಂದು ಕಿಡಿ
ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ (CM) ಹಾಗೂ ಮಂತ್ರಿಗಳ ಬದಲಾವಣೆ ಕುರಿತು ಕಾಂಗ್ರೆಸ್ (Congress) ಹೈಕಮಾಂಡ್ ನಿರ್ಧರಿಸಬೇಕು. ಸದ್ಯಕ್ಕೆ ಪಕ್ಷದ ಹೈಕಮಾಂಡ್ ಕಲಬುರಗಿಯಲ್ಲೇ (Kalaburagi) ಇರುವುದರಿಂದ ಎಲ್ಲವೂ ಅವರಿಗೇ ಗೊತ್ತು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ( BK Hariprasad) ವ್ಯಂಗ್ಯವಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಹೈಕಮಾಂಡ್ ಇಲ್ಲಿಯವರೇ ಆಗಿರುವುದರಿಂದ ಎಲ್ಲವೂ ಅವರಿಗೆ ಮಾತ್ರ ಗೊತ್ತು. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ರೀತಿಯ ಚರ್ಚೆಗಳು ನಡೆಯುತ್ತಲೇ ಇವೆ. ರಾಜಕೀಯದಲ್ಲಿ ಇವೆಲ್ಲಾ ಮಾಮೂಲು ಎಂದು ಹೇಳಿದರು. ಇದನ್ನೂ ಓದಿ : ಬಿಜೆಪಿ ಅವಧಿಯ ವಿವಿಗಳಿಗೆ ಕೊಕ್; ಸರ್ಕಾರದ ನಡೆ ಅವಿವೇಕದ ಪರಮಾವಧಿ: ವಿಜಯೇಂದ್ರ
ಸ್ವಾಮೀಜಿಗಳು ಎನಿಸಿಕೊಂಡವರು ರಾಜಕೀಯ ಮಾತಾಡಬಾರದು. ನನ್ನ ವಿಚಾರದಲ್ಲಿ ಯಾವ ಶ್ರೀಗಳು ಸಹ ಮಾತಾಡಬಾರದು ಎಂದು ಖಡಕ್ ವಾರ್ನಿಂಗ್ ನೀಡಿದರು.
ಮೈಸೂರಿನ ಉದಯಗಿರಿ ಗಲಾಟೆ ಕುರಿತು ಪ್ರತಿಕ್ರಿಯಿಸಿ, ಈ ಗಲಾಟೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೃಪಾಪೋಷಿತ ಕೃತ್ಯವಾಗಿದೆ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎನ್ನಲಾಗುತ್ತದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಶಾಂತಿ ಕದಡಲು ಬಹಳ ಪ್ರಯತ್ನ ಮಾಡುತ್ತಿವೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸೃಷ್ಟಿಯಾದ ಅಶಾಂತಿಯ ವಾತಾವರಣದಲ್ಲಿ ಶೇ.90ರಷ್ಟು ಎರಡೇ ತಿಂಗಳಲ್ಲಿ ಕಡಿಮೆಯಾಗಿದೆ. ಯಾರೇ ಆಗಲಿ ಯಾವುದೇ ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಶಾಂತಿ ಕದಡುವ ಯತ್ನಕ್ಕೆ ಕೈ ಹಾಕಿದರೆ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯದ ಗೃಹ ಸಚಿವರಿಗೆ ಮನವಿ ಮಾಡಿದರು. ಇದನ್ನೂ ಓದಿ : ಬಿಯರ್ ರೇಟ್ ಕೇಳಿ ಶಾಕ್ – ಹಾಟ್ ಡ್ರಿಂಕ್ಸ್ ಮೊರೆಹೋದ ಮದ್ಯಪ್ರಿಯರು
ವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ವ್ಯಕ್ತಿ ಸಂಘ ಪರಿವಾರಕ್ಕೆ ಸೇರಿದವನು ಎಂಬುದು ಎಲ್ಲರಿಗೂ ಗೊತ್ತಿದೆ. ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಧರಿಸಿ ಗಲಾಟೆ ಮಾಡುತ್ತಾರೆ. ಹಾಗಾಗಿ, ಉದಯಗಿರಿ ಗಲಾಟೆ ಹೊಸದೇನೂ ಅಲ್ಲ. ಆರ್‌ಎಸ್‌ಎಸ್ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪಿತೃ ಪಕ್ಷ ಆಚರಣೆ ಹೆಸರಿನಲ್ಲಿ ಹೀಗೆಲ್ಲಾ ಮಾಡುತ್ತಾರೆ. ಉದಯಗಿರಿ ಮಾದರಿಯ ಚಿಂತನೆಗಳನ್ನು ಅನುಷ್ಠಾನಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಿಲ್ಲ. ಶಾಂತಿ ಕದಡುವ ಯತ್ನ ಇವರೇ ಮಾಡುತ್ತಿದ್ದಾರೆ. ಈ ಕುರಿತು ತನಿಖೆ ನಡೆಯಬೇಕು ವಾಗ್ದಾಳಿ ನಡೆಸಿದರು.