ಬೆಂಗಳೂರು: ಸ್ಪೀಕರ್ ಮತ್ತು ಕಾನೂನಿನ ಮೂಲಕ ನಾವು ಸರ್ಕಾರವನ್ನು ಉಳಿಸುತ್ತೇವೆ ಎಂದು ಸಿಎಂ ಕ್ಯಾಬಿನೆಟ್ ಸಭೆಯಲ್ಲಿ ಭರವಸೆ ನೀಡಿದ್ದಾರೆ.
ಸಚಿವರು ಆದಷ್ಟು ತಮ್ಮ ವ್ಯಾಪ್ತಿಯ ಶಾಸಕರ ಜೊತೆ ಸಂಪರ್ಕದಲ್ಲೇ ಇರಿ. ಹೇಗೆ ಸರ್ಕಾರ ಉಳಿಯುತ್ತದೆ ಎಂಬ ಚಿಂತೆ ನಿಮಗೆ ಬೇಡ. ಅತೃಪ್ತರ ಓಲೈಕೆಯನ್ನು ಎರಡು ಪಕ್ಷದವರು ಮಾಡುವುದು ಬೇಡ ಎಂದು ಹೇಳಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
Advertisement
Advertisement
ಸ್ಪೀಕರ್ ಮತ್ತು ಕಾನೂನಿನಿಂದ ಸರಕಾರಕ್ಕೆ ದೊಡ್ಡ ರಿಲೀಫ್ ಸಿಗಲಿದೆ. ಯಾವುದೇ ಸಮಸ್ಯೆ ಆಗದ ರೀತಿ ಅಧಿವೇಶನ ನಡೆಯುತ್ತದೆ. ಬಿಜೆಪಿಯವರ ಜೊತೆ ಆಕ್ರೋಶಕ್ಕೆ ಯಾರು ಇಳಿಯಬೇಡಿ. ಎಲ್ಲರೂ ಒಗ್ಗಟ್ಟಾಗಿ ಇರಿ. ಇದೇ ನೀವು ಮಾಡುವ ದೊಡ್ಡ ಸಹಾಯ ಎಂದು ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಬಹಳ ಮಂದಿಗೆ ಇದೇ ಕೊನೆಯ ಕ್ಯಾಬಿನೆಟ್ ಎಂದುಕೊಂಡಿದ್ದೀರಲ್ಲ ಎಂದು ಸಚಿವರನ್ನು ನಗುತ್ತಲೇ ಪ್ರಶ್ನಿಸಿದ ಸಿಎಂ, ಇದು ಕೊನೆ ಸಭೆ ಅಲ್ಲ. ಸರ್ಕಾರ ಸೇಫ್ ಆಗಿ ಇನ್ನೂ ಬಹಳಷ್ಟು ಕ್ಯಾಬಿನೆಟ್ ಸಭೆ ನಡೆಸುತ್ತೇನೆ ಎಂದು ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.