ಬೆಂಗಳೂರು: ಸದಾ ಗಂಭೀರ, ಶಿಸ್ತು, ಕೋಪದ ಮುಖದಿಂದಲೇ ಸಿಎಂ ಯಡಿಯೂರಪ್ಪ ತಮ್ಮ ನಿತ್ಯ ಕೆಲಸಗಳನ್ನು ಮಾಡುತ್ತಾರೆ. ಯಡಿಯೂರಪ್ಪ ನಗೋದೆ ಅಪರೂಪ. ಅವರನ್ನು ದೂರದಿಂದ ನೋಡಿದವರು ಎಷ್ಟು ಕೋಪಿಷ್ಟರು ಯಡಿಯೂರಪ್ಪ ಅಂದುಕೊಳ್ಳುತ್ತಾರೆ. ಹೀಗೆ ಗಂಭೀರವಾಗಿಯೇ ಕಾಣಿಸುವ ಯಡಿಯೂರಪ್ಪ ಅವರು 2020 ಹೊಸ ವರ್ಷವನ್ನ ನಗುಮುಖದಿಂದಲೇ ಸ್ವಾಗತ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಹೌದು. ಯಡಿಯೂರಪ್ಪ ನಗೋದು ತುಂಬಾ ಕಡಿಮೆ. ಎಷ್ಟೋ ಜನ ಯಡಿಯೂರಪ್ಪ ಅವರು ನಗೋದನ್ನ ನೋಡಿಯೇ ಇರೋದಿಲ್ಲ. ಇವತ್ತು ಯಡಿಯೂರಪ್ಪ ಅವರು ಮಾತ್ರ ನಗುಮುಖದಿಂದಾನೆ ದಿನ ಪ್ರಾರಂಭ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿ ಪೊಲೀಸ್ ಅಧಿಕಾರಿಗಳು, ಸರ್ಕಾರ ಹಿರಿಯ ಅಧಿಕಾರಿಗಳು ಸಿಎಂ ಯಡಿಯೂರಪ್ಪಗೆ ಹೊಸ ವರ್ಷದ ಶುಭಾಶಯ ಕೋರಿದರು.
ಅಧಿಕಾರಿಗಳನ್ನ ಆತ್ಮೀಯವಾಗಿ ಮಾತನಾಡಿಸಿ ಶುಭ ಕೋರಿದ ಯಡಿಯೂರಪ್ಪ ನಗುಮುಖದಿಂದ ಎಲ್ಲರ ಕುಶಲೋಪರಿ ವಿಚಾರಿಸಿದರು. ಆಶ್ಚರ್ಯ ಅಂದರೆ ಯಡಿಯೂರಪ್ಪರ ಇವತ್ತಿನ ನಗುಮುಖ ನೋಡಿದ ಕೆಲ ಅಧಿಕಾರಿಗಳು ಶಾಕ್ ಆಗಿದ್ದರು. ಯಡಿಯೂರಪ್ಪನವರು ಹೀಗೆ ನಗ್ತಾರಾ? ಇಷ್ಟು ಜಾಲಿಯಾಗಿ ಇರುತ್ತಾರಾ ಅಂತ. ಆದರೆ ಸದಾ ಇರೋ ರೀತಿ ಇರದ ಯಡಿಯೂರಪ್ಪ ಇಂದು ಡಿಫೆರೆಂಟ್ ಆಗಿ ಇದ್ದಿದ್ದು ಅಧಿಕಾರಿಗಳಲ್ಲಿಯೂ ಸಂತಸ ತಂದಿದೆ.