– ಮೃತರ ಕುಟುಂಬಕ್ಕೆ ಪರಿಹಾರ?
ಮಂಗಳೂರು: ಪೌರತ್ವದ ಕಿಚ್ಚಿನಿಂದ ಶಾಂತವಾಗಿರೋ ಮಂಗಳೂರಿಗೆ ಇಂದು ಸಿಎಂ ಯಡಿಯೂರಪ್ಪ ಆಗಮಿಸಲಿದ್ದಾರೆ. ಉನ್ನತ ಮಟ್ಟದ ಸಭೆ ನಡೆಸಲಿರುವ ಸಿಎಂ, ಗೋಲಿಬಾರ್ ಗೆ ಕಾರಣ ಏನು ಅನ್ನೊ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಜೊತೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ.
Advertisement
ಸಿಎಂ ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಂಗಳೂರಿಗೆ ಆಗಮಿಸಲಿರುವ ಸಿಎಂ, ಸರ್ಕಿಟ್ ಹೌಸ್ ನಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಬಳಿಕ, ಗೋಲಿಬಾರ್‍ನಲ್ಲಿ ಮೃತರಾಗಿದ್ದ ಇಬ್ಬರು ಯುವಕರ ಕುಟುಂಬಕ್ಕೆ ಸಿಎಂ ಯಡಿಯೂರಪ್ಪ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ.
Advertisement
ಉನ್ನತ ಮಟ್ಟದ ಸಭೆಯಲ್ಲಿ ಗೋಲಿಬಾರ್‍ಗೆ ಕಾರಣ ಏನು ಅನ್ನೋದರ ಬಗ್ಗೆ ಸಿಎಂ ಮಾಹಿತಿ ಕಲೆ ಹಾಕಲಿದ್ದಾರೆ. ಈಗಾಗಲೇ ಗೋಲಿಬಾರ್ ಸಂಬಂಧ ಪೊಲೀಸ್ ಆಂತರಿಕ ತನಿಖೆ ನಡೆಯುತ್ತಿದ್ದು, ಸಿಎಂಗೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಪೊಲೀಸರ ಮಾಹಿತಿ ಆಧರಿಸಿ ಮುಂದಿನ ನಿರ್ಧಾರ ಸಿಎಂ ಕೈಗೊಳ್ಳಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ನಿನ್ನೆ ಗೃಹ ಕಚೇರಿ ಕೃಷ್ಣಾದಲ್ಲಿ ಡಿಜಿ, ಗುಪ್ತಚರ ಎಡಿಜಿಪಿ, ಬೆಂಗಳೂರು ಕಮಿಷನರ್, ಹೋಮ್ ಮಿನಿಸ್ಟರ್ ಜೊತೆ ಉನ್ನತ ಸಭೆ ನಡೆಸಿದ್ರು. ಇದನ್ನೂ ಓದಿ: ಕೆಂಡವಾಗಿದ್ದ ಮಂಗ್ಳೂರು ಸ್ವಲ್ಪಮಟ್ಟಿಗೆ ಶಾಂತ – ಗುಂಡಿಗೆ ಬಲಿಯಾದವರ ಅಂತ್ಯಕ್ರಿಯೆ
Advertisement
Advertisement
ಮೊನ್ನೆಯ ಘಟನೆಯಲ್ಲಿ ಸುಮಾರು 33 ಜನ ಪೊಲೀಸರು ಗಾಯಗೊಂಡಿದ್ದಾರೆ. 5-6 ಜನ ಸಾರ್ವಜನಿಕರಿಗೂ ಗಾಯಗಳಾಗಿವೆ. ಇವೆಲ್ಲದ್ರ ಮಾಹಿತಿ ಪಡೆಯಲಿರುವ ಸಿಎಂ ಮುಂದಿನ ಕ್ರಮದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ. ಒಟ್ಟಾರೆ ಸಿಎಂ ಯಡಿಯೂರಪ್ಪ ಭೇಟಿ ಮಹತ್ವ ಪಡೆದಿದ್ದು, ಸಿಎಂ ಭೇಟಿ ಬಳಿಕ ಕಡಲನಾಡು ಸಹಜ ಸ್ಥಿತಿಗೆ ಮರಳುತ್ತಾ ಕಾದುನೋಡಬೇಕಾಗಿದೆ.