10 ಕೋಟಿ ರೂ. ಕೊಟ್ಟರೆ ಗ್ರಾಮಕ್ಕೆ ದಾನಿಗಳ ಹೆಸರು ನಾಮಕರಣ: ಬಿಎಸ್‍ವೈ

Public TV
2 Min Read
CM BSY a 1

 -ಮನೆ ಕಳೆದುಕೊಂಡವರಿಗೆ ಮಾಸಿಕ 5 ಸಾವಿರ ರೂ.

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಉದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಸಿಎಂ ಮಹತ್ವದ ನಿರ್ಧಾರವನ್ನು ತಿಳಿದಿದ್ದು, 10 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಗ್ರಾಮಗಳಿಗೆ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ನೆರೆ ಪೀಡಿತ ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಳ್ಳುವ ಗ್ರಾಮಗಳಿಗೆ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಇತ್ತ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಸಿಎಂ ಅವರು ಮಾಡಿದ್ದ ಮನವಿಗೆ ಸಹಾಯದ ಹಸ್ತಚಾಚಿರುವ 60ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಸಿಎಂ ಅವರಿಗೆ ನೆರವಿನ ಭರವಸೆಯನ್ನು ನೀಡಿದ್ದಾರೆ.

ಪ್ರಮುಖವಾಗಿ ಬ್ರಿಟಾನಿಯಾ ಕಂಪನಿಯು ಆಹಾರ ಪದಾರ್ಥಗಳ ಕೊಡುಗೆ. ಟಿವಿಎಸ್ ಮೋಟಾರು ಸಂಸ್ಥೆ 1 ಕೋಟಿ ರೂ., ಜಿಎಸ್‍ಕೆ ಸಂಸ್ಥೆ ಹಾಗೂ ಯೂನಿವರ್ಸಲ್ ಬಿಲ್ಡರ್ಸ್ ಎಲ್ಲಾ ಜಿಲ್ಲೆಯಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಪುನಶ್ಚೇತನಕ್ಕೆ ಆದ್ಯತೆ ನೀಡುವ ಭರವಸೆಯನ್ನು ನೀಡಿದೆ. ಶಾಹಿ ಎಕ್ಸ್ ಪೋಟ್ರ್ಸ್ ಮಹಿಳೆಯರಿಗೆ ಸೀರೆ ಹಾಗೂ ಉಡುಪುಗಳ ನೆರವು. ಕಾರ್ಪೋರೇಷನ್ ಬ್ಯಾಂಕ್ ಒಂದು ವಾರದಲ್ಲಿ ದೇಣಿಗೆ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ತೀರ್ಮಾನ ಮಾಡಿದೆ. ಟಯೋಟ ಸಂಸ್ಥೆಯಿಂದ 2 ಕೋಟಿ ರೂ., ಲೋಗೋಸ್‍ಗ್ರೂಪ್ 25 ಲಕ್ಷ ರೂ., ಕ್ರೆಡಾಯ್ ಸಂಸ್ಥೆಯಿಂದ 3 ಕೋಟಿ ರೂ. ಹಾಗೂ ವೋಲ್ವೋ ಗ್ರೂಪ್‍ನ ನೌಕರರ ಒಂದು ದಿನದ ಸಂಬಳ ಕೊಡಲು ನಿರ್ಧಾರ ಮಾಡಲಾಗಿದೆ. ಯುನೈಟೆಡ್ ಟೆಕ್ನಾಲಜಿಯಿಂದ ಅಗತ್ಯ ಮೂಲಸೌಕರ್ಯ ಪೂರೈಕೆ, ಜೆಕೆ ಸಿಮೆಂಟ್, ಆಹಾರ ಪದಾರ್ಥಗಳ ನೆರವು ನೀಡುವ ಭರವಸೆ ನೀಡಿದೆ ಎಂಬ ಮಾಹಿತಿ ಲಭಿಸಿದೆ.

ಮಾಸಿಕ 5 ಸಾವಿರ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಮಾಡಿರುವ ಸರ್ಕಾರ, ಪ್ರವಾಹದಲ್ಲಿ ಸಂಪೂರ್ಣ ಮನೆಯನ್ನು ಕಳೆದುಕೊಂಡವರಿಗೆ ಮಾಸಿಕ 5 ಸಾವಿರ ರೂ.ಗಳನ್ನು 10 ತಿಂಗಳ ಅವಧಿಗೆ ನೀಡಲು ಒಪ್ಪಿಗೆ ನೀಡಲಾಗಿದೆ. ಆಯಾ ಜಿಲ್ಲೆಯಗಳ ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಿ ನೆರವು ಪಡೆಯಲು ಸೂಚಿಸಲಾಗಿದೆ.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದ್ದು, 20.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ತಕ್ಷಣ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ನೀಡಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿದೆ. ಎನ್.ಡಿ.ಆರ್.ಎಫ್.ನಿಂದ ಲಭಿಸುವ 6,200 ರೂ.ಗಳೊಂದಿಗೆ ರಾಜ್ಯ ಸರ್ಕಾರದ 3,800 ರೂ.ಗಳನ್ನು ಸೇರಿಸಿ ಒಟ್ಟು 10 ಸಾವಿರ ರೂ.ಗಳ ಪರಿಹಾರವಾಗಿ ನೀಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *