ಬೆಂಗಳೂರು: ಕೊನೆಗೂ ಸಿಎಂ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ವಿಶೇಷವಾಗಿ ಬೆಂಗಳೂರು ಉಸ್ತುವಾರಿಯನ್ನು ಬಿಎಸ್ ಯಡಿಯೂರಪ್ಪನವರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಮತ್ತು ಡಿಸಿಎಂ ಅಶ್ವಥ್ ನಾರಾಯಣ ಪೈಕಿ ಯಾರಿಗೆ ಉಸ್ತುವಾರಿ ಖಾತೆ ಸಿಗುತ್ತದೆ ಎನ್ನುವ ಕುತೂಹಲವಿತ್ತು. ಸರ್ಕಾರ ರಚನೆಯಾದ ಬಳಿಕ ಇಬ್ಬರಿಗೆ ಮನಸ್ತಾಪ ಉಂಟಾಗಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಹೀಗಾಗಿ ಬೆಂಗಳೂರು ಉಸ್ತುವಾರಿ ಯಾರಿಗೆ ಸಿಗಲಿದೆ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಯಡಿಯೂರಪ್ಪನವರು ಯಾರಿಗೂ ಬೆಂಗಳೂರನ್ನು ಹಂಚಿಕೆ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
Advertisement
ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ, ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಜೆಸಿ ಮಾಧುಸ್ವಾಮಿ, ಚಂದ್ರಕಾಂತ ಗೌಡ ಪಾಟೀಲ್, ವಿ. ಸೋಮಣ್ಣ, ಪ್ರಭು ಚೌಹಾಣ್ ಅವರಿಗೆ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.
Advertisement
Advertisement
ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
ಬಿ.ಎಸ್. ಯಡಿಯೂರಪ್ಪ- ಬೆಂಗಳೂರು ನಗರ
ಗೋವಿಂದ ಕಾರಜೋಳ – ಬಾಗಲಕೋಟೆ, ಕಲಬುರಗಿ
ಅಶ್ವಥ್ ನಾರಾಯಣ – ರಾಮನಗರ, ಚಿಕ್ಕಬಳ್ಳಾಪುರ
ಲಕ್ಷ್ಮಣ್ ಸವದಿ – ಬಳ್ಳಾರಿ, ಕೊಪ್ಪಳ
ಈಶ್ವರಪ್ಪ – ಶಿವಮೊಗ್ಗ, ದಾವಣಗೆರೆ
ಆರ್ ಅಶೋಕ್ – ಬೆಂಗಳೂರು ಗ್ರಾಮಾಂತರ, ಮಂಡ್ಯ
Advertisement
ಜಗದೀಶ್ ಶೆಟ್ಟರ್ – ಹುಬ್ಬಳ್ಳಿ -ಧಾರವಾಡ, ಬೆಳಗಾವಿ
ಶ್ರೀರಾಮುಲು – ರಾಯಚೂರು, ಚಿತ್ರದುರ್ಗ
ಸುರೇಶ್ ಕುಮಾರ್ – ಚಾಮರಾಜನಗರ
ವಿ ಸೋಮಣ್ಣ – ಮೈಸೂರು, ಕೊಡಗು
ಸಿಟಿ ರವಿ – ಚಿಕ್ಕಮಗಳೂರು
ಬಸವರಾಜ ಬೊಮ್ಮಾಯಿ – ಉಡುಪಿ, ಹಾವೇರಿ
ಕೋಟಾ ಶ್ರೀನಿವಾಸ್ ಪೂಜಾರಿ – ದಕ್ಷಿಣಕನ್ನಡ
ಜೆಸಿ ಮಾಧುಸ್ವಾಮಿ – ತುಮಕೂರು, ಹಾಸನ
ಚಂದ್ರಕಾಂತ ಗೌಡ ಪಾಟೀಲ್ – ಗದಗ, ವಿಜಯಪುರ
ಎಚ್ ನಾಗೇಶ್ – ಕೋಲಾರ
ಪ್ರಭು ಚೌಹಾಣ್ – ಬೀದರ್, ಯಾದಗಿರಿ
ಶಶಿಕಲಾ ಜೊಲ್ಲೆ- ಉತ್ತರ ಕನ್ನಡ