ನವದೆಹಲಿ: ಕಾಂಗ್ರೆಸ್ಸಿನವರು ತಲೆತಿರುಕರು. ಹೀಗಾಗಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪ ಸಂಬಂಧ ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.
' @BSYBJP @narendramodi ಅವರುಗಳೇ, ಕರ್ನಾಟಕದ ಜನತೆ ಜೊತೆಗೆ ಚೆಲ್ಲಾಟ ಆಡ್ತಾ ಇದ್ದೀರಾ?@AmitShah @nsitharaman ಅವರುಗಳು ನೆರೆ ವೀಕ್ಷಣೆ ಮಾಡಿದ್ದಾರೆ, ಯಾವಾಗ ಹಣ ಬಿಡುಗಡೆ ಮಾಡುತ್ತೀರಿ?
ಕೇಂದ್ರದ ಮಲತಾಯಿ ಧೋರಣೆ ಸಹಿಸಲಾಗದು!
ಸಂಕಷ್ಟದಲ್ಲಿರುವವರ ಆಕ್ರೋಶ ಸ್ಫೋಟಕ್ಕೆ ಮುಂಚೆಯೇ ಎಚ್ಚೆತ್ತುಕೊಳ್ಳಿ ಪರಿಹಾರ ಹಣ ಬಿಡುಗಡೆ ಮಾಡಿ! pic.twitter.com/lxgMFW2wld
— Karnataka Congress (@INCKarnataka) August 16, 2019
ಕೇಂದ್ರ ಸರ್ಕಾರ ಶೀಘ್ರವೇ ಪರಿಹಾರ ಬಿಡುಗಡೆ ಮಾಡಲಿದೆ. ಈಗಾಗಲೇ ಗೃಹ ಮತ್ತು ವಿತ್ತ ಸಚಿವರು ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿಯವರಿಗೂ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ತಾರತಮ್ಯ ಮಾಡುವುದಿಲ್ಲ. ಇಂದು ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಸಭೆಯ ಬಳಿಕ ರಾಜ್ಯಕ್ಕೆ ಪರಿಹಾರ ಧನ ಬಿಡುಗಡೆಯಾಗಲಿದೆ. ಬೇರೆ ಬೇರೆ ಕಡೆಯಿಂದಲೂ ಸಾಕಷ್ಟು ನೆರವು ಬಂದಿದೆ. ಅದನ್ನ ಬಳಿಸಿಕೊಂಡು ಪರಿಹಾರ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಇಂದು ಖಂಡಿತಾ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡುತ್ತೇನೆ. ಈ ವೇಳೆ ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾಳೆ ಅಥವಾ ನಾಳಿದ್ದು ಸಂಪುಟ ವಿಸ್ತರಣೆ ಆಗಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ರಾಜ್ಯದಲ್ಲಿ ಹೈಅಲರ್ಟ್ ವಿಚಾರದ ಕುರಿತು ಮಾತನಾಡಿದ ಸಿಎಂ, ಕೇಂದ್ರದಿಂದ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ. ನಿನ್ನೆ ಸಂಜೆಯಿಂದ ಭದ್ರತೆ ಹೆಚ್ಚಿಸಿದೆ. ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದೆ. ಅಹಿತಕರ ಘಟನೆ ನಡೆಯಲ್ಲ, ನಡಿಯೋಕೆ ಬಿಡಲ್ಲ ಎಂದರು.
ಪ್ರವಾಹದಿಂದ ರಾಜ್ಯದ ಅರ್ಧದಷ್ಟು ಪ್ರದೇಶದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಷ್ಟು ದಿನಗಳಾದರೂ ಪ್ರಧಾನಿ @narendramodi ಅವರು ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿಲ್ಲ,
ಸಂತ್ರಸ್ತರಿಗೆ ಸಾಂತ್ವಾನ ಹೇಳಿಲ್ಲ,
ಅಗತ್ಯ ಪರಿಹಾರ ಘೋಷಸಿಲ್ಲ.
ಕೇಂದ್ರ ಸರ್ಕಾರಕ್ಕೆ ಪ್ರವಾಹ ಸಂತ್ರಸ್ತರ ಬಗೆಗೆ ಯಾವುದೇ ಕಾಳಜಿ ಇಲ್ಲ. –@dineshgrao pic.twitter.com/LvvIgi6eC8
— Karnataka Congress (@INCKarnataka) August 16, 2019