ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ‘ಲೈಟ್ಸ್ ಆರಿಸಿ.. ದೀಪ ಹಚ್ಚಿ’ ಎಂದು ಕರೆ ನೀಡಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾತ್ರಿ 9 ಗಂಟೆಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ದೀಪ ಬೆಳಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ, ದೀಪ ಬೆಳಗುವಂತೆ ಪ್ರಧಾನಿ ಮೋಸಿ ಅವರು ನೀಡಿದ ಕರೆಗೆ ನಮ್ಮ ಜನತೆ ತೋರಿದ ಪ್ರತಿಕ್ರಿಯೆಗೆ ಮೂಕ ವಿಸ್ಮಿತನಾಗಿದ್ದೇನೆ. ಇದೇ ಅಲ್ಲವೇ ಒಗ್ಗಟ್ಟೆಂದರೆ, ಇದೇ ಅಲ್ಲವೇ ಸಾಮರಸ್ಯವೆಂದರೆ? ಕೊರೊನಾ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹೋರಾಡುತ್ತಿರುವ ನಮಗೆ ನೀವಿಂದು ಹಚ್ಚಿದ ಬೆಳಕು ಹೊಸ ಶಕ್ತಿ ನೀಡಿದೆ, ಭರವಸೆಯ ಬೆಳಗು ಮೂಡಿಸಿದೆ. ಧನ್ಯೋಸ್ಮಿ ಎಂದು ನಾಡಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
Advertisement
ದೀಪ ಬೆಳಗುವಂತೆ ಮಾನ್ಯ ಪ್ರಧಾನಿಗಳು ನೀಡಿದ ಕರೆಗೆ ನಮ್ಮ ಜನತೆ ತೋರಿದ ಪ್ರತಿಕ್ರಿಯೆಗೆ ಮೂಕ ವಿಸ್ಮಿತನಾಗಿದ್ದೇನೆ. ಇದೇ ಅಲ್ಲವೇ ಒಗ್ಗಟ್ಟೆಂದರೆ, ಇದೇ ಅಲ್ಲವೇ ಸಾಮರಸ್ಯವೆಂದರೆ?#ಕೊರೊನ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹೋರಾಡುತ್ತಿರುವ ನಮಗೆ ನೀವಿಂದು ಹಚ್ಚಿದ ಬೆಳಕು ಹೊಸ ಶಕ್ತಿ ನೀಡಿದೆ, ಭರವಸೆಯ ಬೆಳಗು ಮೂಡಿಸಿದೆ
ಧನ್ಯೋಸ್ಮಿ pic.twitter.com/duOWE1SWnG
— B.S.Yediyurappa (@BSYBJP) April 5, 2020
Advertisement
ಆರೋಗ್ಯ ಸಚಿವ ಶ್ರೀರಾಮುಲು ಅವರು ಪರಿಶೀಲನಾ ಸಭೆ ಹಾಗೂ ಯಾದಗಿರಿ ಜಿಲ್ಲಾ ಆಸ್ಪತ್ರೆ ಭೇಟಿ ಮುಗಿಸಿ ದಾರಿ ಮಧ್ಯದಲ್ಲಿ 9 ಗಂಟೆಗೆ ರೈತರೊಬ್ಬರ ಮನೆಯಲ್ಲಿ 9 ನಿಮಿಷಗಳ ಕಾಲ ದೀಪ ಬೆಳಗಿದ್ದಾರೆ. ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ದೀಪ ಬೆಳಗುವ ಮೂಲಕ ಸಂಕಷ್ಟದ ವಿರುದ್ಧ ಜಯ ಸಾಧಿಸುವ ಸಂದೇಶ ಸಾರಿದರು.
Advertisement
ಪರಿಶೀಲನಾ ಸಭೆ ಹಾಗೂ ಯಾದಗಿರಿ ಜಿಲ್ಲಾ ಆಸ್ಪತ್ರೆ ಭೇಟಿ ಮುಗಿಸಿ ದಾರಿ ಮಧ್ಯದಲ್ಲಿ ಸರಿಯಾಗಿ ಒಂಬತ್ತು ಗಂಟೆಗೆ ರೈತ ಮಿತ್ರರ ಮನೆಯಲ್ಲಿ ಒಂಬತ್ತು ನಿಮಿಷಗಳ ಕಾಲ ದೀಪ ಹಚ್ಚಲಾಯಿತು. #9PM9minute #9pm9minutes #IndiaFightsCornona pic.twitter.com/kv2Og3Dj0I
— B Sriramulu (@sriramulubjp) April 5, 2020
Advertisement
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ದೀಪ ಬೆಳಗುತ್ತಿರುವ ವಿಡಿಯೋ ಟ್ವೀಟ್ ಮಾಡಿ, ಕೊರೊನಾ ಸವಾಲನ್ನು ಎದುರಿಸಲು ಸಮಸ್ತ ಭಾರತೀಯರು ಒಂದಾಗಿರುವ ಸಂಕೇತವಾಗಿ ಇಂದು ನಮ್ಮ ಕುಟುಂಬದ ಸದಸ್ಯರೊಂದಿಗೆ ಏಕತೆಯ ಮತ್ತು ಭರವಸೆಯ ದೀಪ ಬೆಳಗಿದೆವು ಎಂದು ವರೆದುಕೊಂಡಿದ್ದಾರೆ.