– ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಳ
ಬೆಂಗಳೂರ: ಮದ್ಯ ಸಿಗದಿದ್ದರೂ ಗುಂಡು ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದ್ದು, ಬುಧವಾರದಿಂದ ಮದ್ಯದ ಬೆಲೆ ದುಬಾರಿಯಾಗಲಿದೆ.
ಅಬಕಾರಿ ಸುಂಕ ಹೆಚ್ಚಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಬಜೆಟ್‍ನಲ್ಲಿ ಮದ್ಯದ ದರ ಹೆಚ್ಚಿಸಿದ್ದರು. ಹಾಗಾಗಿ ಎಲ್ಲ ಸ್ಲ್ಯಾಬ್‍ಗಳ ಮೇಲೆ ಶೇ.6 ರಷ್ಟು ಹೆಚ್ಚಳ ಆಗಲಿದೆ. ಸರ್ಕಾರದಿಂದ ಅಧಿಕೃತ ಆದೇಶ ಬಂದಿದ್ದು, ಗೆಜೆಟ್ ಆದೇಶ ಮಾತ್ರ ಬಾಕಿ ಇದೆ.
Advertisement
Advertisement
ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ರೇಟು ಜಾರಿಯಾಗಲಿದೆ. ಏಪ್ರಿಲ್ 14ರ ನಂತರ ಏನಾದ್ರೂ ಮದ್ಯ ಅಂಗಡಿ ಓಪನ್ ಆದ್ರೆ ಜಾಸ್ತಿ ಹಣ ಪಾವತಿಸಬೇಕಾಗುತ್ತದೆ.
Advertisement
ಮದ್ಯ ಅಷ್ಟೇ ಅಲ್ಲದೆ ಇವತ್ತು ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳವಾಗಲಿದೆ. ಸಿಎಂ ಯಡಿಯೂರಪ್ಪ ಅವರು ಬಜೆಟ್‍ನಲ್ಲಿ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.30ರಿಂದ ಶೇ.33ಕ್ಕೆ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.21ರಿಂದ ಶೇ.24ಕ್ಕೆ ಏರಿಸಿದ್ದರು. ಹೀಗಾಗಿ ಮಂಗಳವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ಪೆಟ್ರೋಲ್ ದರ 1.14 ರೂ. ಹಾಗೂ ಡೀಸೆಲ್ ದರ 1.12 ರೂ. ಹೆಚ್ಚಳವಾಗಲಿದೆ.