ರಾಯಚೂರು: ಬಿಜೆಪಿ ಸಂಕಲ್ಪ ಯಾತ್ರೆ ಹಿನ್ನೆಲೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದರು.
ಮಂತ್ರಾಲಯದಲ್ಲಿ ಮಠದ ನಾನಾ ಯೋಜನೆಗಳಿಗೆ ಡಿಜಿಟಲ್ ಚಾಲನೆ ನೀಡಿದರು. ಬಳಿಕ ಮಂತ್ರಾಲಯ ಮಠದಲ್ಲೇ ಪ್ರಸಾದ ಸೇವನೆ ಮಾಡಿದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ ಪಡೆದರು. ಬಳಿಕ ಬಿಜೆಪಿ ಸಂಕಲ್ಪ ಯಾತ್ರೆ ಹಿನ್ನೆಲೆ ಗಿಲ್ಲೆಸುಗೂರಿನಲ್ಲಿ ದಲಿತ ಮುಖಂಡನ ಮನೆಯಲ್ಲಿ ಊಟ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮಂತ್ರಾಲಯಕ್ಕೆ ಭೇಟಿ ನೀಡಿದ ಹಿನ್ನೆಲೆ ದಲಿತ ಮುಖಂಡನ ಮನೆಯಲ್ಲಿ ಸಿಎಂ ಹಾಗೂ ಮಾಜಿ ಸಿಎಂ ಬಿಎಸ್ ವೈ ಚಹ ಕುಡಿದರು. ಇದನ್ನೂ ಓದಿ: ವಾಜಪೇಯಿ ನಿರ್ಮಾಣ ಮಾಡಿದ ರಸ್ತೆಯಲ್ಲಿ ಭಾರತ ಜೋಡೋ ಮಾಡ್ತಿದ್ದಾರೆ: ಕಟೀಲ್ ಕಿಡಿ
ದಲಿತ ಮುಖಂಡ ಅಯ್ಯಪ್ಪ ಮನೆಯಲ್ಲಿ ಚಹ ಕುಡಿದು ಬಿಜೆಪಿ ನಾಯಕರು ಕುಟುಂಬದ ಜೊತೆಗೆ ಕೆಲ ಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕರಾದ ರಾಜು ಗೌಡ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಸಿಎಂ ಜೊತೆಗಿದ್ದರು. ಇದನ್ನೂ ಓದಿ: ಧಾರವಾಡ ಪೇಡಾ, ಪ್ರಹ್ಲಾದ್ ಜೋಶಿಯನ್ನು ಹಾಡಿ ಹೊಗಳಿದ ಅಶ್ವಿನಿ ವೈಷ್ಣವ್