Bengaluru CityDistrictsKarnatakaLatestMain PostSports

ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಲಕ್ಷ್ಯ ಸೇನ್‍ಗೆ ಸಿಎಂ ಗೌರವ

ಬೆಂಗಳೂರು: ಬ್ಯಾಂಕಾಕ್‍ನಲ್ಲಿ ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತ ತಂಡದ ಸದಸ್ಯ ಹಾಗೂ ಬೆಂಗಳೂರಿನಲ್ಲಿದ್ದುಕೊಂಡು ತರಬೇತಿ ಪಡೆದಿರುವ ಲಕ್ಷ್ಯ ಸೇನ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಲಕ್ಷ್ಯ ಸೇನ್ ಅವರಿಗೆ 5 ಲಕ್ಷ ರೂಪಾಯಿ ಮೊತ್ತದ ಬಹುಮಾನದ ಚೆಕ್ ವಿತರಿಸಲಾಯಿತು. ಕ್ರೀಡಾ ಸಚಿವ ಡಾ. ನಾರಾಯಣಗೌಡ, ಸೇನ್ ಅವರ ತರಬೇತುದಾರ ವಿಮಲ್ ಕುಮಾರ ಹಾಗೂ ತಂದೆ ಬೀರೇನ್ ಕುಮಾರ ಸೇನ್ ಹಾಗೂ ತಾಯಿ ನಿರ್ಮಲಾ ಸೇನ್ ಅವರನ್ನು ಕೂಡಾ ಸನ್ಮಾನಿಸಿದರು. ಇದನ್ನೂ ಓದಿ: ಉಮ್ರಾನ್ ಮಲಿಕ್ ಪಾಕಿಸ್ತಾನದಲ್ಲಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರು: ಕಮ್ರಾನ್ ಅಕ್ಮಲ್

14 ಬಾರಿ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿರುವ ಭಾರತ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ತಂಡದಲ್ಲಿ ಬೆಂಗಳೂರಿನ ಆಟಗಾರ ಇರುವುದು ಕರ್ನಾಟಕಕ್ಕೆ ಮತ್ತಷ್ಟು ಹೆಮ್ಮೆ ತರಿಸಿದೆ. ಸದ್ಯ ಬೆಂಗಳೂರಿನ ದ್ರಾವಿಡ್ ಪಡುಕೊಣೆ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ಲಕ್ಷ್ಯ ಸೇನ್ ತರಬೇತಿ ಪಡೆಯುತ್ತಿದ್ದಾರೆ. ಭಾರತದ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯವಾಗಿದ್ದು, ಈ ಐತಿಹಾಸಿಕ ಗೆಲುವು ನಮ್ಮ ದೇಶದ ಯುವಜನತೆಗೆ ಸ್ಫೂರ್ತಿ ನೀಡಲಿದೆ. ಇದನ್ನೂ ಓದಿ: ಮಹಿಳಾ T20 ಚಾಲೆಂಜ್‍ಗೆ ದೀಪ್ತಿ, ಹರ್ಮನ್‍ಪ್ರೀತ್, ಮಂದಾನ ನಾಯಕಿಯರು – 3 ತಂಡ ಪ್ರಕಟಿಸಿದ ಬಿಸಿಸಿಐ

Leave a Reply

Your email address will not be published.

Back to top button