ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಯಾರು..? ಎಚ್‍ಡಿಕೆನಾ…? ಸಿದ್ದರಾಮಯ್ಯನಾ..? ಎಂಬ ಗೊಂದಲ ಮೂಡುತ್ತದೆ. ಯಾಕಂದ್ರೆ ವಿಧಾನಸೌಧದಲ್ಲಿ ಇನ್ನೂ ಬೋರ್ಡ್ ಬದಲಾಗಿಲ್ಲ.
ಯಾಕಂದ್ರೆ ವಿಧಾನಸೌಧದಲ್ಲಿನ ಮೊದಲ ಮಹಡಿಯಲ್ಲಿ ಕೊಠಡಿ ನಂಬರ್ 112ರ ಎದುರುಗಡೆ ಇರುವ ಬೋರ್ಡ್ ನಲ್ಲಿ ಇನ್ನೂ ಏನೂ ಅಪ್‍ಡೇಟ್ ಆಗಿಲ್ಲ. ಈ ಬೋರ್ಡ್ ನೋಡೋರಿಗೆ ಫುಲ್ ಕನ್‍ಫ್ಯೂಶನ್ನು ಆಗುತ್ತೆ.
ರಾಜ್ಯದ ಮುಖ್ಯಮಂತ್ರಿಗಳ ಹೆಸರು ಹಾಗೂ ಅಧಿಕಾರವಧಿ ಮಾಹಿತಿಯುಳ್ಳ ಬೋರ್ಡ್ ನಲ್ಲಿ ಈಗಲೂ ಸಿದ್ದರಾಮಯ್ಯನೇ ಮುಖ್ಯಮಂತ್ರಿ. ಮೂರು ದಿನ ಸಿಎಂ ಆಗಿದ್ದ ಯಡಿಯೂರಪ್ಪನವರ ಹೆಸರೂ ಇಲ್ಲ. ಹಾಲಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೆಸರೂ ಕೂಡ ಇಲ್ಲ. ಅದೂ ಅಲ್ಲದೇ ಆಡಳಿತ ಭಾಷೆ ಕನ್ನಡದಲ್ಲೇ ಮುಖ್ಯಮಂತ್ರಿಗಳ ಹೆಸರಿಲ್ಲ. ಈ ಬಗ್ಗೆ ಸಿಎಸ್, ಕನ್ನಡ ಪ್ರಾಧಿಕಾರಕ್ಕೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ದೂರು ನೀಡಿದ್ದಾರೆ.