ಹಾವೇರಿ: ಯಾವ ಕ್ಲಾಸ್ ನಲ್ಲಿ ಓದ್ತಾ ಇದ್ದೀಯಮ್ಮಾ? ಕ್ಲಾಸ್ ಶುರು ಆಗಿವೆಯಾ? ಸರಿಯಾಗಿ ಓದಮ್ಮಾ.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಅರಟಾಳ ದುಂಡಸಿ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮಕ್ಕಳೊಂದಿಗೆ ನಡೆಸಿದ ಸಂಭಾಷಣೆಯ ಮಾತುಗಳು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಮುಖ್ಯಮಂತ್ರಿಗಳು ತಡಸ್ ಗ್ರಾಮದಿಂದ ಹೊರಟ ನಂತರ ಮಾರ್ಗಮಧ್ಯದ ಅರಟಾಳ- ದುಂಡಸಿ ಗ್ರಾಮಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿಗಳು ಸಿಎಂ ಅವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳೊಂದಿಗೆ ಕೆಲ ಸಮಯ ಮುಖ್ಯಮಂತ್ರಿಗಳು ಮಾತನಾಡಿದರು. ವಿದ್ಯಾರ್ಥಿನಿಯೊಬ್ಬಳನ್ನು ಕರೆದು ಮಾತನಾಡಿಸಿದ ಸಿಎಂ, ಯಾವ ಕ್ಲಾಸಲ್ಲಿ ಓದ್ತಾ ಇದ್ದೀಯಾ? ಕ್ಲಾಸುಗಳು ಆರಂಭವಾಗಿವೆಯಾ? ಏನಾದರೂ ಸಮಸ್ಯೆ ಇದೆಯಾ ಎಂದು ಪ್ರಶ್ನಿಸಿದರು.
ನಂತರ ಚೆನ್ನಾಗಿ ಓದಮ್ಮಾ ಅಂತ ಸಲಹೆ ನೀಡಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಇದನ್ನೂ ಓದಿ: ಸಿಎಂ ಯಾವುದೇ ವಿವಾದ ಸೃಷ್ಟಿಸಿಕೊಳ್ಳದೇ ರಾಜ್ಯ ಮುನ್ನಡೆಸಲಿದ್ದಾರೆ: ಕೋಡಿಮಠ ಶ್ರೀ ಭವಿಷ್ಯ