ಕೊಪ್ಪಳ: ತಮಗೆ ಝೀರೋ ಟ್ರಾಪಿಕ್ ಬೇಡ ಎಂದು ಈ ಹಿಂದೆ ಹೇಳಿದ್ದ ಬವಸರಾಜ ಬೊಮ್ಮಾಯಿ ಅವರು ಇಂದು ಕೊಪ್ಪಳದಲ್ಲಿ ಝೀರೋ ಟ್ರಾಪಿಕ್ ನಲ್ಲಿ ಸಂಚರಿಸುವ ಮೂಲಕ ಕೊಟ್ಟ ಮಾತು ತಪ್ಪಿದ್ದಾರೆ.
Advertisement
ಹೌದು, ಇಂದು ಜನಸ್ವರಾಜ್ ಸಮಾವೇಶ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆ ಸಿಎಂ ಅವರು ಆಗಮಿಸಿದ್ದಾರೆ. ನಗರದಲ್ಲಿ ಸಿಎಂ ಅವರು ಝೀರೋ ಟ್ರಾಫಿಕ್‍ನಲ್ಲಿ ಆಗಮಿಸಿದ ಪರಿಣಾಮ ಟ್ರಾಫಿಕ್ ಜಾಮ್‍ನಿಂದ ಪ್ರಯಾಣಿಕರು ಪರದಾಟ ಅನುಭವಿಸಬೇಕಾಯಿತು. ಇದನ್ನೂ ಓದಿ: ಲೂಟಿಗೊಳಗಾದ ವೃದ್ಧನ ರಕ್ಷಣೆಗೆ ನಿಂತ ಹಿರಿಯ ಪೊಲೀಸ್ ಅಧಿಕಾರಿ
Advertisement
Advertisement
ನಗರದಲ್ಲಿ ಒಂದು ಕಿ.ಮೀ.ವರೆಗೂ ವಾಹನಗಳು ಸಾಲುಗಟ್ಟಿ ನಿಂತವು. ನಗರದ ಸರ್ಕಾರಿ ಆಸ್ಪತ್ರೆ ಬಳಿಯೂ ಟ್ರಾಫಿಕ್ ಜಾಮ್ ಆಯಿತು. ಇದರಿಂದ ರೋಗಿಗಳು ಆಸ್ಪತ್ರೆಗೆ ತೆರಳಲು ಸಮಸ್ಯೆ ಎದುರಾಯಿತು. ಟ್ರಾಫಿಕ್ ಜಾಮ್‍ನಿಂದ ಕ್ಷಣಾರ್ಧದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದರಿಂದ ಪ್ರಯಾಣಿಕರು ಪರದಾಡಿದರು. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ
Advertisement
ನಾನು ಸಿಎಂ ಅಲ್ಲ. ಕಾಮನ್ ಮ್ಯಾನ್, ಸಾಮಾನ್ಯ ರಾಜಕಾರಣಿ ಎಂದು ಎಲ್ಲೆಡೆ ಕಾರ್ಯಕ್ರಮಗಳಲ್ಲಿ ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂತಹ ಸಂದರ್ಭದಲ್ಲಿ ಝೀರೋ ಟ್ರಾಫಿಕ್‍ನಲ್ಲಿ ಓಡಾಡುವ ಅಗತ್ಯವಾದರೂ ಏನಿತ್ತು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.