ತುಮಕೂರು: ಮಾರ್ಗ ಮಧ್ಯೆ ಕಾರ್ ನಿಲ್ಲಿಸಿ, ಖಾಸಗಿ ಹೋಟೆಲ್‍ಗೆ ತೆರಳಿ ಜನ ಸಾಮಾನ್ಯರಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಹಾ ಸವಿದು ಕಾಲ ಕಳೆದಿದ್ದಾರೆ.
Advertisement
ದಾವಣಗೆರೆಗೆ ಹೋಗುವ ಮಾರ್ಗ ಮಧ್ಯೆ ಶಿರಾ ಬಳಿಯ ಖಾಸಗಿ ಹೋಟೆಲ್ ನಲ್ಲಿ ಸಾರ್ವಜನಿಕರಂತೆ ಚಹಾ ಕುಡಿದಿದ್ದಾರೆ. ಚಹಾ ಕುಡಿಯುತ್ತಲೇ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ, ಆಡಳಿತ ವ್ಯವಸ್ಥೆಯನ್ನು ಸಿಎಂ ವಿಚಾರಿಸಿದ್ದಾರೆ. ಚಹಾ ಸವಿದು ಮಾತು ಕತೆ ನಡೆಸಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿಯಂದು 31ನೇ ಜಿಲ್ಲೆ ವಿಜಯನಗರಕ್ಕೆ ಅಧಿಕೃತ ಚಾಲನೆ
Advertisement
Advertisement
ಶಿರಾ ಶಾಸಕ ಡಾ.ರಾಜೇಶ್ ಗೌಡರೊಂದಿಗೆ ಕೆಲಕಾಲ ಚರ್ಚೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್‍ಪಿ ರಾಹುಲ್ ಕುಮಾರ್ ಶಹಾಪುರ್ ಅವರ ಬಳಿ ಜಿಲ್ಲೆಯ ಬಗ್ಗೆ ಸಮಗ್ರ ಮಾಹಿತಿ ಪಡೆದು, ಸೌಹಾರ್ದ ಮಾತುಕತೆ ನಡೆಸಿದರು. ನಿನ್ನೆ ಸಂಜೆ 5:30ರ ವೇಳೆಗೆ ಆಗಮಿಸಿದ್ದ ಸಿಎಂ, ಸುಮಾರು ಅರ್ಧಗಂಟೆಗಳ ಕಾಲ ಚರ್ಚಿಸಿ ದಾವಣಗೆರೆಗೆ ತೆರಳಿದರು.
Advertisement
ದಾವಣಗೆರೆಯಲ್ಲಿ ಶನಿವಾರ ಹಾಗೂ ಭಾನುವಾರ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಭಾಗವಹಿಸಲು ನಿನ್ನೆ ಸಂಜೆ ಸಿಎಂ ದಾವಣಗೆರೆಗೆ ತೆರಳುತ್ತಿದ್ದರು. ಇದೇ ವೇಳೆ ಶಿರಾ ಬಳಿ ಬ್ರೇಕ್ ಪಡೆದು ಸಹಾ ಸೇವಿಸಿದರು.