ಬೆಂಗಳೂರು: ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಭಿಕ್ಷೆ ಬೇಡಿದ್ರಲ್ಲ. ಆ ಹಣ ಎಲ್ಲಿ ಹೋಯ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
Advertisement
`ಶಾಲಾ ಮಕ್ಕಳಿಗೆ ಸರ್ಕಾರದಿಂದ ಶೂ, ಸಾಕ್ಸ್ ಕೊಟ್ಟಿಲ್ಲ. ನಾವು ಭಿಕ್ಷೆ ಬೇಡಿ ಮಕ್ಕಳಿಗೆ ಬಟ್ಟೆ, ಶೂ, ಸಾಕ್ಸ್ ಕೊಡ್ತೀವಿ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: `ಪವಿತ್ರ’ಪ್ರೇಮ ವಿಫಲ – ಯುವಕ ಕೈಕೊಟ್ಟನೆಂದು ಕಾಲೇಜಿನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು
Advertisement
Advertisement
ಸರ್ಕಾರ ಈಗಾಗಲೇ ಸಮವಸ್ತ್ರ, ಶೂಗೆ ಅನುಮೋದನೆ ಕೊಟ್ಟಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಗೆ 130 ಕೋಟಿ ರೂ. ಮೀಸಲಿಟ್ಟಿದ್ದೇವೆ. ಎಲ್ಲ ಸರ್ಕಾರಿ ಶಾಲೆಗಳಿಗೂ ವಿತರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇದರೊಂದಿಗೆ ಶಾಲಾ ಮಕ್ಕಳ ಬಟ್ಟೆ ಸಹ ತಯಾರಾಗುತ್ತಿದ್ದು, ಆದಷ್ಟು ಬೇಗ ವಿತರಣೆ ಮಾಡಲಿದ್ದೇವೆ. ಆದರೆ ಡಿ.ಕೆ ಶಿವಕುಮಾರ್ ಅವರು ಕೋವಿಡ್ ವೇಳೆ 100 ಕೋಟಿ ರೂ. ಭಿಕ್ಷೆ ಬೇಡಿ ಕೊಡ್ತೀವಿ ಅಂದಿದ್ರಲ್ಲ, ಆ ಹಣ ಎಲ್ಲಿ ಹೋಯ್ತು ಎಂದು ಕುಟುಕಿದ್ದಾರೆ.